ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಉದ್ಬಳಾ ಸೀಮಾಂತರದಲ್ಲಿ ಬರುವ ತುಂಗಭದ್ರಾ ಎಡದಂಡೆ ನಾಲೆ 55ರಲ್ಲಿ ಬಾಲಕನೋರ್ವನ ಶವ ಪತ್ತೆಯಾಗಿದೆ.
ಮೃತ ಬಾಲಕನನ್ನು ಕಾರಟಗಿ ಮೂಲದ ಕಳಸಪ್ಪ ಎಂಬುವವರ ಮಗ ಮಲ್ಲಿಕಾರ್ಜುನ (12) ಎಂದು ಗುರುತಿಸಲಾಗಿದೆ. ಬಾಲಕನ ಕೈ-ಕಾಲುಗಳನ್ನ ಕಟ್ಟಿ ತುಂಗಭದ್ರಾ ಎಡದಂಡೆ ನಾಲೆಯಲ್ಲಿ ಎಸೆದಿದ್ದು, ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಬಾಲಕನ ತಂದೆ ಕಳಸಪ್ಪ ಬಳಗಾನೂರು ಠಾಣೆಯಲ್ಲಿ ದೂರು ದಾಖಲಿಸಿದ್ದು, ತನಿಖೆ ಮುಂದುವರೆದಿದೆ.