ಲಿಂಗಸುಗೂರು (ರಾಯಚೂರು): ಲಿಂಗಸುಗೂರು ತಾಲೂಕಿನ ಯಲಗಲದಿನ್ನಿ ಗ್ರಾಮದ ಬಡಾವಣೆಗಳು ಹಸಿರು ವಲಯ ವ್ಯಾಪ್ತಿಗೆ ಒಳಪಟ್ಟಿಲ್ಲ. ಹೀಗಾಗಿ ಎನ್.ಎ ಮಾಡಿಸಲು ಹಾಗೂ ಮಾರಾಟ ಮಾಡಲು ಅವಕಾಶ ಮಾಡಿ ಕೊಡಬೇಕು ಎಂದು ಬಡಾವಣೆ ಮಾಲೀಕರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಸಹಾಯಕ ಆಯುಕ್ತ ರಾಜಶೇಖರ ಡಂಬಳ ಅವರಿಗೆ ಮನವಿ ಸಲ್ಲಿಸಿದ ಸಂಘಟನೆಯೊಂದು, ಕಾಳಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಲಗಲದಿನ್ನಿ ಕೃಷಿಯೇತರ ಜಮೀನು ಬಡಾವಣೆಗಳು ಹಸಿರು ವಲಯಕ್ಕೆ ಒಳಪಟ್ಟಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದು ಕಾನೂನು ಬಾಹಿರವಾಗಿದೆ. ಈ ಪ್ರದೇಶ ಹಿಂದೆ ಹಸಿರು ವಲಯಕ್ಕೆ ಒಳಪಟ್ಟಿಲ್ಲ ಎಂದು ವರದಿ ನೀಡಲಾಗಿದೆ. ಹೀಗಾಗಿಯೇ ಹಸಿರು ವಲಯ ಎಂದು ಹೇಳುವುದು ಸರಿಯಲ್ಲ ಎಂದು ಮನವಿಯಲ್ಲಿ ಹೇಳಲಾಗಿದೆ.
ನಗರಾಭಿವೃದ್ಧಿ ಮತ್ತು ಗ್ರಾಮಾಂತರ ಪ್ರಾಧಿಕಾರ ಇನ್ನೂ ಸ್ಥಾಪನೆ ಆಗದೇ ಇರುವುದರಿಂದ ಪ್ರಾಧಿಕಾರದ ಅನುಮೋದನೆ ಅಗತ್ಯವಿಲ್ಲ ಎಂದು ಹಿಂಬರಹ ಕೂಡ ಪಡೆದಿದ್ದು, ಕಾನೂನಾತ್ಮಕ ಬಡಾವಣೆಗಳ ಮಾರಾಟ ತಡೆಯದಂತೆ ನಿಯಮಾನುಸಾರ ಇವೆ ಎಂದು ವರದಿ ಸಲ್ಲಿಸುವ ಮೂಲಕ ಮನವಿ ಸಲ್ಲಿಸಿದರು.