ETV Bharat / state

ವಿಜಯನಗರ ಪ್ರತ್ಯೇಕ ಜಿಲ್ಲೆ ಆಗಲೇಬೇಕು: ಸಚಿವ ಶ್ರೀರಾಮುಲು - vijayanagara district issue

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಕಾನೂನು ಸಚಿವ ಮಾಧುಸ್ವಾಮಿ ಅವರು ವಿಜಯನಗರ ರಚನೆ ವಿಚಾರವಾಗಿ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ‌. ಬಳ್ಳಾರಿ ದೊಡ್ಡ ಜಿಲ್ಲೆ, ವಿಜಯನಗರ ಜಿಲ್ಲೆ ಮಾಡುವುದರಿಂದ ಜನರಿಗೆ ಅನುಕೂಲವೇ ಆಗಲಿದೆ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.

sriramulu
ಸಚಿವ ಶ್ರೀರಾಮುಲು
author img

By

Published : Nov 26, 2020, 1:06 PM IST

Updated : Nov 26, 2020, 1:19 PM IST

ಮೈಸೂರು: ವಿಜಯನಗರ ಪ್ರತ್ಯೇಕ ಜಿಲ್ಲೆ ಆಗಲೇಬೇಕು. ಇದರಿಂದ ಜಿಲ್ಲೆಗೆ ಅನುಕೂಲವಾಗಲಿದೆಯೆಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಅಭಿಪ್ರಾಯಪಟ್ಟಿದ್ದಾರೆ.

ಜಲದರ್ಶಿನಿ‌ ಸರ್ಕಾರಿ ಅತಿಥಿಗೃಹದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಕಾನೂನು ಸಚಿವ ಮಾಧುಸ್ವಾಮಿ ಅವರು ವಿಜಯನಗರ ರಚನೆ ವಿಚಾರವಾಗಿ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ‌. ಬಳ್ಳಾರಿ ದೊಡ್ಡ ಜಿಲ್ಲೆ, ವಿಜಯನಗರ ಜಿಲ್ಲೆ ಮಾಡುವುದರಿಂದ ಜನರಿಗೆ ಅನುಕೂಲವೇ ಆಗಲಿದೆ ಎಂದರು.

ಸಚಿವ ಶ್ರೀರಾಮುಲು

ರಾಜ್ಯ ಸರ್ಕಾರ ರಚನೆಗೆ 17 ಜನರ ಸಹಕಾರದ ಜೊತೆ, 105 ಮಂದಿಯ ಶ್ರಮವೂ ಇದೆ. ಐದಾರು ಬಾರಿ ಶಾಸಕರಾಗಿ ಸಚಿವರಾಗದೇ ಇದ್ದವರು ಕೂಡ ಇದ್ದಾರೆ. ಮುಖ್ಯಮಂತ್ರಿಗಳು ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ವಿಚಾರವಾಗಿ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಸಂಪುಟ ವಿಚಾರವಾಗಿ ಸಂಸದ ಶ್ರೀನಿವಾಸ ಪ್ರಸಾದ್ ಬೇಸರಗೊಂಡಿದ್ದಾರೆ‌‌. ಅವರ ಮನೆಗೆ ತೆರಳಿ ಮಾತುಕತೆ ನಡೆಸುತ್ತೇನೆ ಎಂದು ತಿಳಿಸಿದರು.

ಇದನ್ನು ಓದಿ: ಇಬ್ಬರು ಅಧಿಕಾರಿಗಳನ್ನು ಕೊಂದಿದ್ದ ಮೋಸ್ಟ್ ವಾಂಟೆಡ್​ ನಕ್ಸಲ್​​ ಹತ

ಸಚಿವ ರಮೇಶ್ ಜಾರಕಿಹೊಳಿ ಅವರು ದೆಹಲಿಗೆ ಭೇಟಿ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿ ಅದು ಅವರ ವೈಯಕ್ತಿಕ. ನಾನು ರಾಜಕೀಯ ನಡೆಸಲು ಅಧಿಕಾರಕ್ಕಾಗಿ ಬಂದವನಲ್ಲ. ಜನರ ಸೇವೆ ಮಾಡಲು ಬಂದವ. ಬಳ್ಳಾರಿಯಿಂದ ಚಾಮರಾಜನಗರ ಜಿಲ್ಲೆಯವರೆಗೆ ನನಗೆ ಜನರ ಪ್ರೀತಿ ಇದೆ ಎಂದು ಸಚಿವರು ಹೇಳಿದರು.

ಮರಾಠ ಅಭಿವೃದ್ಧಿ ನಿಗಮ ರಚನೆ ಮಾಡಿರುವುದು ಭಾಷೆಯ ಬೆಳೆವಣಿಗೆಗಾಗಿ ಅಲ್ಲ. ಅಲ್ಲಿರುವ ಬಡವರ ಕಲ್ಯಾಣಕ್ಕಾಗಿ ಎಂದು ಸಮರ್ಥಿಸಿಕೊಂಡರು.

Last Updated : Nov 26, 2020, 1:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.