ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಶಿವು ಎನ್ನುವ ಯುವಕನಿಗೆ ಪಿಎಸ್‌ಐ ಮುದ್ದರಂಗ ಸ್ವಾಮಿ, ಪೊಲೀಸ್ ಪೇದೆಗಳಾದ ಬಾಲಪ್ಪ, ಪಂಚಮುಖಿ ಹಾಗೂ ಹೋಮ್ ಗಾರ್ಡ್ ಹನುಮಗೌಡರನ್ನು ಅಮಾತನುಗೊಳಿಸಿ ಎಸ್ಪಿ ಆದೇಶ ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಡ್ಡೆಪ್ಪ ಎನ್ನುವವರ ದೂರಿನ ಆಧಾರದ ಮೇಲೆ ಪಿಎಸ್‌ಐ ಹಾಗೂ ಪೊಲೀಸ್ ಪೇದೆಗಳು, ಹೋಮ್ಗಾರ್ಡ್ಅನ್ನು ಅಮಾನತುಗೊಳಿಸಿ ಮುಂದಿನ ಕಾನೂನು ಕ್ರಮಕ್ಕೆ ಸೂಚಿಸಲಾಗಿದೆ.
ರಾಯಚೂರಿನ ಯುವಕ ಸಾವು ಪ್ರಕರಣ: ಎಸ್ಪಿ ವೇದಮೂರ್ತಿ ಸ್ಪಷ್ಟನೆ ಏನು?
ಹೆಚ್ಚುವರಿ ಎಸ್ಪಿಗೆ ಕಲ್ಲೇಟು:
ಗಬ್ಬೂರಿನ ಯುವಕ ಶಿವು ಪೊಲೀಸರ ಹಲ್ಲೆಯಿಂದ ಮೃತಪಟ್ಟಿದ್ದಾನೆಂದು ಆರೋಪಿಸಿ, ಗ್ರಾಮಸ್ಥರು ಪ್ರತಿಭಟನೆ ನಡೆಸಿ, ವಾಹನ ಜಖಂಗೊಳಿಸಿ, ಕಲ್ಲು ತೂರಾಟ ನಡೆಸಿದ್ರು. ಈ ಕಲ್ಲು ತೂರಾಟದಿಂದ ಹೆಚ್ಚುವರಿ ಎಸ್ಪಿ ಹರಿಬಾಬು ಅವರ ತಲೆಗೆ ಪೆಟ್ಟು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಘಟನೆಯಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸದ್ಯ ಹರಿಬಾಬು ಮರಳಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.