ETV Bharat / state

ಶುಲ್ಕ ಕಟ್ಟುವ ವಿಚಾರಕ್ಕೆ ವಾಗ್ವಾದ: ಖಾಸಗಿ ಶಾಲೆಯವರಿಂದ ವಿದ್ಯಾರ್ಥಿ ಹಾಗೂ ಪೋಷಕರ ಮೇಲೆ ಹಲ್ಲೆ ಆರೋಪ - ವಿದ್ಯಾರ್ಥಿ ಹಾಗೂ ಪೋಷಕರ ಮೇಲೆ ಹಲ್ಲೆ

ಶುಲ್ಕ ಕಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ 10ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿ ಹಾಗೂ ಆತನ ಪೋಷಕರ ಮೇಲೆ ಸಿಂಧನೂರು ಪಟ್ಟಣ ಠಾಣೆಯ ಆವರಣದಲ್ಲಿ ಶಾಲಾ ಮುಖ್ಯಸ್ಥೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Assault
ಹಲ್ಲೆ
author img

By

Published : Feb 4, 2021, 9:12 AM IST

Updated : Feb 4, 2021, 12:31 PM IST

ರಾಯಚೂರು: ಶಾಲೆಯ ಶುಲ್ಕ ಕಟ್ಟುವ ವಿಚಾರಕ್ಕೆ‌ ಖಾಸಗಿ ಶಾಲೆಯ ಸಂಸ್ಥೆ‌ ನಿರ್ದೇಶಕ ಹಾಗೂ ಮುಖ್ಯಸ್ಥೆ ವಿದ್ಯಾರ್ಥಿ ಮತ್ತು ಆತನ ಪೋಷಕರ ಮೇಲೆ‌ ಹಲ್ಲೆ ಮಾಡಿರುವ ಆರೋಪ ಪ್ರಕರಣ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಜಿಲ್ಲೆಯ ಸಿಂಧನೂರು ಪಟ್ಟಣ ಠಾಣೆ ಬಳಿ ಈ ಘಟನೆ ನಡೆದಿದೆ. 10ನೇ ತರಗತಿ ವಿದ್ಯಾರ್ಥಿ ಹಾಗೂ ಆತನ ಪೋಷಕರ ಮೇಲೆ ಪೊಲೀಸ್​ ಠಾಣೆಯ ಆವರಣದಲ್ಲೇ ಶಾಲಾ ಮುಖ್ಯಸ್ಥೆಯು ಕೈಹಿಡಿದು ಎಳೆದಾಡಿ ಅವಾಚ್ಯ ಪದಗಳಿಂದ ನಿಂದಿಸಿ ಕಪಾಳಕ್ಕೆ ಹೊಡೆದು ಹಲ್ಲೆ ನಡೆಸಿದ್ದಾರೆ ಎನ್ನಲಾಗ್ತಿದೆ.

ಖಾಸಗಿ ಶಾಲೆಯವರಿಂದ ವಿದ್ಯಾರ್ಥಿ ಹಾಗೂ ಪೋಷಕರ ಮೇಲೆ ಹಲ್ಲೆ ಆರೋಪ

ಮಾಂಟೆಸ್ಸರಿ ಶಾಲೆಯಲ್ಲಿ ಬಾಲಕ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಇದೇ 2021 ಜ.25 ರಂದು ವಿದ್ಯಾರ್ಥಿಯನ್ನು ಶಾಲೆಗೆ ಕಳುಹಿಸುವ ವಿಚಾರಕ್ಕೆ ಮೌನೇಶ ದೊರೆ, ಸುರೇಶ ಕಟ್ಟಿಮನಿ, ಸಿಂಧನೂರು ಬಿಇಒರೊಂದಿಗೆ ಮಾತನಾಡಿದ ಬಳಿಕ ಶಾಲೆಗೆ ಕಳುಹಿಸಲಾಗಿದೆ. ಅದರಂತೆ ಜ.27 ರಂದು ವಿದ್ಯಾರ್ಥಿಯನ್ನು ಶಾಲೆಗೆ ಕಳುಹಿಸಲಾಗಿದೆ. ಆದ್ರೆ ಶಾಲೆಯಲ್ಲಿ ವಿದ್ಯಾರ್ಥಿಯನ್ನು ಸೇರಿಸಿಕೊಳ್ಳದೆ ನಿಂದಿಸುವ ಮೂಲಕ ವಾಪಸ್ ಕಳುಹಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಈ ಸಂಬಂಧ ವಿದ್ಯಾರ್ಥಿಯ ಪೋಷಕರು 2021 ಫೆ.2ರಂದು ಶಾಲೆ ಶುಲ್ಕ ವಿಚಾರಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಠಾಣೆಗೆ ವಿದ್ಯಾರ್ಥಿ ಹಾಗೂ ಆತನ ಪೋಷಕರನ್ನ ವಿಚಾರಣೆಗೆ ಕಳುಹಿಸಲಾಗಿದೆ. ಜತೆಗೆ ಮಾಂಟೆಸ್ಸರಿ ಶಾಲೆಯ ಕಾಮೆಪಲ್ಲಿ ಸತೀಶ್ ಕುಮಾರ್ ಮತ್ತು ಮುಖ್ಯಸ್ಥೆ ಜ್ಯೋತಿ ವೆಂಕಟರತ್ನರನ್ನ ಕರೆಯಿಸಲಾಗಿದೆ. ಠಾಣೆ ಬಂದಾಗ ಸತೀಶ್ ಕುಮಾರ್ ಹಾಗೂ ಇತರರು ಠಾಣೆಯ ಬಳಿಯೇ ವಿದ್ಯಾರ್ಥಿ ಹಾಗೂ ಆತನ ಪೋಷಕರನ್ನು ನಿಂದಿಸಿ, ಕಪಾಳ ಮೋಕ್ಷ ಮಾಡಿ, ಕೈ ಹಿಡಿದು ಎಳೆದಾಡಿ ಬಲಗೈಗೆ ಗಾಯಗೊಳಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ.

ಈ ಕುರಿತು ವಿದ್ಯಾರ್ಥಿಯ ತಾಯಿ ನಾಗವಿದ್ಯಾ ಮಾಂಟೆಸ್ಸರಿ ಶಾಲೆಯ ಆಡಳಿತ ಮಂಡಳಿಯ ಕಾಮೆಪಲ್ಲಿ ಸತೀಶ್ ಕುಮಾರ್, ಶಾಲೆ ಮುಖ್ಯಸ್ಥೆ ವೆಂಕಟರತ್ನ ವಿರುದ್ಧ ದೂರು ನೀಡಿದ್ದಾರೆ. ಇದರನ್ವಯ ಆರೋಪಿಗಳ ವಿರುದ್ಧ ಕಲಂ 143, 147, 324, 504, 325,354, 504 ಸಹಿತ 149 ಐಪಿಸಿ ಐಡಿಯಲ್ಲಿ ಸಿಂಧನೂರು ನಗರ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ.

ಇದನ್ನೂ ಓದಿ...ಸಿಎ ಅಂತಿಮ ಪರೀಕ್ಷೆಯಲ್ಲಿ ಮಿಂಚಿದ ಗದಗದ ಆದಿತ್ಯ ಅಡಿಗ

Last Updated : Feb 4, 2021, 12:31 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.