ಮೈಸೂರು: ಸಾಲಭಾದೆ ತಾಳಲಾರದೆ ಯುವ ರೈತನೋರ್ವ ತನ್ನ ಜಮೀನಿನಲ್ಲಿರುವ ಹೊಂಗೆ ಮರದಲ್ಲಿ ನೇಣಿಗೆ ಶರಣಾಗಿರುವ ಘಟನೆ ನಂಜನಗೂಡು ತಾಲ್ಲೂಕಿನ ಕುರಹಟ್ಟಿ ಗ್ರಾಮದಲ್ಲಿ ನಡೆದಿದೆ.
ನೇಣಿಗೆ ಶರಣಾದ ಯುವ ರೈತ ಕೆ.ಪಿ ನಂದಿಶ್ (28).
ಈತ ಗ್ರಾಮದ ವಿವಿಧ ಸ್ವಸಹಾಯ ಸಂಘಗಳು ಹಾಗೂ ಇತರೆ ಮೂಲಗಳಿಂದ ಸುಮಾರು 4.50 ಲಕ್ಷ ರೂ ಸಾಲ ಮಾಡಿಕೊಂಡಿದ್ದ ಎಂಬ ಮಾಹಿತಿ ದೊರೆತಿದೆ. ಹೊಲದಲ್ಲಿ ಬೆಳೆದಿದ್ದ ಬೆಳೆ ಕೈಕೊಟ್ಟಿದ್ದರಿಂದ ಪಡೆದ ಸಾಲಕ್ಕೆ ಬಡ್ಡಿ ಕಟ್ಟಲಾಗದೆ ಮನನೊಂದು ನೇಣಿಗೆ ಶರಣಾಗಿದ್ದಾನೆ ಎನ್ನಲಾಗಿದೆ.
ಮೃತ ವ್ಯಕ್ತಿಗೆ 7 ವರ್ಷದ ಹೆಣ್ಣು ಮಗುವಿದ್ದು, ಪತ್ನಿ ಗರ್ಭಿಣಿಯಾಗಿದ್ದಾಳೆ.
ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.