ETV Bharat / state

ಇಬ್ಬರು ಪ್ರಾಧ್ಯಾಪಕರ 371ಜೆ ಪ್ರಮಾಣಪತ್ರ ರದ್ದು... ಯಾಕೆ ಗೊತ್ತಾ? - ರಾಯಚೂರು ವಿವಿಯಲ್ಲಿ ಪ್ರಮಾಣ ಪತ್ರ ಹಗರಣ

ಕಲಬುರಗಿ, ಬೀದರ್, ಯಾದಗಿರಿ, ಕೊಪ್ಪಳ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳು ಹೈ-ಕ ಭಾಗದ ವ್ಯಾಪ್ತಿಗೆ ಬರುತ್ತವೆ. ಈ ಆರು ಜಿಲ್ಲೆಗಳ ನಿವಾಸಿಗಳು ಸಂವಿಧಾನ ಕಲ್ಪಿಸಿರುವ 371ಜೆ ಹಿಂದುಳಿದ ಭಾಗದ ಅನುಮತಿ ಪತ್ರ ಪಡೆಯಬೇಕಾದರೆ ಕೆಲವೊಂದು ಷರತ್ತುಗಳಿವೆ.

371 ಜೆ ಪ್ರಮಾಣ ಪತ್ರಕ್ಕೆ ಅನರ್ಹರು ಸಲ್ಲಿಸುತ್ತಿದ್ದಾರೆ ಅರ್ಜಿ
author img

By

Published : Sep 12, 2019, 11:27 PM IST

ರಾಯಚೂರು: ಹಿಂದುಳಿದ ಪ್ರದೇಶವೆಂದು ಹೈದರಾಬಾದ್ ಕರ್ನಾಟಕ ಭಾಗದ ಅಭಿವೃದ್ಧಿಗೆ ಕಲಂ 371ಜೆ ಜಾರಿಗೊಳಿಸಿ ವಿಶೇಷ ಸ್ಥಾನಮಾನ ಒದಗಿಸಲಾಗಿದೆ. ಆದರೆ ವಿಶೇಷ ಸ್ಥಾನಮಾನದ ಅನ್ವಯ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ ಎಂಬ ಆರೋಪದ ಮಧ್ಯೆಯೇ ಹೈ-ಕ ಭಾಗದವರಲ್ಲದ ಜನ ತಪ್ಪು ಮಾಹಿತಿ ನೀಡಿ ಈ ಸೌಲಭ್ಯ ದುರ್ಬಳಕೆ ಮಾಡಿಕೊಳ್ಳುತ್ತಿರುವ ಅಂಶ ಬೆಳಕಿಗೆ ಬಂದಿದೆ.

kbl
371ಜೆ ಪ್ರಮಾಣಪತ್ರಕ್ಕೆ ಅನರ್ಹರು ಸಲ್ಲಿಸುತ್ತಿದ್ದಾರೆ ಅರ್ಜಿ

ಕಲಬುರಗಿ, ಬೀದರ್, ಯಾದಗಿರಿ, ಕೊಪ್ಪಳ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳು ಹೈ-ಕ ಭಾಗದ ವ್ಯಾಪ್ತಿಗೆ ಬರುತ್ತವೆ. ಈ ಆರು ಜಿಲ್ಲೆಗಳ ನಿವಾಸಿಗಳು ಸಂವಿಧಾನ ಕಲ್ಪಿಸಿರುವ ಕಲಂ 371ಜೆ ಹಿಂದುಳಿದ ಭಾಗದ ಅನುಮತಿ ಪತ್ರ ಪಡೆಯಬೇಕಾದರೆ ಕೆಲವೊಂದು ಷರತ್ತುಗಳಿವೆ.

371ಜೆ ಪ್ರಮಾಣ ಪತ್ರಕ್ಕೆ ಅನರ್ಹರು ಸಲ್ಲಿಸುತ್ತಿದ್ದಾರೆ ಅರ್ಜಿ

ವಿಶೇಷ ಸ್ಥಾನಮಾನ ಜಾರಿಗೂ ಮುಂಚೆ 10 ವರ್ಷಗಳಿಂದ ಹೆತ್ತವರು ಹೈ-ಕ ಭಾಗದಲ್ಲಿ ವಾಸವಾಗಿದ್ದರೆ ಅಂಥವರ ಮಕ್ಕಳಿಗೆ ಮಾತ್ರ ಈ ಸೌಲಭ್ಯ ದೊರಯಲಿದ್ದು, ಜೊತೆಗೆ ಜನನ, ವ್ಯಾಸಂಗ, ವಂಶಾವಳಿ ಮುಖ್ಯವಾಗಿ ಗಣನೆಗೆ ಬರಲಿದೆ.

ಆದರೆ ಹೈ-ಕ ಭಾಗದವರಲ್ಲದ ಜನ ಅರ್ಜಿ ಸಲ್ಲಿಸುವಾಗ ತಪ್ಪು ಮಾಹಿತಿ ನೀಡಿ ಪ್ರಮಾಣ ಪಡೆಯುತ್ತಿದ್ದು, ಅದರಿಂದ ಸೌಲಭ್ಯ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹೈ-ಕ ಭಾಗದ ಜನರಿಗೆ ಇದರಿಂದ ವಂಚನೆಯಾಗಲಿದ್ದು, ಸರ್ಕಾರಿ ನೌಕರರೇ ಇದರ ವಂಚನೆ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.

ರಾಯಚೂರು ಕೃಷಿ ವಿಶ್ವವಿದ್ಯಾಲಯದ ಸಿಬ್ಬಂದಿ ಇಂತಹದೇ ರೀತಿಯಲ್ಲಿ ಪ್ರಮಾಣಪತ್ರ ಪಡೆದ ಪ್ರಕರಣ ಬೆಳಕಿಗೆ ಬಂದಿದೆ. ಕೃಷಿ ವಿವಿಯಲ್ಲಿ ಪ್ರಾಧ್ಯಾಪಕರಾದ ಜೆ.ಅಶೋಕ, ಡಾ. ಲೋಕೇಶ್ ಎನ್ನುವವರು ನಾವು ಕಳೆದ ಹಲವು ವರ್ಷಗಳಿಂದ ಇಲ್ಲಿಯೇ ಸೇವೆ ಸಲ್ಲಿಸಿದ್ದೇವೆಂದು ಮಾಹಿತಿ ನೀಡಿ ಪ್ರಮಾಣಪತ್ರ ಪಡೆದುಕೊಂಡಿದ್ದಾರೆ. ಆದರೆ ಸಂಘಟನೆಯೊಂದರ ದೂರಿನ ಮೇಲೆ ಹೈ-ಕ ವಿಶೇಷ ಕೋಶದ ಜಂಟಿ ಕಾರ್ಯದರ್ಶಿಗಳ ನಿರ್ದೇಶನದ ಮೇರೆಗೆ ರಾಯಚೂರು ಸಹಾಯಕ ಆಯುಕ್ತರು ಇವರಿಗೆ ನೀಡಿದ್ದ ಪ್ರಮಾಣಪತ್ರಗಳನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಇವರು 2015ರಲ್ಲಿ ಪ್ರಮಾಣಪತ್ರ ಪಡೆದಾಗ ಅದನ್ನು ರದ್ದುಗೊಳಿಸಲಾಗಿತ್ತು. ಪುನಃ 2016ರಲ್ಲಿ ಮತ್ತೆ ಅರ್ಜಿ ಸಲ್ಲಿಸಿ ಪಡೆದಿದ್ದರಂತೆ.

ಇನ್ನು 371ಜೆ ವಿಶೇಷ ಸ್ಥಾನಮಾನದಡಿ ಆಯಾ ಗ್ರೇಡ್ ಹುದ್ದೆಗಳ ಅನುಸಾರ ಶೇ. 75-25, ಶೇ. 80-20 ಹಾಗೂ ಶೇ. 85-15 ಮಾದರಿಯಲ್ಲಿ ಮೀಸಲಾತಿ ಒದಗಿಸಲಾಗುತ್ತದೆ. ಆದರೆ ಕೃಷಿ ವಿವಿಯಲ್ಲಿ ನಾನಾ ವಿಭಾಗದ ಉನ್ನತ ಹುದ್ದೆಗಳು ಖಾಲಿಯಿವೆ. ಈ ಹುದ್ದೆಗಳಿಗೆ ಬಡ್ತಿ ಪಡೆಯುವ ಉದ್ದೇಶದಿಂದ ಹೈ-ಕ ಭಾಗದ ನಾನಾ ಕಾರ್ಯ ನಿರ್ವಹಿಸಿದ್ದೇವೆ ಎಂದು ಮಾಹಿತಿ ನೀಡಿ 20ಕ್ಕೂ ಹೆಚ್ಚು ಜನ ಇದೇ ರೀತಿ 371 ಪ್ರಮಾಣ ಪತ್ರ ಪಡೆದಿದ್ದರಂತೆ. ಆದರೆ ಸೌಲಭ್ಯ ದುರ್ಬಳಕೆಯಾಗುತ್ತದೆ ಎನ್ನುವ ದೂರು ಬಂದಾಗ ಅಷ್ಟೂ ಪ್ರಮಾಣಪತ್ರಗಳನ್ನು ರದ್ದುಗೊಳಿಸಲಾಗಿತ್ತು. ಇದೀಗ ಮತ್ತೆ ಪ್ರಮಾಣ ಪತ್ರ ರದ್ದುಗೊಂಡಿದ್ದರೂ ಪುನಃ ಇಬ್ಬರು ಪ್ರಾಧ್ಯಾಪಕರಿಗೆ ಪ್ರಮಾಣಪತ್ರ ನೀಡಿರುವುದು ಹೈ-ಕ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ.

Intro:ಸ್ಲಗ್: 371 ಜೆ ಪ್ರಮಾಣ ಪತ್ರಕ್ಕೆ ಅನರ್ಹರು ಸಲ್ಲಿಸುತ್ತಿದ್ದಾರೆ ಅರ್ಜಿ
ಫಾರ್ಮೇಟ್: ಪ್ಯಾಕೇಜ್
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 12-೦9-2019
ಸ್ಥಳ: ರಾಯಚೂರು
ಆಂಕರ್: ದೇಶದಲ್ಲಿ ತೀರ ಹಿಂದುಳಿದ ಪ್ರದೇಶವೆಂದು ಬಿಂಬಿತವಾಗಿರುವ ಹೈದರಬಾದ್-ಕರ್ನಾಟಕ ಭಾಗದ ಅಭಿವೃದ್ಧಿಗೆ ಕಲಂ 371 ಜೆ ಜಾರಿಗೊಳಿಸಿ, ವಿಶೇಷ ಸ್ಥಾನಮಾನ ಒದಗಿಸಲಾಗಿದೆ. ಆದ್ರೆ ವಿಶೇಷ ಸ್ಥಾನಮಾನದ ಅನ್ವಯ ಸಮರ್ಪಕ ಅನುಷ್ಠಾನಗೊಳುತ್ತಿಲ್ಲ ಆರೋಪದ ಮಧ್ಯ, ಹೈ-ಕ ಭಾಗದವರಲ್ಲದ ಜನ ತಪ್ಪು ಮಾಹಿತಿ ನೀಡಿ ಈ ಸೌಲಭ್ಯ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಅಂಶ ಬೆಳಕಿಗೆ ಬಂದಿದೆ.
Body:ವಾಯ್ಸ್ ಓವರ್.1: ಕಲಬುರಗಿ, ಬೀದರ್, ಯಾದಗಿರಿ, ಕೊಪ್ಪಳ, ಬಳ್ಳಾರಿ ಹಾಗೂ ರಾಯಚೂರು ಆರು ಜಿಲ್ಲೆಗಳು ಹೈ-ಕ ಭಾಗದ ವ್ಯಾಪ್ತಿಗೆ ಬರುತ್ತೇವೆ. ಈ ಆರು ಜಿಲ್ಲೆಗಳ ನಿವಾಸಿಗಳು ಸಂವಿಧಾನ ಕಲ್ಪಿಸಿರುವ 371 ಜೆ ಪ್ರಮಾಣ ಪಡೆಯಬೇಕಾದರೆ ಕೆಲವೊಂದು ಷರತ್ತುಗಳಿವೆ. ವಿಶೇಷ ಸ್ಥಾನಮಾನ ಜಾರಿಗೂ ಮುಂಚೆ 10 ವರ್ಷಗಳಿಂದ ಹೆತ್ತವರು ಹೈ-ಕ ಭಾಗದಲ್ಲಿ ವಾಸವಾಗಿದ್ದರೆ ಅಂಥವರ ಮಕ್ಕಳಿಗೆ ಮಾತ್ರ ಈ ಸೌಲಭ್ಯ ದೊರಯಲಿದ್ದು, ಜತೆಗೆ ಜನನ, ವ್ಯಾಸಂಗ, ವಂಶಾವಳಿ ಮುಖ್ಯವಾಗಿ ಗಣನೆಗೆ ಬರಲಿದೆ. ಆದ್ರೆ ಹೈ-ಕ ಭಾಗದವರಲ್ಲದ ಜನ ಅರ್ಜಿ ಸಲ್ಲಿಸುವಾಗ ತಪ್ಪು ಮಾಹಿತಿ ನೀಡಿ ಪ್ರಮಾಣ ಪಡೆಯುತ್ತಿದ್ದು, ಅದರಿಂದ ಸೌಲಭ್ಯ ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಹೈ-ಕ ಭಾಗದ ಜನರಿಗೆ ವಂಚನೆಯಾಗಲಿದ್ದು, ಸರಕಾರಿ ನೌಕರರೇ ಇದ್ದನ ವಂಚನೆ ಮಾಡುತ್ತಿರುವ ಅಂಶ ಬೆಳಕಿಗೆ ಬಂದಿದೆ.
ವಾಯ್ಸ್ ಓವರ್.2: ರಾಯಚೂರು ಕೃಷಿ ವಿಶ್ವವಿದ್ಯಾಲಯದ ಸಿಬ್ಬಂದಿ ಇಂತಹದೆ ರೀತಿಯಲ್ಲಿ ಪ್ರಮಾಣ ಪತ್ರ ಪಡೆದ ಪ್ರಕರಣ ಬೆಳಕಿಗೆ ಬಂದಿದೆ. ಕೃಷಿ ವಿವಿಯಲ್ಲಿ ಪ್ರಾಧ್ಯಾಪಕರಾದ ಜೆ.ಅಶೋಕ, ಡಾ.ಲೋಕೇಶ್ ಎನ್ನುವವರು ನಾವು ಕಳೆದ ಹಲವು ವರ್ಷಗಳಿಂದ ಇಲ್ಲಿಯೇ ಸೇವೆ ಸಲ್ಲಿಸಿದ್ದೇವೆಂದು ಮಾಹಿತಿ ನೀಡಿ ಪ್ರಮಾಣ ಪತ್ರವನ್ನ ಪಡೆದುಕೊಂಡಿದ್ದಾರೆ. ಆದ್ರೆ ಸಂಘಟನೆಯೊಂದರ ದೂರಿನ ಮೇಲೆ ಹೈ-ಕ ವಿಶೇಷ ಕೋಶದ ಜಂಟಿ ಕಾರ್ಯದರ್ಶಿಗಳ ನಿರ್ದೇಶನದ ಮೇರೆಗೆ ರಾಯಚೂರು ಸಹಾಯಕ ಆಯುಕ್ತರು ಇವರಿಗೆ ನೀಡಿದ್ದ ಪ್ರಮಾಣ ಪತ್ರಗಳನ್ನು ರದ್ದುಗೊಳಿಸಿ ಆದೇಶ ಮಾಡಿದ್ದಾರೆ. ಅಲ್ಲದೇ ಇವರು 2015ರಲ್ಲಿ ಪ್ರಮಾಣ ಪತ್ರ ಪಡೆದಾಗ ಅದನ್ನು ರದ್ದುಗೊಳಿಸಲಾಗಿತ್ತು. ಪುನಃ 2016ರಲ್ಲಿ ಮತ್ತೆ ಅರ್ಜಿ ಸಲ್ಲಿಸಿ ಪಡೆದಿದ್ದರು. ಆದ್ರೆ ರದ್ದುಗೊಳಿಸಿದ್ರು, ತಪ್ಪು ಮಾಹಿತಿ ನೀಡಿ ಸೌಲಭ್ಯವನ್ನ ದುರ್ಬಳಕೆ ಮಾಡಿಕೊಳ್ಳುತ್ತಿರುವ ಆತಂಕ ವ್ಯಕ್ತವಾಗಿದೆ.
ವಾಯ್ಸ್ ಓವರ್.3: ಇನ್ನೂ ಹೈ-ಕ ಭಾಗದಲ್ಲಿ ವಿವಿಧ ಸರಕಾರಿ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ನಾನಾ ಜಿಲ್ಲೆಗಳಿಂದ ಬಂದಿದ್ದಾರೆ. ವಿಶೇಷ ಸ್ಥಾನಮಾನದಿಂದ ಮೀಸಲಾತಿ ಸೌಲಭ್ಯದಿಂದ ಬಡ್ತಿ ವಿಚಾರದಲ್ಲಿ ಅವರಿಗೆ ಹಿನ್ನಡೆ ಆಗುತ್ತಿದ್ದು, ಅಂತಹವರು ಶೇ.25, 20, 15ರಷ್ಟು ಮೀಸಲಾತಿಯಲ್ಲಿಯೇ ಬಡ್ತಿ ಪಡೆಯಬೇಕು. ಆದ್ರೆ ಬೆರಳೆಣಿಕೆಯಷ್ಟು ಉನ್ನತ ಹುದ್ದೆಗಳಿದ್ದು, ಅವು ಸ್ಥಳೀಯರಿಗೆ ಸಿಗುವ ಕಾರಣ ಇಂಥ ನಾವು ಸ್ಥಳೀಯರೇ ಎಂಬ ಕೊಟಾದಡಿ ಸೌಲಭ್ಯ ಪಡೆಯುವ ಹುನ್ನಾರ ನಡೆಸಲಾಗುತ್ತಿದೆ. ಹಲವು ವರ್ಷಗಳಿಂದ ಈ ಭಾಗದಲ್ಲಿಯೇ ಸೇವೆ ಮಾಡುತ್ತಿದ್ದೇವೆ. ನಮ್ಮನ್ನೂ ಹೈ-ಕ ಭಾಗದವರೆಂದು ಪರಿಗಣಿಸಿ ಎಂಬ ವಾದ ಮಂಡಿಸುತ್ತಿದ್ದಾರೆ. ಅಲ್ಲದೇ, ಸದ್ದಿಲ್ಲದೇ ಅದೆ ಮಾನದಂಡದಡಿ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ. ಆದ್ರೆ ನಿಯಮಗಳ ಪ್ರಕಾರ ಇದು ಕಾನೂನು ಬಾಹಿರವಾಗಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.
ವಾಯ್ಸ್ ಓವರ್.4: ಇನ್ನೂ 371 ಜೆ ವಿಶೇಷ ಸ್ಥಾನಮಾನದಡಿ ಆಯಾ ಗ್ರೇಡ್ ಹುದ್ದೆಗಳನ್ನು ಅನುಸಾರ ಶೇ.75-25, ಶೇ.80-20 ಹಾಗೂ ಶೇ.85-15 ಮಾದರಿಯಲ್ಲಿ ಮೀಸಲಾತಿ ಒದಗಿಸಲಾಗುತ್ತದೆ. ಆದ್ರೆ ಕೃಷಿ ವಿವಿಯಲ್ಲಿ ನಾನಾ ವಿಭಾಗದ ಉನ್ನತ ಹುದ್ದೆಗಳು ಖಾಲಿವೆ. ಈ ಹುದ್ದೆಗಳಿಗೆ ಬಡ್ತಿ ಪಡೆಯುವ ಉದ್ದೇಶದಿಂದ ಹೈ-ಕ ಭಾಗದ ನಾನಾ ಕಾರ್ಯ ನಿರ್ವಹಿಸಿದ್ದೇವೆ ಮಾಹಿತಿ ನೀಡಿ 20 ಕ್ಕೂ ಜನ ಇದೇ ರೀತಿ 371 ಪ್ರಮಾಣ ಪತ್ರ ಪಡೆದಿದ್ದರು. ಸೌಲಭ್ಯ ದುರ್ಬಳಕೆಯಾಗುತ್ತದೆ ಎನ್ನುವ ದೂರು ಬಂದಾಗ ಅಷ್ಟೂ ಪ್ರಮಾಣಪತ್ರಗಳನ್ನು ರದ್ದುಗೊಳಿಸಲಾಗಿತ್ತು. ಇದೀಗ ಮತ್ತೆ ಪ್ರಮಾಣ ಪತ್ರ ರದ್ದುಗೊಂಡಿದ್ರೂ, ಪುನಃ ಇಬ್ಬರು ಪ್ರಾಧ್ಯಾಪಕರ ಪ್ರಮಾಣ ಪತ್ರ ನೀಡಿರುವುದು ಹೈ-ಕ ಭಾಗದ ಜನತೆ ವಂಚನೆ ಮಾಡುವಂತರಿಗೆ ದಿಟ್ಟ ಕ್ರಮ ಕೈಗೊಳ್ಳಬೇಕು ಎನ್ನುವುದು ಪ್ರಜ್ಞಾನವಂತರ ಒತ್ತಾಸೆಯಾಗಿದೆ.

Conclusion:ಬೈಟ್.1: ಸಂತೋಷ ಎಸ್. ಕಾಮಗೌಡ, ಸಹಾಯಕ ಆಯುಕ್ತರು, ರಾಯಚೂರು
ETV Bharat Logo

Copyright © 2025 Ushodaya Enterprises Pvt. Ltd., All Rights Reserved.