ಮೈಸೂರು: ಪೊಲೀಸ್ ಠಾಣೆ ಸಮೀಪವೇ ನಿಲ್ಲಿಸಿದ್ದ ಗೂಡ್ಸ್ ಆಟೋದ ಚಕ್ರಗಳನ್ನು ಕದ್ದೊಯ್ದಿರುವ ಘಟನೆ ನಗರದ ಹೆಬ್ಬಾಳ ಬಳಿಯ ಸುಬ್ರಹ್ಮಣ್ಯ ನಗರದಲ್ಲಿ ನಡೆದಿದೆ.
ಸುಬ್ರಹ್ಮಣ್ಯ ನಗರದ ಚಾಲಕನೋರ್ವ ರಾತ್ರಿ ತನ್ನ ಗೂಡ್ಸ್ ಆಟೋವನ್ನು ಪೊಲೀಸ್ ಠಾಣೆ ಬಳಿಯ ಖಾಲಿ ಜಾಗದಲ್ಲಿ ನಿಲ್ಲಿಸಿ ಹೋಗಿದ್ದರು. ಬೆಳಗ್ಗೆ ಬಂದು ನೋಡಿದಾಗ ಆಟೋದ ಹಿಂದಿನ ಎರಡು ಹೊಸ ಚಕ್ರಗಳು ಮತ್ತು ಪಕ್ಕದಲ್ಲೇ ಇದ್ದ ಮತ್ತೊಂದು ವಾಹನದ ಸ್ಟೆಪ್ನಿ ಕಳ್ಳತನಾಗಿರುವ ವಿಚಾರ ಬೆಳಕಿಗೆ ಬಂದಿದೆ.
ಈ ಕುರಿತು ಗೂಡ್ಸ್ ಆಟೋ ಮಾಲೀಕ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.