ರಾಯಚೂರು: ಜಿಲ್ಲೆಯಲ್ಲಿ ಇಂದು ಸೋಂಕಿತರ ಸಂಖ್ಯೆ ಶತಕ ದಾಟಿದೆ. ಒಂದೇ ದಿನ 116 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೆ ಪ್ರಕರಣಗಳ ಸಂಖ್ಯೆ 930ಕ್ಕೆ ಏರಿದೆ.
ರಾಯಚೂರು ತಾಲೂಕಿನಲ್ಲಿ 48, ದೇವದುರ್ಗ 9, ಸಿಂಧನೂರು 15, ಮಾನವಿ 36, ಲಿಂಗಸೂಗೂರು 8 ಪ್ರಕರಣಗಳು ಪತ್ತೆಯಾಗಿವೆ. ಪತ್ತೆಯಾಗಿರುವ ಸೋಂಕಿತರನ್ನು ರೋಗದ ಲಕ್ಷಣದ ಆಧಾರದ ಮೇಲೆ ಕ್ವಾರಂಟೈನ್ ಮಾಡಲಾಗಿದೆ.
ಎಂಟು ದಿನಗಳಿಂದ ಸಾವಿರಕ್ಕೂ ಗಂಟಲು ದ್ರವದ ಮಾದರಿಯನ್ನು ಬೆಂಗಳೂರು ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. ಅದರಲ್ಲಿ 116 ಮಂದಿಗೆ ಕೊರೊನಾ ಕಾಣಿಸಿಕೊಂಡಿದೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.