ರಾಯಚೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ಹರಡುತ್ತಿದ್ದು, ಇಂದು 23 ಜನರಿಗೆ ಪಾಸಿಟಿವ್ ದೃಢವಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 598ಕ್ಕೆ ಏರಿಕೆಯಾಗಿದೆ.
ಇಂದು ದೃಢವಾದ ಸೋಂಕಿತರಲ್ಲಿ ಮಾನ್ವಿ ತಾಲೂಕಿನ 8, ದೇವದುರ್ಗ ತಾಲೂಕಿನ 7, ಸಿಂಧನೂರು ತಾಲೂಕಿನ 5 ಮತ್ತು ರಾಯಚೂರು ತಾಲೂಕಿನ 3 ಜನರಿದ್ದು, ಇದರಲ್ಲಿ ಬೆಂಗಳೂರಿನಿಂದ ಬಂದ ಒಬ್ಬ ವ್ಯಕ್ತಿಯಿದ್ದರೆ, ಇನ್ನೆರಡು ಐಎಲ್‌ಐ ಪ್ರಕರಣಗಳಾಗಿವೆ. ಮೂವರ ಸಂಪರ್ಕ ಪತ್ತೆ ಕಾರ್ಯ ನಡೆದಿದೆ.
ಪ್ರಯೋಗಾಲಯದಿಂದ ಇನ್ನೂ 2,041 ಜನರ ವರದಿ ಬರುವುದು ಬಾಕಿಯಿದೆ. ಜಿಲ್ಲೆಯಲ್ಲಿ ಇಂದಿನ 23 ಪ್ರಕರಣಗಳು ಸೇರಿದಂತೆ 154 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆಗೆ ಐಸೋಲೇಷನ್ ವಾರ್ಡ್‌ನಲ್ಲಿ 117 ಜನರಿಗೆ, ಕ್ವಾರಂಟೈನ್‌ನಲ್ಲಿ 37 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.