ETV Bharat / state

ದೇವದುರ್ಗದ ಕ್ವಾರಂಟೈನ್​ ಕೇಂದ್ರದಲ್ಲಿ ಹೊಟ್ಟೆ ನೋವಿನಿಂದ ನರಳಿ ಪ್ರಾಣ ಬಿಟ್ಟ ಬಾಲಕ! - ರಾಯಚೂರಿನಲ್ಲಿ ಕ್ವಾರಂಟೈನ್​ನಲ್ಲಿದ್ದ ಬಾಲಕ ಸಾವು,

ಕ್ವಾರಂಟೈನ್​ ಕೇಂದ್ರದಲ್ಲಿದ್ದ ಬಾಲಕನೊಬ್ಬ ಹೊಟ್ಟೆ ನೋವಿನಿಂದ ನರಳಿ ಪ್ರಾಣ ಬಿಟ್ಟಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

A boy died in quarantine, A boy died in quarantine at Raichur, Raichur quarantine news, ಕ್ವಾರಂಟೈನ್​ನಲ್ಲಿದ್ದ ಬಾಲಕ ಸಾವು, ರಾಯಚೂರಿನಲ್ಲಿ ಕ್ವಾರಂಟೈನ್​ನಲ್ಲಿದ್ದ ಬಾಲಕ ಸಾವು, ರಾಯಚೂರು ಕ್ವಾರಂಟೈನ್​ ಸುದ್ದಿ,
ಕ್ವಾರಂಟೈನ್​ನಲ್ಲಿ ಹೊಟ್ಟೆ ನೋವಿನಿಂದ ನರಳಿ ಪ್ರಾಣ ಬಿಟ್ಟ ಬಾಲಕ
author img

By

Published : Jun 4, 2020, 1:46 PM IST

ರಾಯಚೂರು: ಹೊಟ್ಟೆ ನೋವು ಎಂದು ಒದ್ದಾಡಿದ್ದ ಬಾಲಕ ನರಳಿ ನರಳಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ದೇವದುರ್ಗ ಪಟ್ಟಣದಲ್ಲಿ ನಡೆದಿದೆ.

ಕ್ವಾರಂಟೈನ್​ನಲ್ಲಿ ಹೊಟ್ಟೆ ನೋವಿನಿಂದ ನರಳಿ ಪ್ರಾಣ ಬಿಟ್ಟ ಬಾಲಕ

ಮಹಾರಾಷ್ಟ್ರದಿಂದ ಬಂದಿದ್ದ ಬಾಲಕ ಹಾಗೂ ಅವನ ಸೋದರ ಅತ್ತೆಯನ್ನು ಪಟ್ಟಣದ ಪದವಿ ಕಾಲೇಜು ಪಕ್ಕದ ಬಿಸಿಎಂ ಹಾಸ್ಟೆಲ್​ನಲ್ಲಿ ಕ್ವಾರಂಟೈನ್​ನಲ್ಲಿ ಇಡಲಾಗಿತ್ತು. ಮೇ 16 ರಂದು ಮಹಾರಾಷ್ಟ್ರದಿಂದ ಬಂದಿದ್ದ ಬಾಲಕನ ವರದಿ ನೆಗೆಟಿವ್ ಬಂದಿತ್ತು.

ಇಂದಿಗೆ ಅವರೆಲ್ಲರೂ ಕ್ವಾರಂಟೈನ್​ನಲ್ಲಿದ್ದು 20 ದಿನಗಳಾಗಿವೆ. ಆದ್ರೂ ಇವರನ್ನು ಮನೆಗೆ ಕಳುಹಿಸಿಕೊಟ್ಟಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಇದೇ ಸೋಮವಾರ ಬಾಲಕನ ಗಂಟಲು​ ದ್ರವದ ಮಾದರಿಯನ್ನು ಮತ್ತೆ ಪರೀಕ್ಷೆಗೆ ಕಳುಹಿಸಲಾಗಿತ್ತು. ನಿನ್ನೆ ರಾತ್ರಿ 11 ಗಂಟೆಯಿಂದ ಹೊಟ್ಟೆ ನೋವು ತಾಳಲಾಗದೆ ಬಾಲಕ ಯಾತನೆ ಅನುಭವಿಸಿದ್ದ.

ಬೆಳಗ್ಗೆ 4 ಗಂಟೆಗೆ ಬಂದ ಆ್ಯಂಬ್ಯುಲೆನ್ಸ್​ನಲ್ಲಿ ರಾಯಚೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಬಾಲಕ ಮೃತಪಟ್ಟಿದ್ದಾನೆ. ಬಾಲಕನಿಗೆ ಹೊಟ್ಟೆ ನೋವು ಕಾಣಿಸಿಕೊಂಡಾಗಿನಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ರೂ ಸ್ಪಂದಿಸಿಲ್ಲ ಎಂದು ಮೃತ ಬಾಲಕನ ಅತ್ತೆ ಆರೋಪ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.