ರಾಯಚೂರು: ಕೃಷಿ ಚಟುವಟಿಕೆ, ಕೃಷಿ ಯಂತ್ರೋಪಕರಣ ದುರಸ್ತಿಗೆ ಜಿಲ್ಲೆಯಲ್ಲಿ ವಿನಾಯಿತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ಹೇಳಿದ್ದಾರೆ.
ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡನೇ ಹಂತದ ಲಾಕ್ಡೌನ್ ನಲ್ಲಿ ಸರ್ಕಾರ ಕೆಲವೊಂದು ನಿಯಮಗಳನ್ನ ಸಡಿಲಗೊಳಿಸಿದ್ದು, ಕೃಷಿ ಚಟುವಟಿಕೆ, ಕೃಷಿ ಯಂತ್ರೋಪಕರಣ ದುರಸ್ತಿ, ಪಂಚರ್ ಶಾಪ್, ಗ್ಯಾರೇಜ್, ಬೀಜ ಹಾಗೂ ರಸಗೊಬ್ಬರ ಮಾರಾಟ, ಮೀನುಗಾರಿಕೆ ಮಾರಾಟಕ್ಕೆ ವಿನಾಯಿತಿ ನೀಡಲಾಗಿದೆ ಎಂದರು.
ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಉದ್ಯೋಗ ಒದಗಿಸುವ ಹಿನ್ನೆಲೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ಯೋಗ ಖಾತರಿ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳಿಗೆ ಆರಂಭಿಸಲು ಸೂಚನೆ ನೀಡಲಾಗಿದೆ. ಹೊಲದಲ್ಲಿ ಕೆಲಸ ಮಾಡಲು ಸ್ಥಳೀಯ ಕೂಲಿ ಕಾರ್ಮಿಕರನ್ನ ಬಳಸಿಕೊಳ್ಳುವ ಕೆಲಸ ಮಾಡಿಸಿಕೊಳ್ಳಬೇಕಾಗಿದೆ. ಸಿಮೆಂಟ್, ಸ್ಟೀಲ್ ಸಾಗಣೆಗೆ ತೊಂದರೆಯಿಲ್ಲ. ಆರೋಗ್ಯ, ಅರೆ ವೈದ್ಯಕೀಯ ಸಿಬ್ಬಂದಿಗೆ ಪಾಸ್ ಅಗತ್ಯವಿಲ್ಲ. ಕಟ್ಟಡ ಕಾಮಗಾರಿಗೆ ನಡೆಸಲು ಯಾವುದೇ ತೊಂದರೆ ಇಲ್ಲ ಎಂದರು.
ನಂತರ ಮಾತು ಮುಂದುವರೆಸಿ, ಎಲೆಕ್ಟ್ರಾನಿಕ್ , ಮೋಟರ್ ಮೆಕಾನಿಕಲ್ ಗಳಿಗೂ ಪಾಸ್ ವಿತರಣೆ ಮಾಡಲಾಗುವುದು. ಆರ್ ಟಿಪಿಎಸ್ , ವೈಟಿಪಿಎಸ್ ನಲ್ಲಿ ಸ್ಥಳೀಯ ಕಾರ್ಮಿಕರನ್ನು ಬಳಸಿಕೊಂಡು ಕಾರ್ಯ ನಿರ್ವಹಿಸಬೇಕಾಗಿದೆ ಎಂದಿದ್ದಾರೆ.