ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ ಚಲಾಯಿಸುವ ಮತಗಟ್ಟೆ ಕೇಂದ್ರ 86ರಲ್ಲಿ ವಿವಿಪ್ಯಾಟ್ ಕೈಕೊಟ್ಟಿದ್ದರಿಂದ ಮತದಾನ ಸ್ಥಗಿತಗೊಂಡಿದೆ. ಇದರಿಂದ ಮತದಾರರು ಮತ ಚಲಾಯಿಸಲು ಸಾಲುಗಟ್ಟಿ ನಿಂತಿದ್ದಾರೆ.
ಬೆಳಿಗ್ಗೆಯಿಂದ ಮತದಾನ ಮಾಡಲು ಆಗಮಿಸುತ್ತಿರುವ ಸಿದ್ದರಾಮನಹುಂಡಿ ಗ್ರಾಮಸ್ಥರು ಕ್ಯೂನಲ್ಲಿಯೇ ನಿಂತಿದ್ದಾರೆ. ಆದರೆ, ಈವರೆಗೆ ಮತಗಟ್ಟೆ ಕೇಂದ್ರದ ಸಂಖ್ಯೆ 86ರಲ್ಲಿ ವಿವಿಪ್ಯಾಟ್ ಸಮಸ್ಯೆ ಬಿಗಾಡಾಯಿಸಿದ ಹಿನ್ನೆಲೆ ಮತದಾನ ನಡೆಯುತ್ತಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪುತ್ರ, ವರುಣಾ ಕ್ಷೇತ್ರದ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಕೂಡ ಇದೇ ಕೇಂದ್ರದಲ್ಲಿ ಮತ ಚಲಾಯಿಸಲಿದ್ದಾರೆ. ಅಲ್ಲಿಯವರೆಗೆ ಅಧಿಕಾರಿಗಳು ಏನು ಮಾಡುತ್ತಾರೆ ಎಂಬ ಕುತೂಹಲ ಮೂಡಿದೆ.