ETV Bharat / state

ರಾಯಚೂರಲ್ಲಿ ಕೊರೊನಾ ರಣಕೇಕೆ: ಇಂದು ಒಂದೇ ದಿನ 35 ಪ್ರಕರಣ ಪತ್ತೆ

ರಾಯಚೂರು ಒಂದರಲ್ಲೇ ಇಂದು 35 ಪಾಸಿಟಿವ್​ ಪ್ರಕರಣಗಳು ದಾಖಲಾಗಿದ್ದು, ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಒಟ್ಟು 268ಕ್ಕೆ ಏರಿಕೆಯಾಗಿದೆ.

author img

By

Published : Jun 3, 2020, 7:43 PM IST

Updated : Jun 3, 2020, 8:35 PM IST

35 New coronavirus cases reported in Raichur
ರಾಯಚೂರಲ್ಲಿ ಕೊರೊನಾ ರಣಕೇಕೆ: ಒಂದೇ ದಿನ 35 ಪ್ರಕರಣ ಪತ್ತೆ

ರಾಯಚೂರು: ಜಿಲ್ಲೆಗೆ ಕೊರೊನಾ ಸೋಂಕು ಹೆಮ್ಮಾರಿಯಂತೆ ಕಾಡುತ್ತಿದೆ. ಇಂದು ರಾಯಚೂರು ಜಿಲ್ಲೆಯ 35 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 268ಕ್ಕೆ ಏರಿಕೆಯಾಗಿದೆ. ಸೋಂಕಿತರಲ್ಲಿ 22 ಜನ ಪುರುಷರು, 13 ಜನ ಮಹಿಳೆಯರಿದ್ದು, ಐದು ಜನರಿಗೆ ಸೋಂಕಿತರ ಸಂಪರ್ಕದಿಂದ ಸೋಂಕು ತಗುಲಿದ್ದರೆ, ಉಳಿದ 30 ಜನರು ಮಹಾರಾಷ್ಟ್ರದಿಂದ ವಲಸೆ ಬಂದಿದವರಾಗಿದ್ದಾರೆ.

ಮಸ್ಕಿ ಪಟ್ಟಣದ ಬ್ಯಾಂಕ್ ಸಿಬ್ಬಂದಿ (ಪಿ-2254)ಯಿಂದ ಮೂವರಿಗೆ ಸೋಂಕು ಹರಡಿದ್ದು, ಇವರಲ್ಲಿ ಇಬ್ಬರು ಬ್ಯಾಂಕ್ ಸಿಬ್ಬಂದಿಯಾಗಿದ್ದು, ಮತ್ತೊಬ್ಬ 70 ವರ್ಷದ ಗ್ರಾಹಕನಾಗಿದ್ದಾನೆ. ಆತನಿಂದ ಜಿಲ್ಲೆಯ ಒಟ್ಟು ನಾಲ್ವರಿಗೆ ಸೋಂಕು ತಗುಲಿದಂತಾಗಿದೆ.

ಮುಂಬೈನಿಂದ ಆಗಮಿಸಿದ್ದ ಮಹಿಳೆ ಪಿ-1460 ಸಂಪರ್ಕದಿಂದ 14 ವರ್ಷದ ಬಾಲಕನಿಗೂ ಸೋಂಕು ತಗುಲಿದ್ದು, ಪಿ-1816 ಸಂಪರ್ಕದಿಂದ 45 ವರ್ಷದ ಪುರುಷನಿಗೂ ಸೋಂಕು ತಗುಲಿದೆ.

ಜಿಲ್ಲೆಯಲ್ಲಿ ಇಂದು 341 ಜನರ ಗಂಟಲಿನ ದ್ರವ ಮಾದರಿಯನ್ನು ಕೋವಿಡ್-19 ಶಂಕೆ ಹಿನ್ನೆಲೆಯಲ್ಲಿ ವರದಿಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇಂದು ಬಂದ ವರದಿಯಲ್ಲಿ 1,011 ನೆಗೆಟಿವ್ ಬಂದಿದ್ದು, 35 ಪಾಸಿಟಿವ್ ಆಗಿರುವುದು ದೃಢಪಟ್ಟಿದೆ.

ಜಿಲ್ಲೆಯಲ್ಲಿ ಈವರೆಗೆ 16,560 ಜನರ ಗಂಟಲು ದ್ರವ ಮಾದರಿಯನ್ನು ಕೊರೊನಾ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಅವುಗಳಲ್ಲಿ 15,141 ವರದಿಗಳು ನೆಗೆಟಿವ್ ಆಗಿವೆ. ಉಳಿದ 1,145 ಸ್ಯಾಂಪಲ್​ಗಳ ಫಲಿತಾಂಶ ಬರಬೇಕಿದೆ. ಫಿವರ್ ಕ್ಲಿನಿಕ್​​ಗಳಲ್ಲಿಂದು 707 ಜನರನ್ನು ಥರ್ಮಲ್ ಸ್ಕ್ರೀನಿಂಗ್​​​​​​ಗೆ ಒಳಪಡಿಸಲಾಗಿದೆ.

ಕೊರೊನಾ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ್​​​ ಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Last Updated : Jun 3, 2020, 8:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.