ರಾಯಚೂರು: ಜಿಲ್ಲೆಯ ಇಂದು 91 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 2,941 ಕ್ಕೆ ತಲುಪಿದೆ.
ಸಿಂಧನೂರು 18, ಮಾನವಿ 5, ಲಿಂಗಸೂಗೂರು 8, ದೇವದುರ್ಗ 2 ಹಾಗೂ ರಾಯಚೂರು ತಾಲೂಕಿನ 58 ಪ್ರಕರಣಗಳು ಪತ್ತೆಯಾಗಿವೆ. 2,941 ಸೋಂಕಿತರ ಪೈಕಿ 1,991 ಜನ ಗುಣಮುಖರಾಗಿದ್ದಾರೆ.
918 ಪ್ರಕರಣಗಳು ಸಕ್ರಿಯವಾಗಿವೆ. ಇಂದು ಇಬ್ಬರು ಸೋಂಕಿತರು ಮೃತಪಟ್ಟಿದ್ದು, ಈವರೆಗೆ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 32 ಕ್ಕೆ ಏರಿಕೆಯಾಗಿದೆ.
ಸೋಂಕಿತರನ್ನ ರೋಗದ ಗುಣಲಕ್ಷಣದ ಆಧಾರದ ಮೇಲೆ ಕೋವಿಡ್ ಕೇರ್, ಒಪೆಕ್ ಆಸ್ಪತ್ರೆಗೆ ದಾಖಲಿಸಿ, ಸೋಂಕಿತರ ಸಂಪರ್ಕಗಳನ್ನ ಪತ್ತೆ ಹಚ್ಚಲಾಗುತ್ತಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.