ETV Bharat / state

ಫೇಸ್​ಬುಕ್​ನಲ್ಲಿ ಮಹನೀಯರಿಗೆ ಅಪಮಾನ ಆರೋಪ: ಯುವಕನಿಗೆ ಥಳಿತ - kannadanews

ಮಹನೀಯರಿಗೆ ಅಪಮಾನವಾಗುವ ರೀತಿ ಫೇಸ್​ಬುಕ್​ ಪೋಸ್ಟ್​ ಹಾಕಿದ್ದಾನೆಂದು ಆರೋಪಿಸಿ ಯುವಕನೊಬ್ಬನಿಗೆ ಸಾರ್ವಜನಿಕರು ಮನಬಂದಂತೆ ಥಳಿಸಿರುವ ಘಟನೆ ನಡೆದಿದೆ.

ಫೇಸ್​ಬುಕ್​ನಲ್ಲಿ ಮಹನೀಯರಿಗೆ ಅಪಮಾನ ಮಾಡಿದ ಯುವಕನಿಗೆ ಥಳಿತ
author img

By

Published : Aug 25, 2019, 6:10 PM IST

Updated : Aug 25, 2019, 7:54 PM IST

ರಾಯಚೂರು: ಮಹನೀಯರಿಗೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ ಪೊಲೀಸರ ಮುಂದೆಯೇ ಮಾರಾಮಾರಿ ನಡೆದಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಲಿಂಗಸೂಗೂರು ಪಟ್ಟಣದಲ್ಲಿ ಈ ಗಲಾಟೆ ನಡೆದಿದೆ. ಉದ್ರಿಕ್ತರ ಗುಂಪು ಯುವಕ ಹಾಗೂ ಆತನ ಸ್ನೇಹಿತನನ್ನು ಮನಬಂದತೆ ಥಳಿಸಿದೆ. ಇದರಿಂದ ಯುವಕ ಗಂಭೀರ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಗಲಾಟೆ ನಿಯಂತ್ರಿಸಲು ಹಾಗೂ ಉದ್ರಿಕ್ತರ ಗುಂಪನ್ನು ಚದುರಿಸಲು ಮುಂದಾದ ಪೊಲೀಸರಿಗೂ ಸಣ್ಣಪುಟ್ಟ ಗಾಯಗಳಾಗಿವೆ.

ಯುವಕನಿಗೆ ಜನರಿಂದ ಥಳಿತ

ಆಗಿದ್ದೇನು?
ಲಿಂಗಸೂಗೂರಿನ ಯುವಕನೊಬ್ಬ ತನ್ನ ಫೇಸ್​​ಬುಕ್ ಅಕೌಂಟ್​​ನಲ್ಲಿ ಮಹನೀಯರಿಗೆ ಅಪಮಾನ ಎಸಗುವ ರೀತಿ ಪೋಸ್ಟ್​ ಹಾಕಿದ್ದಾನೆ ಎನ್ನಲಾಗಿದೆ. ಇದನ್ನು ನೋಡಿದ ಫೇಸ್​​ಬುಕ್ ಬಳಕೆದಾರರು ಇದನ್ನು ತೆಗೆಯುವಂತೆ ಕಾಮೆಂಟ್ ಮಾಡಿದ್ದಾರೆ. ಆದ್ರೆ ಪೋಸ್ಟ್ ಮಾಡಿದ ಯುವಕ ನಿರಾಕರಿಸಿದ ಕಾರಣ ಆತ ಹಾಗೂ ಆತನ ಸ್ನೇಹಿತನಿಗೆ ಮನಬಂದತೆ ಥಳಿಸಲಾಗಿದೆ. ಇದನ್ನು ತಡೆಯಲು ಸಹ ಪೊಲೀಸರು ಮುಂದಾಗಿದ್ರು. ಆದ್ರೆ ಅಧಿಕ ಸಂಖ್ಯೆಯಲ್ಲಿದ್ದ ಸೇರಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಹೈರಾಣ ಆಗಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದೆ.

Intro:ಸ್ಲಗ್: ಫೇಸ್ ಬುಕ್ ಪೋಸ್ಟ್ ಗಲಾಟೆ
ಫಾರ್ಮೇಟ್: ಎವಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 25-೦8-2019
ಸ್ಥಳ: ರಾಯಚೂರು
ಆಂಕರ್: ಮಹರ್ಷಿ ವಾಲ್ಮೀಕಿ, ಸಂಗೋಳ್ಳಿ ರಾಯಣ್ಣ, ಛತ್ರಪತಿ ಶಿವಾಜಿ ಭಾವಚಿತ್ರಕ್ಕೆ ಅಪಮಾನ ಮಾಡಿದ್ದ ವಿಚಾರಕ್ಕೆ ಪೋಲೀಸ್ ರ ಮುಂದೆ ಮಾರಾಮಾರಿ ನಡೆದಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.Body: ಜಿಲ್ಲೆಯ ಲಿಂಗಸೂಗೂರು ಪಟ್ಟಣದಲ್ಲಿ ಈ ಗಲಾಟೆ ನಡೆದಿದೆ. ಉದ್ರಿಕ್ತ ಗುಂಪು ಅಪಮಾನವೆಸಗಿದ ಯುವಕ ಹಾಗೂ ಆತನ ಸ್ನೇಹಿತನ್ನ ಮನಬಂದತೆ ಥಳಿಸಿ, ಕಟ್ಟಿಗೆ ತೆಗೆದುಕೊಂಡು ಹೊಡೆದಿದ್ದಾರೆ. ಇದರಿಂದ ಯುವಕನೋರ್ವ ಗಂಭೀರ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಲಾಗಿದೆ. ಗಲಾಟೆ ನಿಯಂತ್ರಿಸಲು ಪೊಲೀಸ್ ರು ಉದ್ರಿಕ್ತರನ್ನ ಗುಂಪನ್ನು ಚದುರಿಸಲು ಮುಂದಾದ ಪೊಲೀಸ್ ರಿಗೂ ಸಣ್ಣಪುಟ್ಟ ಗಾಯಗಳು ಆಗಿವೆ.
Conclusion:ಆಗಿದೇನು: ಲಿಂಗಸೂಗೂರು ನಿವಾಸಿ ಎಸ್.ಸೈಯದ್ ಚಾವೂಶ್ ಎನ್ನುವ ಯುವಕ ತನ್ನ ಫೇಸ್ ಬುಕ್ ಅಕೌಂಟ್ ನಲ್ಲಿ ಕ್ರಾಂತಿವೀರಿ ಸಂಗೋಳ್ಳಿ ರಾಯಣ್ಣ, ಮಹರ್ಷಿ ವಾಲ್ಮೀಕಿ, ಛತ್ರಫತಿ ಶಿವಾಜಿಯವರ ಪೋಟೋವನ್ನ ಟಿಪ್ಪು ಸುಲ್ತಾನ್ ಪೋಟೋದ ಕಾಲು ಕೆಳಗೆ ಹಿಟ್ಟು, “Only King is Tippu, Ye Long Mere Tippu Ke Kunte Hai” ಎಂದು ಕಾಮೆಂಟ್ ಹಾಕಿದ್ದಾನೆ. ಇದನ್ನು ನೋಡಿದ ಫೇಸ್ ಬುಕ್ ಬಳಕೆದಾರರು ಇದನ್ನು ತೆಗೆಯುವಂತೆ ಫೇಸ್ ಬುಕ್ ನಲ್ಲಿ ಕಾಮೆಂಟ್ ಮಾಡಿದ್ದಾರೆ. ಆದ್ರೆ ಪೋಸ್ಟ್ ಮಾಡಿದ ಯುವಕ ನಿರಾಕಾರಿಸಿ ಕಾಮೆಂಟ್ ಒಂದಕ್ಕೊದು ವಿಚಾರ ದೀರ್ಘಕ್ಕೆ ಹೋಗಿ ಪೋಸ್ಟ್ ಹಾಕಿದ ಯುವಕ ಹಾಗೂ ಸ್ನೇಹಿತನಿಗೆ ಥಳಿಸುವ, ಮನಬಂದತೆ ಹೊಡೆದಿರುವ ದೃಶ್ಯಗಳು ಕಂಡು ಬಂದಿದೆ. ಇದನ್ನು ತಡೆಯಲು ಸಹ ಪೊಲೀಸ್ ರು ಮುಂದಾದ್ರೂ, ಆದ್ರೆ ಅಧಿಕ ಸಂಖ್ಯೆಯಲ್ಲಿ ಉದ್ರಿಕ್ತರು ಏಕಾಏಕಿ ಗುಂಪು ಆಗಿರುವುದರಿಂದ ಪೊಲೀಸ್ ರು ಪರಿಸ್ಥಿತಿಯನ್ನ ಹತೋಟಿ ತರಲು ಹೈರಾಣ ಆಗಿದ್ದಾರೆ ಎನ್ನಲಾಗುತ್ತಿದೆ. ಈ ಮಾರಾಮಾರಿ ಲಿಂಗಸೂಗೂರು ಠಾಣೆಯ ಮುಂದೆ ನಡೆದಿದೆ. ಸದ್ಯ ಸ್ಥಳದಲ್ಲಿ ಬಿಗುವಿನ ವಾತವಾರಣ ನಿರ್ಮಾಣಗೊಂಡಿದ್ದು, ಗಡಿಯಾರ ಚೌಕ ಬಳಿ ಪ್ರತಿಭಟನೆ ನಡೆಸಲಾಗುತ್ತಿದೆ. ಪಟ್ಟಣದಲ್ಲಿ ಬುದ್ದಿಮುಚ್ಚಿದ ಕೆಂಡದ ವಾತವಾರಣ ನಿರ್ಮಾಣವಾಗಿದೆ. ಲಿಂಗಸೂಗೂರು ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Last Updated : Aug 25, 2019, 7:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.