ರಾಯಚೂರು : ಜಿಲ್ಲೆಯ ನಾರಾಯಣಪುರ (ಬಸವಸಾಗರ) ಜಲಾಶಯದಿಂದ ಮೂರುವರೆ ಲಕ್ಷ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿದು ಬಿಡಲಾಗಿದ್ದು, ನದಿ ಪಾತ್ರದ ಪ್ರದೇಶಗಳಾದ ಲಿಂಗಸುಗೂರು, ದೇವದುರ್ಗ, ರಾಯಚೂರು ತಾಲೂಕುಗಳಲ್ಲಿ ಪ್ರವಾಹ ಭೀತಿ ಶುರುವಾಗಿದೆ.
ಇಂದು ಬೆಳಗ್ಗೆ 7 ಗಂಟೆಗೆ ಜಲಾಶಯದಿಂದ 3.5 ಲಕ್ಷ ಕೂಸೆಕ್ ನೀರನ್ನು ಕ್ರಸ್ಟ್ ಗೇಟ್‌ಗಳ ಮೂಲಕ ಕೃಷ್ಣಾ ನದಿಗೆ ಹರಿಸಲಾಗಿದೆ. ಇದರ ಪರಿಣಾಮ ದೇವದುರ್ಗ ತಾಲೂಕಿನ ಹೂವಿನಹೆಡಗಿ ಸೇತುವೆ ಸಂಪೂರ್ಣ ಮುಳಗಡೆಯಾಗಿದ್ದು, ಸಂಚಾರ ನಿರ್ಬಂಧಿಸಲಾಗಿದೆ. ದೇವದುರ್ಗದಿಂದ ಕಲಬುರಗಿ, ಶಹಾಪುರ, ಸುರಪುರಕ್ಕೆ ಸಂರ್ಪಕ ಕಲ್ಪಿಸುವ ಪ್ರಮುಖ ಸೇತುವೆ ಇದಾಗಿದೆ.
ಓದಿ : ಚುರುಕು ಪಡೆದ ಮುಂಗಾರು: ಕೆಆರ್ಎಸ್ನಲ್ಲಿ 104.38 ಅಡಿ ನೀರು ಸಂಗ್ರಹ
ಈಗಾಗಲೇ ಲಿಂಗಸುಗೂರು ತಾಲೂಕಿನ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿ ನಡುಗಡ್ಡೆ ಪ್ರದೇಶಗಳಿಗೆ ಸಂರ್ಪಕ ಕಡಿತಗೊಂಡಿದೆ. ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ವ್ಯಾಪಕ ಮಳೆ ಸುರಿಯುತ್ತಿದ್ದು, ಜಲಾಶಯದ ಒಳಹರಿವು ಹೆಚ್ಚಳವಾಗಿದೆ. ಹೆಚ್ಚುವರಿ ನೀರಿನ ನದಿಗೆ ಹರಿಸಲಾಗುತ್ತಿದೆ.
ಜಲಾಶಯದಿಂದ ನೀರು ಹರಿ ಬಿಟ್ಟಿರುವ ಹಿನ್ನೆಲೆ ಜನ, ಜಾನುವಾರು ನದಿ ತೀರಕ್ಕೆ ತೆರಳದಂತೆ ಡಂಗುರ, ಮೈಕ್‌ಗಳ ಮೂಲಕ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.