ETV Bharat / state

ಪ್ರವಾಹದ ವೇಳೆ ಅಂಬ್ಯುಲೆನ್ಸ್​ಗೆ ದಾರಿ ತೋರಿಸಿದ ಬಾಲಕನಿಗೆ ಜಿಲ್ಲಾಡಳಿತದಿಂದ ಶೌರ್ಯ ಪ್ರಶಸ್ತಿ!

author img

By

Published : Aug 15, 2019, 9:31 PM IST

ತುಂಬಿ ಹರಿಯುತ್ತಿದ್ದ ಕೃಷ್ಣಾ ನದಿ ಪ್ರವಾಹದಲ್ಲಿ ಅಂಬುಲೆನ್ಸ್ ಗೆ ದಾರಿ ತೋರಿಸಿ ಸಾಹಸ ಮೆರೆದ ಬಾಲಕನಿಗೆ ರಾಯಚೂರು ಜಿಲ್ಲಾಡಳಿತದಿಂದ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಸಾಹಸ ಸೇವಾ ಪ್ರಶಸ್ತಿ/ bravery award

ರಾಯಚೂರು: ಕೃಷ್ಣಾ ನದಿ ಪ್ರವಾಹದ ವೇಳೆ ಮುಳುಗಿದ್ದ ಸೇತುವೆ ಮೇಲೆ ಅಂಬ್ಯುಲೆನ್ಸ್​ ದಾಟಿ ಹೋಗಲು ಸರಿಯಾಗಿ ರಸ್ತೆ ತೋರಿಸಿ ಶೌರ್ಯ ಮೆರೆದ ಬಾಲಕನಿಗೆ ಇದೀಗ ಅಲ್ಲಿನ ಜಿಲ್ಲಾಡಳಿತ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದೆ.

ರಾಯಚೂರು ಜಿಲ್ಲೆಯ ದೇವದುರ್ಗದ ಹಿರೇರಾಯನಕುಂಪಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವೆಂಕಟೇಶನಿಗೆ ಜಿಲ್ಲಾಧಿಕಾರಿ ಶರತ್​ ಬಿ. ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಈ ಪ್ರಶಸ್ತಿ ನೀಡಿದ್ದಾರೆ. ಮಹಿಳೆಯೊಬ್ಬರ ಮೃತದೇಹ ತೆಗೆದುಕೊಂಡು ಬಂದಿದ್ದ ಅಂಬ್ಯುಲೆನ್ಸ್​ ಹಿರೇರಾಯಕುಂಪಿ ಸೇತುವೆ ದಾಟಿ ಯಾದಗಿರಿ ಜಿಲ್ಲೆಯ ಮಾಚನೂರು ಗ್ರಾಮಕ್ಕೆ ಹೋಗಬೇಕಾಗಿತ್ತು. ಆದರೆ ಈ ವೇಳೆ ಸೇತುವೆ ಸಂಪೂರ್ಣವಾಗಿ ಮುಳುಗಿ ಹೋಗಿತ್ತು. ಈ ವೇಳೆ ಬಾಲಕ ನೀರಿನಲ್ಲಿ ಇಳಿದು ಅಂಬ್ಯುಲೆನ್ಸ್​ಗೆ ದಾರಿ ತೋರಿಸಿ ಸಾಹಸ ಮೆರೆದಿದ್ದ.

ಬಾಲಕನಿಗೆ ಶೌರ್ಯ ಪ್ರಶಸ್ತಿ

ಮುಳುಗಡೆಯಾಗಿದ್ದ ಸೇತುವೆ ಮಾರ್ಗದ ಉದ್ದಕ್ಕೂ ನೀರಿನಲ್ಲಿ ನಡೆಯುತ್ತಾ ಹೋಗಿ, ಅಂಬ್ಯುಲೆನ್ಸ್​​ಗೆ ದಾರಿ ತೊರಿಸಿದ್ದ. ಇನ್ನು ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಜತೆಗೆ ಬಾಲಕನ ಸಾಹಸಕ್ಕೆ ಎಲ್ಲಡೆಯಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಜಿಲ್ಲಾಡಳಿತ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದೆ.

Intro:Body:

ರಾಯಚೂರು

ಕೃಷ್ಣಾ ಪ್ರವಾಹದ ವೇಳೆ ಅಂಬುಲೇನ್ಸ್ ಗೆ ದಾರಿ ತೋರಿಸಿ ಸಾಹಸ ಮೇರೆದ ಬಾಲಕನಿಗೆ ಪ್ರಶಸ್ತಿ.

ಬಾಲಕ ವೆಂಕಟೇಶಗೆ ಸಾಹಸ ಸೇವಾ ಪ್ರಶಸ್ತಿ ಗೌರವ.

ರಾಯಚೂರು ಜಿಲ್ಲಾಡಳತದಿಂದ ಪ್ರಶಸ್ತಿ ನೀಡಿ ಪ್ರೋತ್ಸಾಹ.

ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಣೆ.

ವೇಂಕಟೇಶಗೆ ಪ್ತಶಸ್ತಿ ನೀಡಿ ಗೌರವಿಸಿದ ಜಿಲ್ಲಾಧಿಕಾರಿ ಶರತ್.ಬಿ.

ಹಿರೇರಾಯಕುಂಪಿ ಗ್ರಾಮದಲ್ಲಿ ಅಂಬುಲೇನ್ಸ್ ಗೆ ದಾರಿ ತೋರಿಸಿ ಸಾಹಸ ಮೇರೆದಿದ್ದ ಬಾಲಕ.

ದೇವದುರ್ಗ ತಾಲ್ಲೂಕಿನ ಹಿರೇರಾಯಕುಂಪಿ ಗ್ರಾಮ.

ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕು.

ಕೃಷ್ಣೆಯ ಪ್ರವಾಹಕ್ಕೆ ಹಿರೇರಾಯಕುಂಪಿ- ಗೂಗಲ್ ಸೇತುವೆ ಮುಳುಗಡೆ ಆಗಿತ್ತು.

ಮುಳುಗಡೆ ಸೇತುವೆಯಲ್ಲಿ ಬರುತ್ತಿದ್ದ ಮೃತದೇಹ ಹೊತ್ತ ಅಂಬುಲೇನ್ಸ್.

ಈ ವೇಳೆ ಬಾಲಕ ನೀರಿನಲ್ಲಿ ಅಂಬುಲೇನ್ಸ್ ಗೆ ತೋರಿಸಿ  ಸಾಹಸ ಮೇರೆದಿದ್ದ.

ಅಪಾಯವನ್ನು ಲೆಕ್ಕಿಸದೇ ಸಾಹಸ ಮೇರೆದಿದ್ದ ಸಾಹಸಿ ಬಾಲಕ ವೆಂಕಟೇಶ್.

ಬಾಲಕನ ಸಾಹಸಕ್ಕೆ ಪ್ರಶಸ್ತಿಯ ಗರಿ‌.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.