ರಾಯಚೂರು: ಜಿಲ್ಲೆಯ ಲಿಂಗಸೂಗುರು ಸೇರಿದಂತೆ ಇತರೆ ತಾಲೂಕುಗಳ ರೈತರ ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಸಹಾಯಕ ಆಯುಕ್ತ ರಾಜಶೇಖರ ಡಂಬಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ ಪ್ರಧಾನಿ ಪ್ಯಾಕೇಜ್ನಲ್ಲಿ ಪ್ರತಿ ರೈತರಿಗೆ 25 ಸಾವಿರ ರೂಪಾಯಿ ಪರಿಹಾರ ನೀಡಬೇಕು. ತೋಟಗಾರಿಕೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಬೆಳೆಹಾನಿ ಸ್ಥಳ ಸಮೀಕ್ಷೆ ನಿಖರವಾಗಿ ಮಾಡಿಲ್ಲ. ರೈತರು ನಾಟಿ ಮಾಡಿದ ಬೆಳೆಗಳ ಕುರಿತು ಪಹಣಿಯಲ್ಲಿ ನಮೂದಿಸಿಲ್ಲ. ಇಂತಹ ಲೋಪದೋಷಗಳನ್ನ ಸರಿಪಡಿಸಿ, ನಷ್ಟಕ್ಕೆ ಒಳಗಾದ ಎಲ್ಲರಿಗೂ ಪರಿಹಾರ ನೀಡಬೇಕು.
ಪ್ರವಾಹ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ ನಡುಗಡ್ಡೆ ಸಂತ್ರಸ್ತರಿಗೆ ಪರಿಹಾರ ನೀಡಿಲ್ಲ. ಅಲ್ಲದೆ ಎನ್ಆರ್ಬಿಸಿ ರಾಂಪುರ ಏತ ನೀರಾವರಿ ಯೋಜನೆಯಿಂದ ಭೂಮಿ ಕಳೆದುಕೊಂಡ ರೈತರಿಗೆ ಭೂ ಪರಿಹಾರ ಸೇರಿದಂತೆ ಇತರೆ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.