ರಾಯಚೂರು: ದಾಳಿಂಬೆ ಬೆಳೆಗೆ ಕೀಟ ಬಾಧೆ ತಡೆದು ಇಳುವರಿ ಹೆಚ್ಚಿಸಲು ರೈತನೋರ್ವ ತೋಟದ ತುಂಬೆಲ್ಲಾ ಎಲ್ಇಡಿ ಬಲ್ಬ್ ವ್ಯವಸ್ಥೆ ಕಲ್ಪಿಸಿ ರೈತ ಸಮೂಹವನ್ನೇ ಅಚ್ಚರಿಗೊಳಿಸಿದ ವಿನೂತನ ಪ್ರಯೋಗ ಲಿಂಗಸುಗೂರು ತಾಲೂಕಿನಲ್ಲಿ ಅಚ್ಚರಿ ಮೂಡಿಸಿದೆ.
ಕಲ್ಯಾಣ ಕರ್ನಾಟಕ ಪ್ರದೇಶದ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಎಂಜಿನಿಯರ್ ಪದವೀಧರ ಬಸವರಾಜಗೌಡ ಗಣೆಕಲ್ಲ ಎಂಬುವವರು ಗುತ್ತಿಗೆದಾರಿಕೆ ವೃತ್ತಿಯಲ್ಲಿ ಭಾರಿ ನಷ್ಟ ಅನುಭವಿಸಿ, ಕೃಷಿಯತ್ತ ಮುಖಮಾಡಿದ್ದರು. ಈಗ ಅವರು ತೋಟಗಾರಿಕೆಯಲ್ಲಿ ನಡೆಸುತ್ತಿರುವ ವಿನೂತನ ಪ್ರಯೋಗಗಳು ಕೃಷಿ ತಜ್ಞರನ್ನು ಹುಬ್ಬೇರಿಸುವಂತೆ ಮಾಡಿದೆ.
ಈ ಮೊದಲು ದಾಳಿಂಬೆ ಗಿಡಗಳನ್ನು 5-6 ಕಿ.ಮೀ ಅಂತರದಿಂದ ಜಮೀನಿಗೆ ಬೇರು ಸಹಿತ ಸ್ಥಳಾಂತರಿಸಿ ನಾಟಿ ಮಾಡಿ ಕೃಷಿ ತಜ್ಞರನ್ನು ಅಚ್ಚರಿ ಗೊಳಿಸುವ ಜೊತೆಗೆ ಹೊಸ ಆಯಾಮವನ್ನೇ ಸೃಷ್ಟಿಸಿದ್ದರು. ಸ್ನೇಹಿತರ, ಹಿತೈಷಿಗಳ, ಆನಲೈನ್ ಚಾಟಿಂಗ್ ಮೂಲಕ ಹೊಸ ಹೊಸ ಪ್ರಯೋಗಗಳನ್ನು ಅನುಷ್ಠಾನ ತರವು ಮೂಲಕ ಕೃಷಿಯಲ್ಲಿ ವಿನೂತನ ಪ್ರಯೋಗವನ್ನು ಮುಂದುವರಿಸಿದ್ದಾರೆ.
ಲಿಂಗಸುಗೂರು ಬಳಿಯ ಕರಡಕಲ್ಲ ಸೀಮಾಂತರದಲ್ಲಿ ಇರುವ ತಮ್ಮ ಜಮೀನನಲ್ಲಿ ದಾಳಿಂಬೆ ನಾಟಿ ಮಾಡಿರುವ ಇವರು, ದಾಳಿಂಬೆ ಹಣ್ಣಿಗೆ ಅಂಟುತ್ತಿರುವ ಕಾಯಿಕೊರಕ ಹುಳು ನಿಯಂತ್ರಿಸುವುದಕ್ಕಾಗಿ 5 ಎಕರೆ ಜಮೀನಿನಲ್ಲಿ ಹಣ್ಣುಗಳ ರಕ್ಷಣೆಗೆ ತೋಟದ ತುಂಬೆಲ್ಲ ಜನರೇಟರ್ ಮೂಲಕ ಲೈಟಿಂಗ್ ವ್ಯವಸ್ಥೆ ಕಲ್ಪಿಸಿ ರಾಸಾಯನಿಕ ಸಿಂಪರಣೆ ಮಾಡಿದ್ದಾರೆ.
5 ಎಕರೆ ಜಮೀನದಲ್ಲಿ 250ಕ್ಕೂ ಹೆಚ್ಚು ಬಲ್ಬ್ಗಳನ್ನು ಹಾಕಲಾಗಿದೆ. ಬೆಳಕು ಇರುವುದರಿಂದ ಚಿಟ್ಟೆ (ಮೋತ್) ಆಕಾರದ ಹುಳು ಹಣ್ಣು ತಿನ್ನಲು ಬರುವುದಿಲ್ಲ. ಹೀಗಾಗಿ ದಿನಕ್ಕೆ 1000 ದಿಂದ 1200 ರೂ. ಖರ್ಚು ಮಾಡುವ ಮೂಲಕ ಬೆಳೆ ರಕ್ಷಣೆಗೆ ಮುಂದಾಗಿದ್ದಾರೆ.