ETV Bharat / state

ವೀಕೆಂಡ್​​​ ಕರ್ಫ್ಯೂ ಇದೆಲ್ಲಾ ಹುಚ್ಚರು ನೀಡುವ ಆದೇಶ : ಬಿಜೆಪಿ ಸರ್ಕಾರದ ವಿರುದ್ಧ ಹೆಚ್. ವಿಶ್ವನಾಥ್ ವಾಗ್ದಾಳಿ.. - Doing money in the name of Covid is enough

ಕೋವಿಡ್ ಹೆಸರಿನಲ್ಲಿ ಕೆಲವು ಅಧಿಕಾರಿಗಳು, ಆರೋಗ್ಯ ಇಲಾಖೆಯ ಅಧಿಕಾರಿಗಳು, ವೈದ್ಯರು ದುಡ್ಡು ಮಾಡಿದ್ದು ಸಾಕು. ಮತ್ತೆ ಅದನ್ನೇ ಮಾಡಬೇಡಿ. ಈಗಾಗಲೇ ಜನರು ಸಂಕಷ್ಟಕ್ಕೆ ಸಿಲುಕ್ಕಿದ್ದಾರೆ. ಫಾರ್ಮಸಿಟಿಕಲ್ ಕಂಪನಿಗಳು ದೊಡ್ಡ ಮಟ್ಟದಲ್ಲಿ ಬೆಳೆದಿವೆ. ವೈದ್ಯರು ತಾವು ಮಾಡಿದ ಸಾಲವನ್ನು ತೀರಿಸಿಕೊಂಡಿದ್ದಾರೆ. ಸರ್ಕಾರಿ ಆಸ್ಪತ್ರೆಗಳಿಗೆ ಜನರು ಹೋಗುತ್ತಿಲ್ಲ. ಕಾರಣ ಆಸ್ಪತ್ರೆಗಳನ್ನ ಸರ್ಕಾರ ಚೆನ್ನಾಗಿ ಇಟ್ಟಿಲ್ಲ..

H. Vishwanath
ಎಚ್. ವಿಶ್ವನಾಥ್
author img

By

Published : Jan 21, 2022, 3:07 PM IST

ಮೈಸೂರು : ಎಲ್ಲಾ ಅಂಗಡಿಗಳ ಬಾಗಿಲು ತೆರೆಯಲು ಅವಕಾಶ ಇದೆ. ಆದ್ರೆ, ಜನರು ಹೊರಗೆ ಮಾತ್ರ ಬರುವಂತಿಲ್ಲ. ಹಾಗಿದ್ದರೆ, ಯಾರಿಗಾಗಿ ವ್ಯಾಪಾರಸ್ಥರು ಅಂಗಡಿಗಳನ್ನ ತೆಗೆಯಬೇಕು. ಇದು ಎಂತಹ ಆದೇಶ. ಇದು ಹುಚ್ಚರು ನೀಡುವ ಆದೇಶವಾಗಿದೆ. ಕೂಡಲೇ ವೀಕೆಂಡ್ ಕರ್ಫ್ಯೂ ತೆಗೆದು ಹಾಕಿ ಎಂದು ತಮ್ಮ ಸರ್ಕಾರದ ವಿರುದ್ಧವೇ ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸ್ವಪಕ್ಷೀಯ ಸರ್ಕಾರದ ವಿರುದ್ಧವೇ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿರುವುದು..

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ‌ನೈಟ್‌ ಮತ್ತು ವೀಕೆಂಡ್ ಕರ್ಫ್ಯೂವನ್ನು ಯಾರಿಗಾಗಿ ಮಾಡಿದ್ದಾರೆ. ಬೀದಿಬದಿ ವ್ಯಾಪಾರಕ್ಕೆ, ದಿನಸಿ ಅಂಗಡಿ, ತರಕಾರಿ ಇತರೆ ಅಂಗಡಿಗಳನ್ನು ತೆರೆಯಲು ಅವಕಾಶ ಮಾಡಿಕೊಡಲಾಗಿದೆ‌. ಆದರೆ, ಜನರು ಮಾತ್ರ ಹೊರಗೆ ಬರುವಂತಿಲ್ಲ ಎಂದು ಆದೇಶ ನೀಡಿದ್ದಾರೆ.

ಇದು ಎಂತಹ ಆದೇಶ, ಹುಚ್ಚರು ಈ ರೀತಿ ಆದೇಶ ಮಾಡುತ್ತಾರೆ. ನಿಮಗೆ ಹೇಳುವವರು, ಕೇಳುವವರು ಯಾರು ಇಲ್ವಾ?, ಜನರನ್ನ ಗಾಬರಿಗೊಳಿಸಬೇಡಿ. ಮೊದಲೆರಡು ಅಲೆಗಳಲ್ಲಿ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಜೀವನ ನಡೆಸುವುದೇ ಕಷ್ಟವಾಗಿದೆ‌. ಮೂರನೇ ಅಲೆ ತೀವ್ರತೆ ಕಡಿಮೆ ಇದ್ದು, ಕೂಡಲೇ ನೈಟ್ ಮತ್ತು ವೀಕೆಂಡ್ ಕರ್ಫ್ಯೂವನ್ನು ತೆಗೆಯಿರಿ ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಕೋವಿಡ್ ಹೆಸರಿನಲ್ಲಿ ದುಡ್ಡು ಮಾಡಿದ್ದು ಸಾಕು : ಕೋವಿಡ್ ಹೆಸರಿನಲ್ಲಿ ಕೆಲವು ಅಧಿಕಾರಿಗಳು, ಆರೋಗ್ಯ ಇಲಾಖೆಯ ಅಧಿಕಾರಿಗಳು, ವೈದ್ಯರು ದುಡ್ಡು ಮಾಡಿದ್ದು ಸಾಕು. ಮತ್ತೆ ಅದನ್ನೇ ಮಾಡಬೇಡಿ. ಈಗಾಗಲೇ ಜನರು ಸಂಕಷ್ಟಕ್ಕೆ ಸಿಲುಕ್ಕಿದ್ದಾರೆ. ಫಾರ್ಮಸಿಟಿಕಲ್ ಕಂಪನಿಗಳು ದೊಡ್ಡ ಮಟ್ಟದಲ್ಲಿ ಬೆಳೆದಿವೆ.

ವೈದ್ಯರು ತಾವು ಮಾಡಿದ ಸಾಲವನ್ನು ತೀರಿಸಿಕೊಂಡಿದ್ದಾರೆ. ಸರ್ಕಾರಿ ಆಸ್ಪತ್ರೆಗಳಿಗೆ ಜನರು ಹೋಗುತ್ತಿಲ್ಲ. ಕಾರಣ ಆಸ್ಪತ್ರೆಗಳನ್ನ ಸರ್ಕಾರ ಚೆನ್ನಾಗಿ ಇಟ್ಟಿಲ್ಲ. ಇರುವ ಸತ್ಯವನ್ನು ನಾನು ಹೇಳಿದ್ದೇನೆ ಎಂದರು.

ಇದನ್ನೂ ಓದಿ: ವೀಕೆಂಡ್ ಕರ್ಫ್ಯೂ ಬೇಕೋ ಬೇಡವೋ ಎಂದು ಕೋವಿಡ್ ಸಭೆಯಲ್ಲಿ ಚರ್ಚಿಸಿ ನಿರ್ಧಾರ: ಸಿಎಂ ಬೊಮ್ಮಾಯಿ

ಸಚಿವ ಸುಧಾಕರ್ ಮಂತ್ರಿಗಳು, ಜೊತೆಗೆ ಹಲ್ಲಿನ ವೈದ್ಯರು ಸಹ ಆಗಿದ್ದರು. ಜನರಿಗಿಂತ ದೊಡ್ಡ ತಜ್ಞರು ಬೇರೆ ಇಲ್ಲ. ಅವರಿಗೆ ತಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳುವುದು ತಿಳಿದಿದೆ‌. ಕೋವಿಡ್ ನಿರ್ವಹಣೆಯ ಬಗ್ಗೆ ತೀರ್ಮಾನ ಕೈಗೊಳ್ಳಲು ಆಯಾ ಜಿಲ್ಲಾಧಿಕಾರಿಗಳಿಗೆ ಬಿಟ್ಟರೆ ಒಳ್ಳೆಯದು ಎಂದರು.

ರಾಜ್ಯ ಸಚಿವ ಸಂಪುಟ ವಿಸ್ತರಣೆ ಆಡಳಿತದ ದೃಷ್ಟಿಯಿಂದ ಆಗಬೇಕಿದ್ದು. ಈ ವಿಚಾರದಲ್ಲಿ ಸಿಎಂ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.