ETV Bharat / state

ಕಲ್ಯಾಣ ಕರ್ನಾಟಕದಲ್ಲಿ 371 ಜೆ ಕಲಂ ಅನ್ವಯ ಸಿಗ್ತಿಲ್ಲ ಮೀಸಲಾತಿ: ಅಂಬಲಗಿ - 371 J in Karnataka Karnataka reservation press meet

371 ಜೆ ಕಲಂ ವ್ಯಾಪ್ತಿಗೆ ಬರುವ ಪ್ರದೇಶಗಳ ಅಭ್ಯರ್ಥಿಗಳಿಗೆ ಶಿಕ್ಷಣದಲ್ಲಾಗಲಿ, ಔದ್ಯೋಗಿಕ ವಲಯದಲ್ಲಾಗಲಿ ಮೀಸಲಾತಿ ಸಿಗುತ್ತಿಲ್ಲ ಎಂದು ಹೈ.ಕ ಖಾಸಗಿ ಶಾಲಾ-ಕಾಲೇಜುಗಳ ಒಕ್ಕೂಟದ ಅಧ್ಯಕ್ಷ ಎಂ.ಬಿ.ಅಂಬಲಗಿ ಆರೋಪಿಸಿದ್ದಾರೆ.

ಹೈ.ಕ.ಖಾಸಗಿ ಶಾಲಾ ಕಾಲೇಜುಗಳ ಒಕ್ಕೂಟದ ಅಧ್ಯಕ್ಷ ಎಂ.ಬಿ.ಅಂಬಲಗಿ ಮಾತನಾಡಿದರು.
author img

By

Published : Oct 27, 2019, 9:05 AM IST

ರಾಯಚೂರು: ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಅಭಿವೃದ್ಧಿಗೆ ಜಾರಿಗೆ ತಂದ 371 ಜೆ ಕಲಂ ಅನುಷ್ಠಾನಗೊಳಿಸಿದ್ದರೂ ಈ ಭಾಗದ ಅಭ್ಯರ್ಥಿಗಳಿಗೆ ಶೈಕ್ಷಣಿಕ, ಔದ್ಯೋಗಿಕ ವಲಯದಲ್ಲಿ ಮೀಸಲಾತಿ ದೊರೆಯುತ್ತಿಲ್ಲ ಎಂದು ಆರೋಪಿಸಿ ಈ ಭಾಗದ ಶಿಕ್ಷಣ, ಉದ್ಯೋಗ ಮೀಸಲಾತಿಗಾಗಿ ಹೋರಾಟ ಅಭಿಯಾನ ಮಾಡಲಾಗುವುದು ಎಂದು ಈಶಾನ್ಯ ವಲಯ ಶಿಕ್ಷಕರ ವೇದಿಕೆ, ಹೈ.ಕ ಖಾಸಗಿ ಶಾಲಾ-ಕಾಲೇಜುಗಳ ಒಕ್ಕೂಟದ ಅಧ್ಯಕ್ಷ ಎಂ.ಬಿ.ಅಂಬಲಗಿ ತಿಳಿಸಿದರು.

ಹೈ.ಕ ಖಾಸಗಿ ಶಾಲಾ-ಕಾಲೇಜುಗಳ ಒಕ್ಕೂಟದ ಅಧ್ಯಕ್ಷ ಎಂ.ಬಿ.ಅಂಬಲಗಿ

371 ಜೆ ಅಡಿಯಲ್ಲಿ ಸರ್ಕಾರಿ ಮತ್ತು ಅನುದಾನಿತ ಶಿಕ್ಷಕ, ಉಪನ್ಯಾಸಕರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. 371ರ ಅಡಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಶಾಲಾ ಕಾಲೇಜುಗಳಿಗೆ ಮೂಲಭೂತ ಸೌಕರ್ಯಕ್ಕೆ ಹಣ ಬಿಡುಗಡೆ ಮಾಡಬೇಕು. ಈ ಭಾಗದ ಪ್ರಾಥಮಿಕ, ಪ್ರೌಢ ಶಾಲಾ, ಪದವಿ ಪೂರ್ವ ಶಿಕ್ಷಕರಿಗೆ ಮುಂಬಡ್ತಿ ನೀಡಬೇಕು. ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಅತಿಥಿ ಉಪನ್ಯಾಸಕರ ಸೇವೆಯನ್ನು ಕಾಯಂಗೊಳಿಸಬೇಕು. ಗುಲ್ಬರ್ಗಾ, ಬಳ್ಳಾರಿ, ಬೀದರ್, ರಾಯಚೂರು ವಿವಿಗಳಲ್ಲಿನ ಖಾಲಿಯಿರುವ ಶಿಕ್ಷಕ, ಶಿಕ್ಷಕೇತರ ಹುದ್ದೆ ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.

ಈ ಭಾಗದ ಶಿಕ್ಷಣಿಕ, ಔದ್ಯೋಗಿಕ ಹಾಗೂ ಇತರೆ ಕ್ಷೇತ್ರಗಳ ಜ್ವಲಂತ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಅಭಿಯಾನ ಮಾಡಲಾಗುವುದು. ಈ ಭಾಗದ ಪ್ರಾಥಮಿಕ, ಪದವಿ ಪೂರ್ವ, ಪಾಲಿಟೆಕ್ನಿಕ್, ಮೆಡಿಕಲ್, ಎಂಜಿನಿಯರಿಂಗ್, ಫಾರ್ಮಸಿ ಇತರೆ ವಿವಿಗಳ ಉಪನ್ಯಾಸಕರು, ಶಿಕ್ಷಕರು ಅಭಿಯಾನಕ್ಕೆ ಬೆಂಬಲಿಸಬೇಕು ಎಂದು ಅವರು ಮನವಿ ಮಾಡಿದರು.

Intro:ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆ ಗಳ ಅಭಿವೃದ್ಧಿಗೆ ಜಾರಿಗೆ ತಂದ 371 ಜೆ ಕಲಂ ಅನುಷ್ಠಾನಕ್ಕೆ ಗೊಳಿಸಿದ್ದರೂಈ ಭಾಗದ ಅಭ್ಯರ್ಥಿಗಳಿಗೆ ಶೈಕ್ಷಣಿಕ,ಔದ್ಯೋಗಿಕ ವಲಯದಲ್ಲಿ ಮೀಸಲಾತಿ ದೊರೆಯುತ್ತಿಲ್ಲ ಎಂದು ಆರೋಪಿಸಿ ಈ ಭಾಗದ ಶಿಕ್ಷಣ ಉದ್ಯೋಗ ಮೀಸಲಾತಿಗಾಗಿ ಹೋರಾಟ ಅಭಿಯಾನ ಮಾಡಲಾಗುವುದು ಎಂದು ಈಶಾನ್ಯ ವಲಯ ಶಿಕ್ಷಕರ ವೇದಿಕೆ,ಹೈ.ಕ.ಖಾಸಗಿ ಶಾಲಾ ಕಾಲೇಜುಗಳ ಒಕ್ಕೂಟದ ಅಧ್ಯಕ್ಷ ಎಂ.ಬಿ.ಅಂಬಲಗಿ ತಿಳಿಸಿದರು.

Body:ಅವರಿಂದು ಮಾಧ್ಯಮ ಗೋಷ್ಟಿಯಲ್ಲಿ ಮಾತನಾಡಿ, 371 ಜೆ ಅಡಿಯಲ್ಲಿ ಸರಕಾರಿ ಮತ್ತು ಅನುದಾನಿತ ಶಿಕ್ಷಕ,ಉಪನ್ಯಾಸ ಕರಿಗೆ ಕೇಂದ್ರ ಹಾಗೂ ರಾಜ್ಯ ಸರಕಾರ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು.
371 j ಅಡಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಶಾಲಾ ಕಾಲೇಜುಗಳಿಗೆ ಮೂಲಭುತ ಸೌಕರ್ಯ ಹಣ ಬಿಡುಗಡೆ ಮಾಡಬೇಕು,ವೇತನಾದುನ ಮಾಡಬೇಕು.
ಈ ಭಾಗದ ಪ್ರಾಥಮಿಕ, ಪ್ರೌಢಶಾಲಾ, ಪದವಿಪೂರ್ವ ಶಿಕ್ಷಕರಿಗೆ ಮುಂಬಡ್ತಿ ನೀಡಬೇಕು,ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಅತಿಥಿ ಉಪನ್ಯಾಸಕರನ್ನು ಸೇವೆಯನ್ನು ಖಾಯಂ ಗೊಳಿಸಬೇಕು.ಗುಲ್ಬರ್ಗಾ,ಬಳ್ಳಾರಿ,, ಬೀದರ್,ರಾಯಚೂರು ವಿ.ವಿ.ಗಳಲ್ಲಿ ನ ಖಾಲಿಯಿರುವ ಶಿಕ್ಷಕ,ಶಿಕ್ಷಕೇತರ ಹುದ್ದೆ ನೇಮಕ ಮಾಡಬೇಕು ಸೇರಿದಂತೆ ಈ ಭಾಗದ ಶಿಕ್ಷಣಿಕ,ಔದ್ಯೋಗಿಕ ಇತರೆ ಕ್ಷೇತ್ರಗಳ ಇತರೆ ಜ್ವಲಂತ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಅಭಿಯಾನ ಮಾಡಲಾಗುವುದು ಎಂದು ತಿಳಿಸಿ ಈ ಭಾಗದ ಪ್ರಾಥಮಿಕ, ಪದವಿಪೂರ್ವ,ಪಾಲಿಟೆಕ್ನಿಕ್,ಮೆಡಿಕಲ್,ಇಂಜಿನಿಯರಿಂಗ್, ಫಾರ್ಮಸಿ ಇತರೆ ವಿ.ವಿ.ಯ ಉಪನ್ಯಾಸಕರು,ಶಿಕ್ಷಕರು ಅಭಿಯಾನಕ್ಕೆ ಬೆಂಬಲಿಸಬೇಕು ಎಂದು ಕೋರಿದರು.

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.