ರಾಯಚೂರು: ನಕಲಿ ಬಿತ್ತನೆ ಬೀಜ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನ ಜಿಲ್ಲೆಯ ತುರುವಿಹಾಳ ಪೊಲೀಸರು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ.
ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ತಿಪ್ಪನಾಳ ಗ್ರಾಮದ ರಾಮರಾವ್ ತನ್ನ ಇಬ್ಬರು ಸಹಚರರೊಂದಿಗೆ, ಯಾವುದೇ ಪರವಾನಗಿ ಇಲ್ಲದೆ, ನ್ಯೂ-ರಾಘು-39, ಡಬಲ್ ಗಾರ್ಡ್-11 ಹಾಗು ಬಿಲ್ಲಾ ಎನ್ನುವ ನಕಲಿ ಹೆಸರಿನಲ್ಲಿ ಬೀಜದ ಪೊಟ್ಟಣ ತಯಾರಿಸಿ ಮಾರಾಟ ಮಾಡುತ್ತಿದ್ದ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ತುರುವಿಹಾಳ ಪೊಲೀಸರು ಮೂವರು ಆರೋಪಿಗಳನ್ನ ಸೆರೆ ಹಿಡಿದಿದ್ದಾರೆ. ದಾಳಿಯಲ್ಲಿ 2584 ನಕಲಿ ಬೀಜದ ಪೊಟ್ಟಣಗಳು, 19500 ರೂಪಾಯಿ ಹಣ, ಕ್ರೂಸರ್, ಮಿನಿ ಲಾರಿ ಜಪ್ತಿ ಮಾಡಲಾಗಿದೆ. ರಾಮರಾವ್ ಸಹಚಹರಾದ ಕ್ರೂಸರ್ ಚಾಲಕ ರಾಮಾಂಜೀನಯ್ಯ, ರಂಗರೆಡ್ಡಿಯನ್ನ ಬಂಧಿಸಿದ್ದಾರೆ. ಈ ಕುರಿತು ತುರುವಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.