ETV Bharat / state

ಕಾರ್ಯಕರ್ತರ ಋಣ ತೀರಿಸುವ ಸಮಯ ಬಂದಿದೆ; ಸಚಿವ ಎಸ್.ಟಿ. ಸೋಮಶೇಖರ್

ಕಾರ್ಯಕರ್ತರ ಚುನಾವಣೆಗೆ ನಾಯಕರಾದ ನಾವು ಬೆಂಬಲಿಸುವುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ನಮ್ಮೆಲ್ಲರ ಬೆಂಬಲವಿದೆ. ಮುಂಬರುವ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಗೆಲ್ಲಬೇಕು.

We honestly effort for your election: ST Somashekhar
ಸಚಿವ ಎಸ್.ಟಿ. ಸೋಮಶೇಖರ್
author img

By

Published : Nov 5, 2020, 11:15 PM IST

ಮೈಸೂರು: ನಮ್ಮನ್ನು ಗೆಲ್ಲಿಸುವುದು ಕಾರ್ಯಕರ್ತರು. ಈಗ ಅಂತಹ ನಿಮ್ಮಗಳ ಚುನಾವಣೆ ಬಂದಿದೆ. ಹೀಗಾಗಿ ನಿಮ್ಮ ಋಣ ತೀರಿಸುವ ಸಂದರ್ಭ ನಮಗೆ ಈಗ ಬಂದಿದೆ. ನಾವು ನಿಮ್ಮ ಚುನಾವಣೆಗೆ ಶ್ರಮಿಸುತ್ತೇವೆ ಎಂದು ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.

ಮುಡುಕನಪುರದಲ್ಲಿ ಬಿಜೆಪಿ ಶಕ್ತಿ ಕೇಂದ್ರ ಹಾಗೂ ಮಹಾಶಕ್ತಿ ಕೇಂದ್ರದ ಪದಾಧಿಕಾರಿಗಳು ಹಾಗೂ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ನಾನೀಗ 2ನೇ ಬಾರಿಗೆ ಜಿಲ್ಲಾ ಪ್ರವಾಸ ಮಾಡಿದ್ದೇನೆ. ಈ ಮೊದಲು 10 ವರ್ಷಕ್ಕೆ ಇದ್ದ ಮೀಸಲಾತಿಯನ್ನು 5 ವರ್ಷಕ್ಕೆ ಇಳಿಸಲಾಗಿದೆ. ಹೈಕೋರ್ಟ್ ತೀರ್ಪು ಪ್ರಕಟವಾದ 4-5 ದಿನಗಳೊಳಗೆ ಸ್ಥಳೀಯ ಸಂಸ್ಥೆ ಚುನಾವಣೆ ಘೋಷಣೆಯಾಗಬಹುದು. ಹೀಗಾಗಿ ನಾವು ಅದಕ್ಕೆ ಸಿದ್ಧವಾಗಬೇಕಿದೆ ಎಂದರು.

ನಾನು ಕಾರ್ಯಕರ್ತರ ಸಭೆ ನಡೆಸಿದಾಗ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ, ಗೌರವವನ್ನು ಕೊಡುತ್ತಿಲ್ಲ, ಕೆಲಸ ಮಾಡಿಕೊಡುವುದಿಲ್ಲ ಎಂಬ ದೂರುಗಳು ಬಂದಿವೆ. ಕಾರ್ಯಕರ್ತರ ಕೆಲಸ ನ್ಯಾಯಯುತವಾಗಿದ್ದರೆ ತ್ವರಿತವಾಗಿ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾಗಿ ತಿಳಿಸಿದರು. ಪಕ್ಷದ ಕಾರ್ಯಕರ್ತರಿಗೆ ಇದೇ ವೆಳೆ ಚುನಾವಣೆ ಉದ್ದೇಶ ಹಾಗೂ ಗೆಲುವಿನ ಮಹತ್ವದ ಬಗ್ಗೆ ವಿವರಿಸಿದರು.

ಕಾರ್ಯಕರ್ತರ ಚುನಾವಣೆಗೆ ನಾಯಕರಾದವರು ಬೆಂಬಲಿಸುವುದು ಕರ್ತವ್ಯ. ಈ ನಿಟ್ಟಿನಲ್ಲಿ ನಮ್ಮೆಲ್ಲರ ಬೆಂಬಲವಿದೆ. ಮುಂಬರುವ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಗೆಲ್ಲಬೇಕು ಎಂದು ಸಲಹೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.