ಮೈಸೂರು: ಪ್ಲಾಸ್ಟಿಕ್ ಈಗ ಎಲ್ಲರಿಗೂ ದೊಡ್ಡ ತಲೆನೋವಾಗಿದೆ. ಇಂತಹ ಸಮಸ್ಯೆಯನ್ನೇ ಪರಿವರ್ತಿಸಿ ಅದರಿಂದ ಉಪಯೋಗ ಪಡೆಯಬಹುದು ಎಂಬುದನ್ನು ತೋರಿಸುತ್ತಿದ್ದಾರೆ ಸಾಂಸ್ಕೃತಿಕ ನಗರಿಯ ಯುವ ಇಂಜಿನಿಯರ್ಸ್. ಇದೀಗ ಇವರಿಗೆ ಸಹಾಯ ಮಾಡಲು ಮೈಸೂರು ಮಹಾನಗರ ಪಾಲಿಕೆಯೂ ಮುಂದೆ ಬಂದಿದೆ.
ದೇಶದ ನಗರಗಳನ್ನು ಭಾದಿಸುತ್ತಿರುವ ಅತಿ ದೊಡ್ಡ ಸಮಸ್ಯೆ ಎಂದರೆ ಅದು ಬಳಸಿ ಬಿಸಾಡುವ ಪ್ಲಾಸ್ಟಿಕ್. ಇಂತಹ ಪ್ಲಾಸ್ಟಿಕ್ ನಿಂದ ಚೇರ್, ಕ್ಲಬ್ಸ್, ರೋಡ್ ಡಿವೈಡರ್ ಹಾಗೂ ಫುಟ್ ಬಾತ್ ಗೆ ಹಾಕುವ ಟೈಲ್ಸ್ ಗಳನ್ನು ತಯಾರಿಸಬಹುದಾಗಿದೆ ಎಂಬುದನ್ನು ಇವರು ತೋರಿಸಿಕೊಟ್ಟಿದ್ದಾರೆ.
ಮರುಬಳಕೆ ಹೇಗೆ: ನಿತ್ಯ ಬಳಸಿದ ಪ್ಲಾಸ್ಟಿಕ್ ತೆಗೆದುಕೊಂಡು ಸಣ್ಣ ಸಣ್ಣ ಪುಡಿಯಾಗಿ ಮಾಡಿ ಯಂತ್ರದ ಒಳಗೆ ಹಾಕಿ ಅದನ್ನು ಕರಗಿಸಿ ಟೈಲ್ಸ್ ಮಾದರಿಯ ವಸ್ತುಗಳನ್ನು ತಯಾರಿಸುತ್ತಾರೆ. ಇವು 10 ರಿಂದ 15 ವರ್ಷಗಳ ಕಾಲ ಬಾಳಿಕೆ ಬರುತ್ತದೆ. ಇದು 120 ಡಿಗ್ರಿ ಸೆಲ್ಸಿಯಸ್ ಶಾಖ ಹಾಗೂ 60 ಟನ್ ಭಾರವನ್ನು ತಡೆಯುವ ಶಕ್ತಿ ಹೊಂದಿದ್ದು ಕಡಿಮೆ ಬೆಲೆಗೂ ಸಿಗುತ್ತದೆ.
ಮೈಸೂರಿನ ಮಹಾನಗರ ಪಾಲಿಕೆಯು ಈ ಇಂಜಿನಿಯರಿಂಗ್ ನಗರದ ಕಸದ ಡಂಪಿಂಗ್ ಯಾರ್ಡ್ ಇರುವ ಜೆ.ಪಿ.ನಗರದಲ್ಲಿ ಒಂದು ಸ್ಥಳ ಕೊಟ್ಟಿದ್ದು, ಈ ಯುವ ಇಂಜಿನಿಯರ್ ಗಳು ಅಲ್ಲಿ ಕಾರ್ಪೊರೇಷನ್ ನಿಂದ ಬಳಸಿದ ಪ್ಲಾಸ್ಟಿಕ್ ಸಂಗ್ರಹದ 2 ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನ ಪ್ರತಿ ದಿನ ಇವರಿಗೆ ನೀಡುತ್ತದೆ.
3 ತಿಂಗಳಲ್ಲಿ ಪ್ಲಾಸ್ಟಿಕ್ ನಿಂದ ಬಳಕೆಯಾದ ವಸ್ತುಗಳನ್ನು ತಯಾರಿಸುವ ಕಾರ್ಖಾನೆ ತಲೆ ಎತ್ತಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರದ ಸಿಪೆಟ್ ವಿಜ್ಞಾನಿಗಳಿಂದ ಎಲ್ಲ ರೀತಿಯ ತಂತ್ರಜ್ಞಾನ ಹಾಗೂ ಮಾಹಿತಿಯನ್ನು ಪಡೆದುಕೊಳ್ಳಲಾಗಿದೆ. ಇನ್ನು ಮುಂದೆ ಪ್ಲಾಸ್ಟಿಕ್ ಎಂದರೆ ಭಯ ಬೇಡ ಇಂತಹ ಪ್ಲಾಸ್ಟಿಕ್ ನ್ನ ಮುಕ್ತ ಮಾಡಲು ಈ ವಿಧಾನ ಬಳಕೆ ಮಾಡಿಕೊಳ್ಳುತ್ತಿದ್ದೇವೆ ಎಂದು ಯುವ ಇಂಜಿನಿಯರ್ ದರ್ಶನ್ ಈಟಿವಿ ಭಾರತ್ನೊಂದಿಗೆ ಮಾತನಾಡಿ ಈ ತಂತ್ರಜ್ಞಾನದ ಬಗ್ಗೆ ವಿವರಿಸಿದ್ದಾರೆ.