ಮೈಸೂರು: ಶಿವಮೊಗ್ಗ, ಕೊಡಗು ಸೇರಿದಂತೆ ಇತರೆಡೆ ಧಾರ್ಮಿಕ ಸ್ಥಳಗಳಲ್ಲಿ ಮುಸ್ಲಿಂಮರಿಗೆ ವ್ಯಾಪಾರಕ್ಕೆ ಅವಕಾಶ ನೀಡದಂತೆ ಮಾಡಿರುವ ಹಿಂದೂ ಪರ ಸಂಘಟನೆಗಳ ಕೂಗು ಮೈಸೂರಿಗೂ ವ್ಯಾಪಿಸಿದೆ. ಚಾಮುಂಡಿ ಬೆಟ್ಟದಲ್ಲಿ ಮುಸ್ಲಿಂ ಧರ್ಮಿಯರ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ (ವಿಹೆಚ್‌ಪಿ) ಒತ್ತಾಯಿಸಿದೆ.
ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ಎಲ್ಲಾ ಜಾತ್ರಾ ಮಹೋತ್ಸವಗಳಲ್ಲಿ ಅಂಗಡಿ ಮುಂಗಟ್ಟುಗಳ ಟೆಂಡರ್‌ಗಳನ್ನ ಹಿಂದೂಯೇತರರಿಗೆ ನೀಡಬಾರದು. ಹೈಕೋರ್ಟ್ ಆದೇಶದಂತೆ ಹಿಂದೂಗಳಿಗೆ ನೀಡಬೇಕು. ಚಾಮುಂಡಿ ಬೆಟ್ಟದಲ್ಲಿರುವ ಐದು ಮುಸ್ಲಿಂ ಧರ್ಮಿಯರ ಅಂಗಡಿಗಳ ಪರವಾನಗಿ ರದ್ದು ಮಾಡುವಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ತಹಶೀಲ್ದಾರ್ಗೆ ವಿಹೆಚ್‌ಪಿ ಕಾರ್ಯಕರ್ತರು ಮನವಿ ಸಲ್ಲಿಸಿದರು.
ಇದನ್ನೂ ಓದಿ: ಏ. 1ರಂದು ಶಿವಕುಮಾರ ಸ್ವಾಮೀಜಿ 115ನೇ ಜಯಂತಿ ಕಾರ್ಯಕ್ರಮ: ಕೇಂದ್ರ ಸಚಿವ ಅಮಿತ್ ಶಾ ರಿಂದ ಉದ್ಘಾಟನೆ