ರಾಯಚೂರು: ಜಿಲ್ಲೆಯಲ್ಲಿ ಇಂದು ಒಂದೇ ದಿನ 88 ಜನರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 356ಕ್ಕೆ ತಲುಪಿದೆ. ಸೋಂಕಿತರಲ್ಲಿ 51 ಪುರುಷರಿದ್ದರೆ, 37 ಮಹಿಳೆಯರಿದ್ದಾರೆ. ಒಟ್ಟು 88 ಪ್ರಕರಣಗಳಲ್ಲಿ 1ರಿಂದ 14 ವರ್ಷದೊಳಗಿನ 39 ಮಕ್ಕಳಿದ್ದಾರೆ. ಓರ್ವ ಆಂಧ್ರದವನಾದರೆ, ಮತ್ತೋರ್ವನ ಗಂಟಲು ದ್ರವದ ಮಾದರಿ ಪರೀಕ್ಷಿಸಿದಾಗ ಪಾಸಿಟಿವ್ ಬಂದಿದೆ.
ಪಿ-2612 ಸೋಂಕಿತ ವ್ಯಕ್ತಿಯಿಂದ 30 ಜನರಿಗೆ ಸೋಂಕು ಹರಡಿದ್ದು, ಪಿ-2608 ಸೋಂಕಿತ ಮಹಿಳೆಯಿಂದ 17 ಜನರಿಗೆ, ಪಿ-2939 ಸೋಂಕಿತ ಮಹಿಳೆಯಿಂದ 14 ಜನರಿಗೆ, ಪಿ-2641 ಸೋಂಕಿತ ವ್ಯಕ್ತಿಯಿಂದ 9 ಜನರಿಗೆ ಹಾಗೂ ಪಿ-2936 ವ್ಯಕ್ತಿಯಿಂದ 6 ಜನರಿಗೆ ಸೋಂಕು ತಗುಲಿದೆ.
ಮಹಾರಾಷ್ಟದಿಂದ ಆಗಮಿಸಿದ 9 ಜನರಿಗೆ ಸೋಂಕು ದೃಢಪಟ್ಟಿದೆ. ವರದಿಯಾದ ಪ್ರಕರಣಗಳಲ್ಲಿ ಬಹುತೇಕ ಪ್ರಕರಣಗಳು ದೇವದುರ್ಗ ತಾಲೂಕಿನ ಕ್ವಾರಂಟೈನ್ ಕೇಂದ್ರಗಳಲ್ಲಿ ಪತ್ತೆಯಾದ ಸೋಂಕಿತರ ಸಂಪರ್ಕಕ್ಕೆ ಬಂದವುಗಳಾಗಿದ್ದು, ಕ್ವಾರಂಟೈನ್ ಕೇಂದ್ರದಲ್ಲಿನ ಸಂಪರ್ಕದಿಂದಾಗಿಯೇ ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.
ಗುರುವಾರ 88 ಪಾಸಿಟಿವ್ ಪ್ರಕರಣಗಳ ಜತೆಗೆ 364 ಜನರ ವರದಿ ನೆಗೆಟಿವ್ ಬಂದಿದ್ದು, ಸೋಂಕಿತರಲ್ಲಿ 301 ಜನರು ದೇವದುರ್ಗ ತಾಲೂಕಿನವರಾಗಿದ್ದಾರೆ. ರಾಯಚೂರು ತಾಲೂಕಿನ 33, ಲಿಂಗಸುಗೂರು ತಾಲೂಕಿನ 14, ಮಾನ್ವಿ ತಾಲೂಕಿನ 8 ಜನರಿದ್ದಾರೆ.
693 ಜನರ ವರದಿ ಬರುವುದು ಬಾಕಿಯಿದೆ. ಪ್ರಸ್ತುತ ನಗರದ ಒಪೆಕ್ ಆಸ್ಪತ್ರೆಯ ಐಸೋಲೇಷನ್ ವಾರ್ಡ್ನಲ್ಲಿ 244 ಜನರು ಚಿಕಿತ್ಸೆ ಪಡೆಯುತ್ತಿದ್ದು, ಸರ್ಕಾರಿ ಕ್ವಾರಂಟೈನ್ನಲ್ಲಿ 1,426 ಜನರಿದ್ದಾರೆ ಎಂದು ಜಿಲ್ಲಾಡಳಿತದ ವರದಿಯಲ್ಲಿ ತಿಳಿಸಲಾಗಿದೆ.