ETV Bharat / state

ರಾಯಚೂರಲ್ಲಿ ಬೆಳ್ಳಂಬೆಳಗ್ಗೆ ಎಸಿಬಿ ಶಾಕ್​: ನಗರಾಭಿವೃದ್ಧಿ ಇಲಾಖೆ ಎಇಇ ಮನೆ ಮೇಲೆ ರೇಡ್​ - ರಾಯಚೂರು ಎಸಿಬಿ ದಾಳಿ ಸುದ್ದಿ

ರಾಯಚೂರು ನಗರಾಭಿವೃದ್ದಿ ಕೋಶ ಇಲಾಖೆ ಎಕ್ಸಿಕ್ಯೂಟಿವ್ ಎಂಜಿನಿಯರ್ ಮಲ್ಲಿಕಾರ್ಜುನ ಗೋಪಿಶೆಟ್ಟಿ ಮನೆ, ಕಚೇರಿ, ಪೆಟ್ರೋಲ್ ಪಂಪ್, ಟ್ರ್ಯಾಕ್ಟರ್ ಶೋರೂಂ ಮೇಲೆ ಏಕ ಕಾಲಕ್ಕೆ ಎಸಿಬಿ ದಾಳಿ ನಡೆಸುವ ಮೂಲಕ ಎಸಿಬಿ ಶಾಕ್ ನೀಡಿದೆ.

ACB raid
ಮಲ್ಲಿಕಾರ್ಜುನ ಗೋಪಿಶೆಟ್ಟಿ
author img

By

Published : Jun 10, 2020, 9:26 AM IST

Updated : Jun 10, 2020, 12:37 PM IST

ರಾಯಚೂರು: ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗೆ ರಾಯಚೂರಿನಲ್ಲಿ ಎಸಿಬಿ ದಾಳಿ ನಡೆಸಿದೆ.

ರಾಯಚೂರು ನಗರಾಭಿವೃದ್ದಿ ಕೋಶ ಇಲಾಖೆ ಎಕ್ಸಿಕ್ಯೂಟಿವ್ ಎಂಜಿನಿಯರ್ (ಎಇ) ಮಲ್ಲಿಕಾರ್ಜುನ ಗೋಪಿಶೆಟ್ಟಿ ಮನೆ, ಕಚೇರಿ, ಪೆಟ್ರೋಲ್ ಪಂಪ್, ಟ್ರ್ಯಾಕ್ಟರ್​​​ ಶೋರೂಂ ಮೇಲೆ ಏಕ ಕಾಲಕ್ಕೆ ಎಸಿಬಿ ದಾಳಿ ನಡೆಸುವ ಮೂಲಕ ಎಸಿಬಿ ಶಾಕ್ ನೀಡಿದೆ.

ನಗರಾಭಿವೃದ್ದಿ ಇಲಾಖೆ ಎಇಇ ಮಲ್ಲಿಕಾರ್ಜುನ ಗೋಪಿಶೆಟ್ಟಿ ಮನೆ ಮೇಲೆ ಎಸಿಬಿ ದಾಳಿ

ಸರ್ಕಾರ ಕರ್ತವ್ಯ ನಿರ್ವಹಿಸುತ್ತಿರುವ ಮಲ್ಲಿಕಾರ್ಜುನ ಗೋಪಿಶೆಟ್ಟಿ ತಮ್ಮ ವೇತನಕ್ಕಿಂತ ಹೆಚ್ಚಾಗಿ ಅಕ್ರಮವಾಗಿ ಆಸ್ತಿ ಗಳಿಕೆ ದೂರಿನ ಹಿನ್ನೆಲೆಯಲ್ಲಿ ರಾಯಚೂರು ಡಿವೈಎಸ್ಪಿ ಸಂತೋಷ ಬನ್ನಟ್ಟಿ ನೇತೃತ್ವದಲ್ಲಿ ನಾಲ್ಕು ತಂಡ, ಜಿಲ್ಲಾಧಿಕಾರಿ ಆವರಣದಲ್ಲಿನ ಕಚೇರಿ, ಐಡಿಎಂಸಿ ಲೇಔಟ್ ನಲ್ಲಿರುವ ಮನೆ ಹಾಗೂ ಟ್ರ್ಯಾಕ್ಟರ್ ಶೋರೂಂ, ಪೆಟ್ರೋಲ್ ಪಂಪ್ ಮೇಲೆ ದಾಳಿ ನಡೆಸಿ, ದಾಖಲೆಗಳನ್ನ ಪರಿಶೀಲನೆ ನಡೆಸುತ್ತಿದೆ.

Last Updated : Jun 10, 2020, 12:37 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.