ಲಿಂಗಸುಗೂರು: ಇಲಾಖೆಯೇತರ ಕೆಲಸ ಕಾರ್ಯಗಳಿಂದ ಮುಕ್ತಿಗೊಳಿಸುವುದು ಸೇರಿದಂತೆ ಇತರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ನೌಕರರು ಪ್ರತಿಭಟನೆ ನಡೆಸಿದರು.
ಸರ್ಕಾರಗಳು ಕೋರ್ಟ್ ಆದೇಶ ಮಾಡಿದ್ದರು ಕೂಡ ಅಂಗನವಾಡಿ ನೌಕರರನ್ನು ಅನ್ಯ ಕೆಲಸಗಳಿಗೆ ನಿಯೋಜನೆ ಮಾಡುವುದನ್ನು ತಡೆಯುತ್ತಿಲ್ಲ. ಕೊರೊನಾ ವೈರಸ್ ಹಾವಳಿ ಹೆಚ್ಚಿದ್ದು ಅಂಗಳದಲ್ಲಿ ಕಲಿಕೆ ಯೋಜನೆ ಜಾರಿಗೆ ತಂದಿದ್ದು ಮಕ್ಕಳ ಭವಿಷ್ಯದ ದೃಷ್ಠಿಯಿಂದ ರದ್ದುಪಡಿಸುವಂತೆ ಆಗ್ರಹಿಸಿದರು.
ನೌಕರರಿಗೆ ಸೇವಾ ಭದ್ರತೆ ಘೋಷಿಸಬೇಕು. ನಿಗದಿತ ಅವಧಿಯಲ್ಲಿ ಗೌರವಧನ ಬಿಡುಗಡೆ ಮಾಡಬೇಕು. ನಿವೃತ್ತ ನೌಕರರಿಗೆ ಪಿಂಚಣಿ ಹಣ ನೀಡಬೇಕು. ಗುಣಮಟ್ಟದ ಆಹಾರ ಪೂರೈಕೆಸೇರಿದಂತೆ ಇತರೆ ಬೇಡಿಕೆಗಳ ಈಡೇರಿಕೆಗೆ ಸಿಐಟಿಯು ಜಿಲ್ಲಾ ಘಟಕ ಕಾರ್ಯದರ್ಶಿ ಶೇಕ್ಷಾಖಾದ್ರಿ ನೇತೃತ್ವದಲ್ಲಿ ಉಪ ವಿಭಾಗಾಧಿಕಾರಿ ಕಚೇರಿ ತಹಶೀಲ್ದಾರ ಶಾಲಂಸಾಬ ಮೂಲಕ ಮನವಿ ಸಲ್ಲಿಸಿದರು.