ರಾಯಚೂರು: ಜಿಲ್ಲೆಯಲ್ಲಿ ಇಂದು 220 ಕೊರೊನಾ ಪಾಸಿಟಿವ್ ದೃಢಪಟ್ಟಿವೆ. ಈ ಮೂಲಕ ಸೋಂಕಿತರ ಸಂಖ್ಯೆ 4,742ಕ್ಕೆ ತಲುಪಿದೆ.
ಸೋಂಕಿತರ ತಾಲೂಕುವಾರು ವಿವರ:
ರಾಯಚೂರು ತಾಲೂಕಿನಲ್ಲಿ 115, ಮಾನವಿ 30, ಲಿಂಗಸೂಗೂರು 39, ಸಿಂಧನೂರು 25, ದೇವದುರ್ಗದಲ್ಲಿ 11 ಜನರಲ್ಲಿ ಸೋಂಕು ಪತ್ತೆಯಾಗಿದೆ.
ಗುಣಮುಖ:
ಜಿಲ್ಲೆಯಲ್ಲಿ ಈವರೆಗೆ 2,955 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇನ್ನು, 1,740 ಸಕ್ರಿಯ ಪ್ರಕರಣಗಳಿವೆ. ಇಂದಿನ ಇಬ್ಬರು ಸೇರಿದಂತೆ ಸೋಂಕಿನಿಂದ ಇಲ್ಲಿಯವರೆಗೆ 51 ಜನ ಮೃತಪಟ್ಟಿದ್ದಾರೆ. ಸೋಂಕಿತರನ್ನು ರೋಗದ ಗುಣಲಕ್ಷಣಗಳ ಆಧಾರದ ಮೇಲೆ ಕೋವಿಡ್ ಕೇರ್ ಸೆಂಟರ್, ವಿವಿಧ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಿ ಸೋಂಕಿತರ ಸಂಪರ್ಕ ಪತ್ತೆ ಹಚ್ಚಲಾಗುತ್ತದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.