ಮೈಸೂರು: ರಸ್ತೆಗೆ ಬಂದು ಬಿಸಿಲಿನ ತಾಪ ಹಾಗೂ ಮೊಸಾಕ್ ಕಲ್ಲು ಹಾಸಿನ ಮೇಲೆ ತೆವಳಲು ಪರದಾಡುತ್ತಿದ್ದ ಕೇರೆ ಹಾವನ್ನು ದಾರಿಹೋಕ ರಕ್ಷಿಸಿದ್ದಾನೆ.
ಹಾಡ್ವಿಂಗ್ ವೃತ್ತದ ಬಳಿ ಇರುವ ಮಿನಿ ಪಾರ್ಕ್ ಕಟ್ಟಡದ ಮೇಲೆ ಕೇರೆ ಹಾವು ಕಾಣಿಸಿಕೊಂಡಿದೆ. ಅದನ್ನು ನೋಡಿದ ಭದ್ರತಾ ಸಿಬ್ಬಂದಿ ಓಡಿಸಲು ಪ್ರಯತ್ನಿಸಿದ್ದಾರೆ. ಆದರೆ, ಹಾವು ಆ ಕಡೆ ಈ ಕಡೆ ಹರಿದಾಡಿದೆ. ನಾಯಿ ಹಿಂದೆ ಬಂದು ನಿಂತಾಗ ಅದಕ್ಕೆ ಕಚ್ಚಬಹುದು ಎಂದು ಸಾರ್ವಜನಿಕರು ಆತಂಕಗೊಂಡಿದ್ದರು.
ಬಳಿಕ ಹಾವು ನೋಡಲು ಬಂದ ವ್ಯಕ್ತಿಯೋರ್ವ, ಕಡ್ಡಿಯ ಸಹಾಯದಿಂದ ಅದನ್ನು ಎತ್ತಿ ಪಕ್ಕಕ್ಕೆ ಬಿಟ್ಟಿದ್ದಾರೆ.