ETV Bharat / state

ಎಲ್ಲವೂ ಅವರದೇ ದಯೆ.. ಶ್ರೀಗುರು ರಾಯರ ದರ್ಶನ ಪಡೆದ ನಟರಾದ ಜಗ್ಗೇಶ್​,ಕೋಮಲ್​.. - ragavendra math

ನವರಸ ನಾಯಕ ಜಗ್ಗೇಶ್, ನಟ ಕೋಮಲ್ ರಾಯಚೂರಿನ ಮಂತ್ರಾಲಯ ರಾಘವೇಂದ್ರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ನೆರೆ ಸಂತ್ರಸ್ತರಿಗಾಗಿ ಪ್ರಾರ್ಥಿಸಿದರು.

ನವರಸ ನಾಯಕ ಜಗ್ಗೇಶ್​ ಮಂತ್ರಾಲಯಕ್ಕೆ ಭೇಟಿ
author img

By

Published : Aug 17, 2019, 6:56 PM IST

ರಾಯಚೂರು:ಇಲ್ಲಿನ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದ ನವರಸ ನಾಯಕ ಜಗ್ಗೇಶ್​ ಹಾಗೂ ನಟ ಕೋಮಲ್ ನೆರೆ ಸಂತ್ರಸ್ತರ ಕುಟುಂಬಕ್ಕೆ ಧೈರ್ಯ ತುಂಬುವ ಶಕ್ತಿಯನ್ನು ರಾಯರು ದಯಪಾಲಿಸಲಿ ಎಂದು ಹೇಳಿದರು.

ನವರಸ ನಾಯಕ ಜಗ್ಗೇಶ್​ ಮಂತ್ರಾಲಯಕ್ಕೆ ಭೇಟಿ

ಅಗಸ್ಟ್ 17ರಂದು ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ವಿಶೇಷ ಪೂಜೆಗೆ ಆಗಮಿಸಿ, ನೆರೆ ಸಂತ್ರಸ್ತರು ಸಹಜ ಜೀವನಕ್ಕೆ ಮರಳುವಂತೆ ಪ್ರಾರ್ಥಿಸಿದರು. ಶ್ರೀರಾಘವೇಂದ್ರ ಸ್ವಾಮಿಯ 348ನೇ ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ನಟ ಜಗ್ಗೇಶ್‌, ನಾನು ಚಿಕ್ಕವನಿದ್ದಾಗಿನಿಂದಲೂ ರಾಯರ ಭಕ್ತ. ರಾಯರ ಸನ್ನಿಧಾನದಲ್ಲಿ ಕೂತು ಪ್ರಾರ್ಥಿಸುವ ಅವಕಾಶ ನೀಡಿದ್ದಾರೆ. ಇದು ನನ್ನ ಸೌಭಾಗ್ಯ ಎಂದರು.

ನಮ್ಮ ಕುಟುಂಬದವರು ರಾಯರ ಭಕ್ತರಾಗಿದ್ದು, ಪ್ರತಿವರ್ಷ ಶ್ರೀರಾಘವೇಂದ್ರ ಸ್ವಾಮಿಗಳ ಮಠಕ್ಕೆ ಆಗಮಿಸುತ್ತೇವೆ. ರಾಯರ ಅನುಗ್ರಹದಿಂದ ನನಗೆ ಒಳ್ಳೆಯದಾಗಿದೆ ಎಂದು ಸಹೋದರ ಕೋಮಲ್ ಹೇಳಿದರು. ತಮ್ಮ ಮೇಲೆ ಹಲ್ಲೆ ನಡೆಸಿರುವ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಇದಕ್ಕೂ ಮುನ್ನ ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನ ದರ್ಶನ ಪಡೆದುಕೊಂಡು, ಧ್ಯಾನ ಮುಗಿಸಿ, ಶ್ರೀಮಠದ ಪ್ರಾಂಗಣದಲ್ಲಿ ಪ್ರದಕ್ಷಿಣೆ ಹಾಕಿದರು. ಈ ವೇಳೆ ಅಭಿಮಾನಿಗಳು ನೆಚ್ಚಿನ ನಟರೊಂದಿಗೆ ಮುಗಿಬಿದ್ದು ಫೋಟೋ ಕ್ಲಿಕ್ಕಿಸಿಕೊಂಡರು.

Intro:Body:

1 rcr jaggesh.txt   

close

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.