ETV Bharat / state

ರಾಯಚೂರಿನಲ್ಲಿ ಎಸ್​ಸಿ-ಎಸ್​ಟಿ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಇಳಿಮುಖ - SC, ST in Raichur district

ರಾಯಚೂರು ಜಿಲ್ಲೆಯಲ್ಲಿ ಎಸ್​ಸಿ-ಎಸ್​ಟಿ ಜನರ ಮೇಲಿನ ದೌರ್ಜನ್ಯಗಳು ಈ ವರ್ಷ ಕಡಿಮೆಯಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.

sd
ರಾಯಚೂರಿನಲ್ಲಿ ಎಸ್​ಸಿ,ಎಸ್​ಟಿ ಪಂಗಡದವರ ಮೇಲಿನ ದೌರ್ಜನ್ಯಗಳು ಇಳಿಮುಖ
author img

By

Published : Oct 23, 2020, 9:16 AM IST

ರಾಯಚೂರು: ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೇಲಿನ ದೌರ್ಜನ್ಯ ಪ್ರಕರಣಗಳು ಕಳೆದ ವರ್ಷಕ್ಕಿಂತ ಈ ವರ್ಷ ಕಡಿಮೆಯಾಗಿವೆ ಎಂದು ಸಮಾಜ ಕಲ್ಯಾಣ ಇಲಾಖೆಯ ಅಂಕಿ-ಅಂಶಗಳು ಹೇಳುತ್ತಿವೆ.

ರಾಯಚೂರಿನಲ್ಲಿ ಎಸ್​ಸಿ-ಎಸ್​ಟಿ ಮೇಲಿನ ದೌರ್ಜನ್ಯಗಳು ಇಳಿಮುಖ

2020-21ನೇ ಸಾಲಿನಲ್ಲಿ ಜಿಲ್ಲೆಯ ತಾಲೂಕುಗಳಲ್ಲಿ ದಾಖಲಾದ ಪ್ರಕರಣಗಳು ಸಿಂಧನೂರು 04, ಮಾನ್ವಿ 01, ಲಿಂಗಸಗೂರು 07, ದೇವದುರ್ಗ 08, ರಾಯಚೂರು 11, ಸಿರವಾರ 07, ಮಸ್ಕಿ 02, ಮುದಗಲ್ 01, ಗೊನಾಳ 01, ಸಾ.ಸಮುದ್ರ 01, ಮೆದಕಿನಾಳ 01, ಬಾಗಲಕೋಟೆ 01, ಕಾಳಾಪುರ 01 ಸೇರಿ ಒಟ್ಟು 44 ಪ್ರಣಗಳು ದಾಖಲಾಗಿವೆ. ಹೆಚ್ಚಿನವು ಕೊಲೆ ಬೆದರಿಕೆ, ಜಾತಿ ನಿಂದನೆ ಪ್ರಕಣಗಳಾಗಿದ್ದು, ಪ.ಪಂಗಡಕ್ಕೆ ಸೇರಿದ 18, ಪ.ಜಾತಿ 103 ಜನರಿದ್ದು, ಒಟ್ಟು 123 ಜನ ಸಂತ್ರಸ್ತರಾಗಿದ್ದಾರೆ. 1 ಪ್ರಕರಣಗಳಲ್ಲಿ ಓರ್ವ ಮೃತಪಟ್ಟಿದ್ದು, ಇಲಾಖೆಯಿಂದ ₹ 10265000 ಹಣ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರಿಗೆ ಪರಿಹಾರ ನೀಡಲಾಗಿದೆ.

ಈ ಬಗ್ಗೆ ಮಾತನಾಡಿರುವ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸತೀಶ್, ಜಿಲ್ಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಪ.ಜಾತಿ, ಪ.ಪಂಗಡದ ಜನರ ಮೇಲೆ ದೌರ್ಜನ್ಯ ಪ್ರಕರಣಗಳು ಇಳಿಮುಖವಾಗಿವೆ. ಕಳೆದ ವರ್ಷ 2019-20ನೇ ಸಾಲಿನಲ್ಲಿ 74 ಪ್ರಕರಣಗಳು ದಾಖಲಾಗಿದ್ದು, 160 ಜನ ಸಂತ್ರಸ್ತರಿಗೆ ₹ 18225000 ಇಲಾಖೆಯಿಂದ ಪಾವತಿಸಿದ್ದು, 2020-21ನೇ ಸಾಲಿನಲ್ಲಿ ಇಲ್ಲಿಯವರೆಗೂ 44 ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.