ETV Bharat / state

ಕಳೆ ಕೀಳುವಾಗ ವಿದ್ಯುತ್​ ತಂತಿ ಬಿದ್ದು ಮಹಿಳೆ ಸಾವು.. - ವಿದ್ಯುತ್ ತಂತಿ

ತೋಟದಲ್ಲಿ ಕಳೆ ಕೀಳುವ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿ ಬಿದ್ದು ಮಹಿಳೆ ಮೃತಪಟ್ಟಿರುವ ಘಟನೆ ತಾಲೂಕಿನ ವರುಣಾ ಗ್ರಾಮದಲ್ಲಿ ನಡೆದಿದೆ.

Women died
author img

By

Published : Aug 31, 2019, 9:33 PM IST

ಮೈಸೂರು : ಬಾಳೆ ತೋಟದಲ್ಲಿ ಕಳೆ ಕೀಳುವ ಸಂದರ್ಭದಲ್ಲಿ ವಿದ್ಯುತ್ ತಂತಿ ಬಿದ್ದು ಮಹಿಳೆ ಮೃತಪಟ್ಟಿರುವ ಘಟನೆ ತಾಲೂಕಿನ ವರುಣಾ ಗ್ರಾಮದಲ್ಲಿ ನಡೆದಿದೆ.

ಗೌರಮ್ಮ(55) ಎಂಬುವರು ಮೃತ ಮಹಿಳೆ. ಗೌರಮ್ಮ ಬಾಳೆ ತೋಟದಲ್ಲಿದ್ದ ಅನಪೇಕ್ಷಿತವಾಗಿ ಬೆಳೆದಿದ್ದ ಕಳೆ ಕೀಳುತ್ತಿದ್ದರು. ಈ ವೇಳೆ ವಿದ್ಯುತ್ ಕಂಬದ ತಂತಿ ಕೆಳಗೆ ಬಿದ್ದಿದೆ. ಪರಿಣಾಮ ವಿದ್ಯುತ್ ಸ್ಪರ್ಶದಿಂದ ಅಲ್ಲಿಯೇ ಬಿದ್ದು ಒದ್ದಾಡಿ ಗೌರಮ್ಮ ಸಾವನ್ನಪ್ಪಿದ್ದಾರೆ.

ಕಳೆದ ಮೂರ್ನಾಲ್ಕು ವರ್ಷದಿಂದ ವಿದ್ಯುತ್ ತಂತಿ ಬದಲಾವಣೆ ಮಾಡಿಕೊಡುವಂತೆ ಗ್ರಾಮಸ್ಥರು ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೆ, ಯಾವುದೇ ಪ್ರಯೋಜನವಾಗಿರಲಿಲ್ಲ. ಈಗ ಈ ಘಟನೆಯಿಂದ ಆಕ್ರೋಶಗೊಂಡಿರುವ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಗುಡುಗಿದ್ದಾರೆ.

Intro:crimeBody:ಮೈಸೂರು: ಬಾಳೆ ತೋಟದಲ್ಲಿ ಅನಪೇಕ್ಷಿತ ಕಳೆ ಕೀಳುವ ಸಂದರ್ಭದಲ್ಲಿ ವಿದ್ಯುತ್ ತಂತಿ ಬಿದ್ದು ಮಹಿಳೆ ಮೃತಪಟ್ಟಿರುವ ಘಟನೆ ಮೈಸೂರು ತಾಲ್ಲೂಕಿನ ವರುಣಾಗ್ರಾಮದಲ್ಲಿ ನಡೆದಿದೆ.
ಗ್ರಾಮದ ರಾಜಶೇಖರ ಆರಾಧ್ಯ ಅವರ ಪತ್ನಿ ಗೌರಮ್ಮ(೫೫) ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಮಹಿಳೆ. ಬಾಳೆ ತೋಟದಲ್ಲಿ ಇದ್ದ ಅನಪೇಕ್ಷಿತ ಕಳೆ ಕೀಳುತ್ತಿದ್ದ ಸಂದರ್ಭದಲ್ಲಿ ಮೇಲೆ ಹಾದು ಹೋಗಿದ್ದ ವಿದ್ಯುತ್ ಕಂಬದ ತಂತಿ ಕೆಳಗೆ ಬಿದ್ದಿದೆ. ವಿದ್ಯುತ್ ಸ್ಪರ್ಶದಿಂದ ಅಲ್ಲಿಯೇ ಬಿದ್ದು ಒದ್ದಾಡಿ ಗೌರಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಮೃತ ಮಹಿಳೆಯ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತು. ಕಳೆದ ಮೂರ್ನಾಲ್ಕು ವರ್ಷದಿಂದ ವಿದ್ಯುತ್ ತಂತಿ ಬದಲಾವಣೆ ಮಾಡಿಕೊಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದರು.ಯಾವುದೇ ಪ್ರಯೋಜನವಾಗದೇ ಹಿನ್ನೆಲೆಯಲ್ಲಿ ಜೀವ ಬಲಿ ತೆತ್ತಿದೆ ಎಂದು ಅಧಿಕಾರಿಗಳ ಚೆಸ್ಕಾಂ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. Conclusion:crime
ETV Bharat Logo

Copyright © 2025 Ushodaya Enterprises Pvt. Ltd., All Rights Reserved.