ETV Bharat / state

ವೈದ್ಯಕೀಯ ಶಿಕ್ಷಣ ಪಡೆಯಲು ಹೆಚ್ಚಿನ ವಿದ್ಯಾರ್ಥಿಗಳು ಉಕ್ರೇನ್​ಗೆ ಹೋಗೋದೇಕೆ ಗೊತ್ತಾ? - ಉಕ್ರೇನ್​ ವೈದ್ಯಕೀಯ ಶಿಕ್ಷಣ

ಉಕ್ರೇನ್​ನಲ್ಲಿ​ ವೈದ್ಯಕೀಯ ಶಿಕ್ಷಣದ ಶುಲ್ಕ ಭಾರತದ ವೈದ್ಯಕೀಯ ಕಾಲೇಜಗಳ ಶುಲ್ಕಕಿಂತ ತುಂಬಾ ಕಡಿಮೆ ಇರುತ್ತದೆ. ಭಾರತದ ಒಂದು ವರ್ಷದ ವೈದ್ಯಕೀಯ ಶಿಕ್ಷಣಕ್ಕೆ ತಗುಲುವ ಶುಲ್ಕ ಹಾಗೂ ಇತರೆ ವಂತಿಕೆಗಳ ದರದಲ್ಲಿ ಉಕ್ರೇನ್​ನಲ್ಲಿ ಇಡೀ ವೈದ್ಯಕೀಯ ಶಿಕ್ಷಣವನ್ನೇ ಮುಗಿಸಿಕೊಂಡು ಬರಬಹುದು‌. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಧ್ಯಮ ವರ್ಗದ ವಿದ್ಯಾರ್ಥಿಗಳು ಉಕ್ರೇನ್​ಗೆ ತೆರಳುತ್ತಾರೆ.

ಉಕ್ರೇನ್
ಉಕ್ರೇನ್
author img

By

Published : Feb 26, 2022, 1:20 PM IST

ಮೈಸೂರು: ವೈದ್ಯಕೀಯ ಶಿಕ್ಷಣ ಪಡೆಯಲು ಉಕ್ರೇನ್​ಗೆ ಹೆಚ್ಚಿನ ಸಂಖ್ಯೆಯಲ್ಲಿ ಮಧ್ಯಮ ವರ್ಗದ ವಿದ್ಯಾರ್ಥಿಗಳು ಹೋಗುತ್ತಾರೆ. ಏಕೆಂದರೆ, ಉಕ್ರೇನ್​ನಲ್ಲಿ ವೈದ್ಯಕೀಯ ಶಿಕ್ಷಣದ ಗುಣಮಟ್ಟ ಉತ್ತಮವಾಗಿದ್ದು, ಜೊತೆಗೆ ಕಡಿಮೆ ದರದಲ್ಲಿ ಶಿಕ್ಷಣ ದೊರೆಯುತ್ತದೆ.

ಹೌದು, ಭಾರತಕ್ಕಿಂತ ತೀರ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಶಿಕ್ಷಣ ದೊರೆಯುತ್ತದೆ ಎಂಬ ಕಾರಣಕ್ಕಾಗಿ ದೇಶದ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಕ್ರೇನ್​ಗೆ ತೆರಳುತ್ತಾರೆ.‌ ಅಲ್ಲಿನ ವೈದ್ಯಕೀಯ ಶಿಕ್ಷಣದ ಶುಲ್ಕ ಭಾರತದ ವೈದ್ಯಕೀಯ ಕಾಲೇಜಗಳ ಶುಲ್ಕಕಿಂತ ತುಂಬಾ ಕಡಿಮೆ ಇರುತ್ತದೆ. ಅಂದ್ರೆ ಭಾರತದ ಒಂದು ವರ್ಷದ ವೈದ್ಯಕೀಯ ಶಿಕ್ಷಣಕ್ಕೆ ತಗುಲುವ ಶುಲ್ಕ ಹಾಗೂ ಇತರೆ ವಂತಿಕೆಗಳ ದರದಲ್ಲಿ ಉಕ್ರೇನ್​ನಲ್ಲಿ ಇಡೀ ವೈದ್ಯಕೀಯ ಶಿಕ್ಷಣವನ್ನೇ ಮುಗಿಸಿಕೊಂಡು ಬರಬಹುದು‌. ಜೊತೆಗೆ ಉಕ್ರೇನ್​ನಲ್ಲಿ ಎಲ್ಲಾ ವಿಶ್ವವಿದ್ಯಾನಿಲಯಗಳಲ್ಲೂ ಏಕರೂಪದ ಶುಲ್ಕ ಇರುವುದಿಲ್ಲ.

ಇದನ್ನೂ ಓದಿ: ಉಕ್ರೇನ್​​ನಿಂದ ವಿಜಯಪುರಕ್ಕೆ ಮರಳಿದ ಸ್ನೇಹಾ ಪಾಟೀಲ್​ ಬಿಚ್ಚಿಟ್ಟರು ಅಲ್ಲಿನ ಕರಾಳತೆ..

ಉಕ್ರೇನ್​ನಲ್ಲಿ 15ಕ್ಕೂ ಹೆಚ್ಚು ವೈದ್ಯಕೀಯ ವಿಶ್ವವಿದ್ಯಾನಿಲಯಗಳಿದ್ದು, ಅವುಗಳಲ್ಲಿ ಬಹುತೇಕ ಪ್ರಪಂಚದಲ್ಲೇ ಮನ್ನಣೆ ಪಡೆದ ವಿಶ್ವವಿದ್ಯಾನಿಲಯಗಳಾಗಿವೆ. ಇವು ಪ್ರತಿ ವರ್ಷ ವೆಬ್​ಸೈಟ್​ಗಳಲ್ಲಿ ಹಲವಾರು ರೀತಿಯ ರಿಯಾಯಿತಿಗಳನ್ನ ನೀಡಿ, ಭಾರತದ ಜೊತೆಗೆ ಇತರೆ ದೇಶಗಳ ವಿದ್ಯಾರ್ಥಿಗಳನ್ನ ಸೆಳೆಯುತ್ತವೆ.

ಈ ಬಗ್ಗೆ 'ಈಟಿವಿ ಭಾರತ'ದೊಂದಿಗೆ ಉಕ್ರೇನ್​ನ ಬಿಕೊನೊವಿನಿಯನ್ ವಿಶ್ವ ವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಮೈಸೂರು ಜಿಲ್ಲೆಯ ಕೆ.ಆರ್.‌ನಗರ ಮೂಲದ ಚಂದನ್ ಎಂಬ ವಿದ್ಯಾರ್ಥಿ ಮಾತನಾಡಿ, ಭಾರತದಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳ ಕೋಟಾದಡಿ ಆಗುವ ವೆಚ್ಚಕಿಂತ ಕಡಿಮೆ ದರದಲ್ಲಿ ಉಕ್ರೇನ್​ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಬಹುದು. ನೀಟ್ ಪರೀಕ್ಷೆಯಲ್ಲಿ ಸರ್ಕಾರಿ ಕೋಟಾದಲ್ಲಿ ಅವಕಾಶ ದೊರೆಯದವರು ಹೆಚ್ಚಿನ ಸಂಖ್ಯೆಯಲ್ಲಿ ಉಕ್ರೇನ್​ನಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಭಾರತದಲ್ಲಿ 6 ವರ್ಷದ ವೈದ್ಯಕೀಯ ಶಿಕ್ಷಣಕ್ಕೆ 70 ಲಕ್ಷ ಖರ್ಚಾದರೆ ಅದೇ 6 ವರ್ಷಕ್ಕೆ ಉಕ್ರೇನ್​ನಲ್ಲಿ30 ಲಕ್ಷ ವೆಚ್ಚವಾಗುತ್ತದೆ. ಶಿಕ್ಷಣ ಅಗ್ಗ ಅಷ್ಟೇ ಅಲ್ಲ, ಉತ್ತಮ ಗುಣಮಟ್ಟದ ಶಿಕ್ಷಣವೂ ದೊರೆಯುತ್ತದೆ. ಆ ಕಾರಣಕ್ಕಾಗಿ ಭಾರತದ ಮಧ್ಯಮ ವರ್ಗದ ವಿದ್ಯಾರ್ಥಿಗಳು ಹಾಗೂ ನೀಟ್ ಪರೀಕ್ಷೆಯಲ್ಲಿ ಸೀಟ್ ಸಿಗದ ವಿದ್ಯಾರ್ಥಿಗಳು ಉಕ್ರೇನ್​ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ಬರುತ್ತಾರೆ ಎಂದರು‌.

ಚಂದನ್
ಚಂದನ್

ಇದನ್ನೂ ಓದಿ: ಎರಡು ದೇಶಗಳ ಮಧ್ಯೆ ಯುದ್ಧವಂತೆ : ಅನ್ಯರಿಗೆ ತೈಲ ಬೆಲೆ ಏರಿಕೆಯ ಚಿಂತೆ!

ಇದರ ಜೊತೆಗೆ ಉಕ್ರೇನ್​ನಲ್ಲಿ ಪ್ರತಿ ವೈದ್ಯಕೀಯ ತರಗತಿಯಲ್ಲಿ 14 ಮಂದಿ ವಿದ್ಯಾರ್ಥಿಗಳು ಮಾತ್ರ ಇರುತ್ತಾರೆ. ಭಾರತದಲ್ಲಿ ಪ್ರತಿ ತರಗತಿಗೆ 50 ವಿದ್ಯಾರ್ಥಿಗಳು ಇರುತ್ತಾರೆ. ಪ್ರತಿ ವರ್ಷ ಉಕ್ರೇನ್​ನಲ್ಲಿ 13 ಲಕ್ಷ ವೈದ್ಯಕೀಯ ಶಿಕ್ಷಣ ಪಡೆಯಲು ಖರ್ಚಾದರೆ, ಭಾರತದಲ್ಲಿ ಹೆಚ್ಚು ಹಣ ಖರ್ಚಾಗುತ್ತದೆ. ಇದರ ಜೊತೆಗೆ ಉಕ್ರೇನ್​ನಲ್ಲಿ ಮೊದಲ ವರ್ಷ ಉಚಿತ ಹಾಸ್ಟೆಲ್ ಸೌಲಭ್ಯ ಇರುತ್ತದೆ. ಜೊತೆಗೆ ಎರಡನೇ ವರ್ಷದಲ್ಲಿ 5 ಅಥವಾ 6 ವಿದ್ಯಾರ್ಥಿಗಳು ಒಟ್ಟಿಗೆ ಸೇರಿ ಒಂದು ಅಪಾರ್ಟ್​​ಮೆಂಟ್ ಬಾಡಿಗೆ ತೆಗೆದುಕೊಂಡು ಒಟ್ಟಿಗೆ ಇರುತ್ತಾರೆ. ಪ್ರತಿ ತಿಂಗಳ ಊಟ, ತಿಂಡಿಗೆ 5 ಸಾವಿರ ಮಾತ್ರ ಖರ್ಚಾಗುತ್ತದೆ.‌ ಅದಕ್ಕಾಗಿ ವೈದ್ಯಕೀಯ ವಿದ್ಯಾಭ್ಯಾಸಕ್ಕೆ ಉಕ್ರೇನ್​ಗೆ ಹೋಗುತ್ತಾರೆ ಎಂದು ಚಂದನ್ ಹೇಳಿದರು.

ಭಾರತದ ಖಾಸಗಿ ಕಾಲೇಜ್​ಗಳ ಮ್ಯಾನೇಜ್‌ಮೆಂಟ್‌ ಕೋಟಾಕ್ಕಿಂತ ಕಡಿಮೆ ದರದ ಶುಲ್ಕದಲ್ಲಿ ಉಕ್ರೇನ್​ನಲ್ಲಿ ವೈದ್ಯಕೀಯ ಸೀಟ್​ಗಳು ಲಭ್ಯವಿದ್ದು, ಹೀಗಾಗಿ‌ ಭಾರತದ ಬಹುತೇಕ ವಿದ್ಯಾರ್ಥಿಗಳು ಉಕ್ರೇನ್​ಗೆ ವೈದ್ಯಕೀಯ ಶಿಕ್ಷಣ ಪಡೆಯಲು ತೆರಳುತ್ತಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.