ಮೈಸೂರು: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಮನೆಯಿಂದಲೇ ಯೋಗ ಎಂಬ ಕಾರ್ಯಕ್ರಮಕ್ಕೆ ನಗರದ ಜನರು ಉತ್ತಮವಾಗಿ ಸ್ಪಂದಿಸಿದ್ದಾರೆ.
ಇಂದು ಯೋಗ ದಿನದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ವಿವಿಧ ಯೋಗ ಸಂಸ್ಥೆಗಳ ಸಹಯೋಗದೊಂದಿಗೆ ನಗರದ ಪ್ರತಿಯೊಂದು ಮನೆ ಹಾಗೂ ಮಹಡಿಯ ಮೇಲೆ ಯೋಗ ಮಾಡಲು ಕರೆ ಕೊಟ್ಟಿದ್ದು, ಈ ಯೋಗದ ಒಂದು ಫೋಟೋವನ್ನು ಆನ್ಲೈನ್ ನಲ್ಲಿ ಹಾಕಿದರೆ ಆನ್ಲೈನ್ ನಲ್ಲೇ ಪ್ರಮಾಣಪತ್ರ ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಸಾಂಸ್ಕೃತಿಕ ನಗರಿಯಲ್ಲಿ ಒಂದು ಲಕ್ಷ ಜನರಿಗೆ ಮನೆಯಿಂದಲೇ ಯೋಗ ಮಾಡಲು ಕರೆ ನೀಡಲಾಗಿತ್ತು.
![ಯೋಗ ಮಾಡಿದ ಜನ](https://etvbharatimages.akamaized.net/etvbharat/prod-images/kn-mys-1-yoga-day-news-7208092_21062020090318_2106f_1592710398_729.jpg)
ಪರಕಾಲ ಮಠದಲ್ಲಿ ಯೋಗ: ಮಹಾರಾಜರು ಯೋಗ ಮಾಡಲು ನೀಡಿದ್ದ ಜಾಗ ಪರಕಾಲ ಮಠ. ಈ ಮಠದಲ್ಲಿ ಕಳೆದ 150 ವರ್ಷಗಳಿಂದ ಯೋಗ ಮಾಡಿಕೊಂಡು ಬರಲಾಗುತ್ತಿತ್ತು. ಇಂದು ಯೋಗ ದಿನದ ಹಿನ್ನೆಲೆಯಲ್ಲಿ ಮಠದ ಮಹಡಿಯ ಮೇಲೆ ಯೋಗ ಮಾಡುವ ಮೂಲಕ ಯೋಗ ದಿನವನ್ನು ಆಚರಿಸಲಾಯಿತು. ಗ್ರಹಣ ಹಾಗೂ ಅಮವಾಸೆಯ ದಿನ ಯೋಗ ದಿನ ಬಂದಿದ್ದರೂ ಸಹ ಜನರು ಭಾಗವಹಿಸಿದ್ದರು ಎಂದು ನಿವೃತ್ತ ಬ್ಯಾಂಕ್ ಮ್ಯಾನೇಜರ್ ಪ್ರಭಾಕರ್ ಹೇಳಿದ್ದಾರೆ. ಮತ್ತೊಂದೆಡೆ ಅರಮನೆ ಮುಂಭಾಗದಲ್ಲೂ ಸಹ ಯೋಗ ಮಾಡಲಾಯಿತು.