ಮೈಸೂರು: ನಟ ದರ್ಶನ್ ಅವರನ್ನು ನಾವು ವಿಚಾರಣೆಗೆ ಕರೆದಿಲ್ಲ. ಆದರೆ, ಅವರೇ ದೂರುದಾರರೊಂದಿಗೆ ಬಂದಿದ್ದರು ಎಂದು ಡಿಸಿಪಿ ಪ್ರದೀಪ್ ಗುಂಟಿ ಸ್ಪಷ್ಟಪಡಿಸಿದರು.
ಎನ್. ಆರ್. ಎಸಿಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಹಿಳೆಯೊಬ್ಬರು ಬ್ಯಾಂಕ್ ಲೋನ್ ಕೊಡಿಸುವುದಾಗಿ ವಂಚಿಸಲು ಯತ್ನಿಸಿದ್ದಾರೆ ಎಂದು ಹರ್ಷ ಅವರು ದೂರು ನೀಡಿದ್ದಾರೆ. ಈ ಸಂಬಂಧ ನಾವು ದೂರುದಾರರಾದ ಹರ್ಷ ಅವರನ್ನು ವಿಚಾರಣೆಗೆ ಬರುವಂತೆ ಕರೆದಿದ್ದೆವು. ಬೇರೆ ಯಾರನ್ನೂ ವಿಚಾರಣೆಗೆ ಕರೆದಿಲ್ಲ, ಅವರೊಂದಿಗೆ ಸ್ನೇಹಿತರು ಬಂದಿದ್ದರು ಎಂದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನೂ ವಶಕ್ಕೆ ಪಡೆದಿಲ್ಲ. ಈಗ ವಿಚಾರಣೆ ನಡೆಸುತ್ತಿದ್ದೇವೆ. ತನಿಖಾ ಹಂತದಲ್ಲಿರುವುದರಿಂದ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ಯಾರಾದ್ರೂ ಸರಿ ನಾನು ಬಿಡಲ್ಲ, ತಲೆಯನ್ನೇ ಕಟ್ ಮಾಡ್ತೀನಿ: ನಟ ದರ್ಶನ್