ETV Bharat / state

ರಾಯಚೂರು ಆರ್​ಟಿಒ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳಿಂದ ದಿಢೀರ್​ ದಾಳಿ - ACB Rai news In Raichur

ರಾಯಚೂರು ಪ್ರಾದೇಶಿಕ ಸಾರಿಗೆ ಕಚೇರಿ(ಆರ್​ಟಿಒ) ಮೇಲೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದಿಂದ ದಾಳಿ ನಡೆದಿದೆ.

ACB Raid On  RTO Office In Raichur
ಆರ್​ಟಿಒ ಕಚೇರಿ ಮೇಲೆ ಎಸಿಬಿ ದಿಢೀರ್​ ದಾಳಿ
author img

By

Published : Dec 27, 2019, 3:26 PM IST

ರಾಯಚೂರು: ಪ್ರಾದೇಶಿಕ ಸಾರಿಗೆ ಕಚೇರಿ (ಆರ್​ಟಿಒ) ಮೇಲೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಯಿಂದ ದಾಳಿ ನಡೆದಿದೆ.

ನಗರದ ಹೊರವಲಯದ ಮಂತ್ರಾಲಯ ರಸ್ತೆಯಲ್ಲಿರುವ ಆರ್​ಟಿಒ ಕಚೇರಿ ಮೇಲೆ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಎಸಿಬಿ ಡಿವೈಎಸ್​ಪಿ ಸಂತೋಷ್​ ಬನ್ನಟ್ಟಿ ನೇತೃತ್ವದಲ್ಲಿ 30 ಅಧಿಕಾರಿಗಳನ್ನೊಳಗೊಂಡ ತಂಡ ಬೀದರ್, ಬಳ್ಳಾರಿ, ಯಾದಗಿರಿ, ಕೊಪ್ಪಳ, ಕಲಬುರಗಿ ಹಾಗೂ ರಾಯಚೂರು ಜಿಲ್ಲೆಯ ವಿವಿಧೆಡೆ ದಾಳಿ ನಡೆಸಿದ್ದಾರೆ.

ಆರ್​ಟಿಒ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳ ದಿಢೀರ್​ ದಾಳಿ

ಆರ್​ಟಿಒ ಕಚೇರಿಯಲ್ಲಿ ಭ್ರಷ್ಟಾಚಾರ ಮತ್ತು ಮಧ್ಯವರ್ತಿಗಳ ಹಾವಳಿ ಕುರಿತಂತೆ ಹಲವು ದೂರುಗಳು ಕೇಳಿ ಬಂದಿದ್ದವು. ಈ ದೂರಿನ ಆಧಾರದ ಮೇಲೆ ಇಂದು ಎಸಿಬಿ ಅಧಿಕಾರಿಗಳು ಏಕಾಏಕಿ ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲಿಸಿ ವಿಚಾರಣೆ ನಡೆಸುತ್ತಿದ್ದಾರೆ. ಎಸಿಬಿ ದಾಳಿ ಹಿನ್ನೆಲೆ ಆರ್​ಟಿಒ ಕಚೇರಿಗೆ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿದೆ.

Intro:ಸ್ಲಗ್: ಆರ್ ಟಿಒ ಕಚೇರಿ ಮೇಲೆ ಎಸಿಬಿ ತಂಡ ದಾಳಿ
ಫಾರ್ಮೇಟ್: ಎವಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 27-12-2019
ಸ್ಥಳ: ರಾಯಚೂರು
ಆಂಕರ್: ರಾಯಚೂರು ಪ್ರಾದೇಶಿಕ ಸಾರಿಗೆ ಕಚೇರಿ(ಆರ್ ಟಿಒ) ಮೇಲೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದಿಂದ ದಾಳಿ ನಡೆಸಲಾಗಿದೆ.Body: ನಗರದ ಹೊರವಲಯದ ಮಂತ್ರಾಲಯ ರಸ್ತೆಯಲ್ಲಿ ಆರ್ ಟಿಒ ಕಚೇರಿ ಮೇಲೆ 30 ಜನ ಎಸಿಬಿ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಳಗೊಂಡ ತಂಡ ದಾಳಿ ನಡೆಸಿದೆ. ಡಿವೈಎಸ್ಪಿ ಸಂತೋಷ ಬನ್ನಟ್ಟಿ ನೇತೃತ್ವದಲ್ಲಿ ಬೀದರ್, ಬಳ್ಳಾರಿ, ಯಾದಗಿರಿ, ಕೊಪ್ಪಳ, ಕಲಬುರಗಿ ಹಾಗೂ ರಾಯಚೂರು ಜಿಲ್ಲೆಯ 30 ಜನರ ಎಸಿಬಿ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ತಂಡ ಈ ದಾಳಿ ನಡೆಸಿದೆ. ಆರ್ ಟಿಒ ಕಚೇರಿಯಲ್ಲಿ ಎಸಿಬಿ ಕಚೇರಿಗೆ ಭ್ರಷ್ಟಾಚಾರದ ಕುರಿತಂತೆ ಹಲವು ದೂರುಗಳು ಬಂದಿದ್ದವು. ದೂರಿನ ಆಧಾರದ ಮೇಲೆ ಇಂದು ಎಸಿಬಿ ಅಧಿಕಾರಿಗಳು ಏಕಾಏಕಿ ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ಹಾಗೂ ವಿಚಾರಣೆ ನಡೆಸುತ್ತಿದ್ದಾರೆ. Conclusion:ಅಲ್ಲದೇ ದಾಳಿ ಹಿನ್ನಲೆಯಿಂದಾಗಿ ಸಾರ್ವಜನಿಕ ಪ್ರವೇಶವ್ನ ನಿರ್ಭದಿಸಲಾಗಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.