ಮೈಸೂರು: ಯುವಕನೋರ್ವ ವಿಡಿಯೋ ಮಾಡಿಟ್ಟು ನೇಣಿಗೆ ಶರಣಾಗಿರುವ ಘಟನೆ ನಗರದ ವಿ.ವಿ. ಮೊಹಲ್ಲಾದಲ್ಲಿ ನಡೆದಿದೆ.
ವಿ.ವಿ ಮೊಹಲ್ಲಾದ ನಿವಾಸಿ ಸಿದ್ದಾರ್ಥ್ (24) ಮೃತ ಯುವಕ. ಈತ ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ತನಗೆ ಹುಡುಗಿವೋರ್ವಳು ಮೋಸ ಮಾಡಿದ್ದಾಳೆ ಎಂದು ಆರೋಪಿಸಿರುವ ಯುವಕ ವಿಡಿಯೋ ಮಾಡಿಟ್ಟು ಬಾರದಲೋಕಕ್ಕೆ ತೆರಳಿದ್ದಾನೆ.
ಈ ಸಂಬಂಧ ವಿ.ವಿ. ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.