ರಾಯಚೂರು: ಬೀದಿ ಬದಿಯಲ್ಲಿ ಮಲಗುವ ನಿರ್ಗತಿಕರಿಗೆ ಕುಟುಂಬವೊಂದು ಬೆಡ್ಶೀಟ್ಗಳನ್ನ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ನಗರದ ಕೇಂದ್ರೀಯ ಬಸ್ ನಿಲ್ದಾಣ, ರೈಲ್ವೆ ಸ್ಟೇಷನ್ ರಸ್ತೆ, ಡಾ.ಬಿ.ಆರ್.ಅಂಬೇಡ್ಕರ್ ಸರ್ಕಲ್, ತೀನ್ ಕಂದಿಲ್ ಸೇರಿದಂತೆ ಚಳಿಯ ಬೀದಿ ಬದಿಯ ಮಳಿಗೆಗಳ ಮುಂದೆ ಚಳಿಯಲ್ಲಿ ಮಲಗುವ ಜನರಿಗೆ ಬೆಡ್ಶೀಟ್ಗಳನ್ನ ಉಚಿತವಾಗಿ ಹಂಚಿಕೆ ಮಾಡಿದ್ದಾರೆ. ನಗರದ ನಿವಾಸಿಯಾದ ವೈಷ್ಣವಿ ಜೋಶಿ ಎನ್ನುವವರು ತಮ್ಮ ಸಂಬಂಧಿಕರೊಂದಿಗೆ ನಗರದಲ್ಲಿ ಸಂಚರಿಸಿ ಸ್ವಂತ ಹಣದಿಂದ 20 ಬೆಡ್ಶೀಟ್ ಗಳನ್ನ ಹಂಚಿಕೆ ಮಾಡುವ ನಿರ್ಗತಿಕರ ಕಾಳಜಿ ಮಾಡ್ತಿದ್ದಾರೆ.
ಬಿಸಿಲೂರು ಎಂದೇ ಕರೆಯುವ ರಾಯಚೂರು ಜಿಲ್ಲೆಯಲ್ಲಿ ಸಂಜೆಯಾಗುತ್ತಲೇ ಚಳಿ ಆವರಿಸುತ್ತಿದೆ. ಬೆಳಗ್ಗೆಯವರಿಗೆ ವಿಪರೀತವಾದ ಚಳಿ ಇರುತ್ತಿದೆ. ಬೀದಿ ಬದಿಯಲ್ಲಿ ಮಲಗುವ ಭಿಕ್ಷುಕರು, ನಿರ್ಗತಿಕರು, ನೆಲೆಯಿಲ್ಲದವರು ಚಳಿಯಲ್ಲಿ ಹೊದಿಕೆ ಇಲ್ಲದೇ ಮಲಗುತ್ತಿದ್ದರು. ಇದನ್ನ ಕಂಡ ವೈಷ್ಣವಿ ಜೋಶಿ ಎನ್ನುವವರು ಈ ಕಾರ್ಯಕ್ಕೆ ಮುಂದಾಗಿದ್ದಾರೆ.