ಮೈಸೂರು: ಷೇರು ಮಾರುಕಟ್ಟೆ ಸೇರಿದಂತೆ ದೇಶದ ಆರ್ಥಿಕ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರಿದ ಕೊರೊನಾ ವೈರಸ್ ಅಟ್ಟಹಾಸದ ಬಿಸಿ ನಗರದ ತರಕಾರಿ ಮಾರುಕಟ್ಟೆಗೂ ತಟ್ಟಿದೆ.
ಎಪಿಎಂಸಿ ಕೇಂದ್ರದಲ್ಲಿ ತರಕಾರಿ ಬೆಲೆ ನೆಲ ಕಚ್ಚಿದ ಹಿನ್ನೆಲೆ ಮೈಸೂರು-ನಂಜನಗೂಡು ಎಂ.ಜಿ. ರಸ್ತೆಯ ತರಕಾರಿ ಮಾರುಕಟ್ಟೆ ಮೇಲೂ ಗಾಢ ಪ್ರಭಾವ ಬೀರಿದೆ.
ರೈತರು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ ಗನ್ಹೌಸ್ ಮಾರುಕಟ್ಟೆಗೆ ಮಂಕು ಕವಿದಿದೆ. ಗ್ರಾಹಕರಿಲ್ಲದೇ ವ್ಯಾಪಾರ ವಹಿವಾಟು ಕ್ಷೀಣಿಸುತ್ತಿದೆ.