ರಾಯಚೂರು: 20 ರೂಪಾಯಿ ಮುಖ ಬೆಲೆಯ ಹರಿದ ನೋಟಿನ ವಿಚಾರವಾಗಿ ಇಬ್ಬರ ಮಹಿಳೆಯರ ನಡುವೆ ಕೈ ಮಿಲಾಯಿಸುವ ಹಂತಕ್ಕೆ ಜಗಳ ತಿರುಗಿದೆ. ಪರಿಣಾಮ ಮಹಿಳೆಯೊಬ್ಬಳು ಸಾವಿಗೀಡಾಗಿರುವ ಘಟನೆ ಸಿಂಧನೂರು ತಾಲೂಕಿನ ಗೀತಾ ಕ್ಯಾಂಪ್ ನಲ್ಲಿ ನಡೆದಿದೆ.
ಗೀತಾ ಕ್ಯಾಂಪ್ನ ರುಕ್ಕಮ್ಮ, ಮಲ್ಲಮ್ಮ ಎಂಬ ಜಗಳ ಆಡಿದ ಮಹಿಳೆಯರಾಗಿದ್ದಾರೆ. ಈ ಇಬ್ಬರ ಜಗಳದಲ್ಲಿ ರುಕ್ಕಮ್ಮ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃ ತಪಟ್ಟಿದ್ದಾರೆ. ಇನ್ನೊಂದೆಡೆ, ತೀವ್ರವಾಗಿ ಗಾಯಗೊಂಡಿರುವ ಮಲ್ಲಮ್ಮಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ವಿವರ: ಗೀತಾ ಕ್ಯಾಂಪ್ನಲ್ಲಿ ಮಲ್ಲಮ್ಮ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ರುಕ್ಕಮ್ಮನ ಮಗಳು ಮಲ್ಲಮ್ಮನ ಅಂಗಡಿಗೆ ಹೋಗಿದ್ದರು. ಈ ವೇಳೆ ಮಲ್ಲಮ್ಮನಿಗೆ ಹರಿದ 20 ರೂ. ನೋಟು ನೀಡಿದ್ದಕಾರಣ, ರುಕ್ಕಮ್ಮ ನಡುವೆ ಮಾತಿಗೆ ಮಾತು ಬೆಳೆದು ಜಗಳ ತೀವ್ರ ಸ್ವರೂಪ ಪಡೆದುಕೊಂಡಿದೆ.
ಈ ವೇಳೆ ಇಬ್ಬರು ಕೈ ಕೈಮಿಲಾಯಿಸುವ ಹಂತಕ್ಕೆ ಹೋಗಿದೆ. ಈ ವೇಳೆ ಅಂಗಡಿಯಲ್ಲಿಟ್ಟಿದ್ದ ಪೆಟ್ರೋಲ್ ಇಬ್ಬರ ಮೈ ಮೇಲೆ ಬಿದ್ದಿದೆ. ಇನ್ನೊಂದೆಡೆ, ಅಂಗಡಿಯಲ್ಲಿದ್ದ ದೀಪದ ಬೆಂಕಿ ಸೆಳೆದು ಇಬ್ಬರಿಗೂ ಮೈಗೆ ತಗುಲಿದೆ. ಈ ಬೆಂಕಿ ಆಘಾತದಿಂದ ತೀವ್ರ ಗಾಯಗೊಂಡಿದ್ದ ಮಲ್ಲಮ್ಮನನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರೆ, ರುಕ್ಕಮ್ಮಗೆ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆಗೆ ರುಕ್ಕಮ್ಮ ಸ್ಪಂದಿಸದಿದ್ದರಿಂದ ಸಾವಿಗೀಡಾಗಿದ್ದು, ತೀವ್ರ ಗಾಯಗೊಂಡಿರುವ ಮಲ್ಲಮ್ಮಳಿಗೆ ಬಳ್ಳಾರಿ ವಿಮ್ಸ್ ದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಕಡೆಯಿಂದಲೂ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿ:ಚಿತ್ರದುರ್ಗದಲ್ಲಿ ಭೀಕರ ರಸ್ತೆ ಅಪಘಾತ.. ದೀಪಾವಳಿ ಹಬ್ಬದಂದೇ ಪ್ರಾಣಬಿಟ್ಟ ಮೂವರು