ರಾಯಚೂರು: ಮಹಿಳಾ ಪಿಎಸ್ಐ ವಿರುದ್ದ ಕಿರುಕುಳ ಆರೋಪ ಮಾಡಿ ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಯುವಕ ಬಳ್ಳಾರಿಯಲ್ಲಿ ಪತ್ತೆಯಾಗಿದ್ದಾನೆ.
ಜಿಲ್ಲೆಯ ಸಿರವಾರ ಪಟ್ಟಣದ ತಾಯಣ್ಣ ನಿಲೋಗಲ್ ಎನ್ನುವ ಯುವಕ ಸಿರವಾರ ಠಾಣೆ ಪಿಎಸ್ಐ ಗೀತಾಂಜಲಿ ಶಿಂಧೆ ವಿರುದ್ಧ ಕಿರುಕುಳ ಆರೋಪ ಮಾಡಿ, ಡೆತ್ ನೋಟ್ ಬರೆದಿಟ್ಟು ಡಿಸೆಂಬರ್ 3 ರಂದು ಬೆಳಗಿನ ಜಾವ ನಾಪತ್ತೆಯಾಗಿದ್ದ. ಇದೀಗ ಬಳ್ಳಾರಿಯರಿಯಲ್ಲಿ ತಾಯಣ್ಣ ಪತ್ತೆಯಾಗಿದ್ದು, ಆತ್ಮಹತ್ಯೆ ನಿರ್ಧಾರ ಬದಲಾಯಿಸಿ ಪಿಎಸ್ಐ ವಿರುದ್ದ ಡಿಐಜಿಗೆ ದೂರು ನೀಡಲು ಬಳ್ಳಾರಿಗೆ ತೆರಳಿದ್ದ ಎನ್ನಲಾಗಿದೆ. ಬಳಿಕ ಪೊಲೀಸರು ತಾಯಣ್ಣನನ್ನು ಸಿರವಾರಕ್ಕೆ ವಾಪಸ್ ಕರೆತಂದು, ಆತನಿಂದ ಮುಚ್ಚಳಿಕೆ ಪತ್ರ ಬರೆಯಿಸಿಕೊಂಡು ಮನೆಗೆ ಕಳುಹಿಸಿಕೊಟ್ಟಿದ್ದಾರೆ.
ಸಂಬಂಧಿಕರ ಜಮೀನಿನನಲ್ಲಿ ತಾಯಣ್ಣ ಭತ್ತ ಕಟಾವು ಮಾಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಪಿಎಸ್ಐ ಗೀತಾಂಜಲಿ ಮಧ್ಯೆ ಪ್ರವೇಶಿಸಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು. ತಾಯಣ್ಣ ನಾಪತ್ತೆ ಹಿನ್ನೆಲೆ ಸಿರವಾರ ಠಾಣೆಯಲ್ಲಿ ಪಿಎಸ್ಐ ಗೀತಾಂಜಲಿ ಶಿಂಧೆ ವಿರುದ್ದ, ತಾಯಣ್ಣನ ಸಹೋದರ ಬಸವಲಿಂಗ ದೂರು ನೀಡಿದ್ದರು. ಸಿರವಾರ ಠಾಣೆಯಲ್ಲಿ ಪಿಎಸ್ಐ ವಿರುದ್ದ ಪ್ರಕರಣವೂ ದಾಖಲಾಗಿತ್ತು.
ಇದನ್ನೂ ಓದಿ: ಡೆತ್ನೋಟ್ ಬರೆದಿಟ್ಟು ಯುವಕ ನಾಪತ್ತೆ.. ಸಿರವಾರ ಮಹಿಳಾ ಪಿಎಸ್ಐ ವಿರುದ್ಧ ಎಫ್ಐಆರ್