ETV Bharat / state

ಚೆನ್ನೈ- ಮೈಸೂರು ಮಧ್ಯೆ ವಂದೇ ಭಾರತ್ ಎಕ್ಸ್​ಪ್ರೆಸ್ ಟ್ರಯಲ್ ಟೆಸ್ಟ್.. ರೈಲ್ವೆ ಅಧಿಕಾರಿಗಳಿಂದ ಮಾಹಿತಿ - ಈಟಿವಿ ಭಾರತ ಕನ್ನಡ

ವಂದೇ ಭಾರತ್​ ಎಕ್ಸ್​ಪ್ರೆಸ್​ ಟ್ರೈಲ್ ಯಶ್ವಿಯಾಗಿದ್ದು, ಶಿಘ್ರವೇ ​ವಂದೇ ಭಾರತ್ ಸಂಚಾರ ದಿನಾಂಕವನ್ನು ಸೂಚಿಸಲಾಗುವುದು ಎಂದು ಮೈಸೂರು ರೈಲ್ವೆ ನಿಲ್ದಾಣದ ಹೆಚ್ಚುವರಿ ವಿಭಾಗ ವ್ಯವಸ್ಥಾಪಕರಾದ ವಿಜಯಾ ತಿಳಿಸಿದರು.

KN_MYS
ವಂದೇ ಭಾರತ್ ಎಕ್ಸ್​ಪ್ರೆಸ್
author img

By

Published : Nov 7, 2022, 6:33 PM IST

Updated : Nov 7, 2022, 7:41 PM IST

ಮೈಸೂರು: ಚೆನ್ನೈ-ಬೆಂಗಳೂರು-ಮೈಸೂರು ನಡುವಿನ ವಂದೇ ಭಾರತ್ ಎಕ್ಸ್​ಪ್ರೆಸ್ ಟ್ರಯಲ್ ಟೆಸ್ಟ್ ಯಾವುದೇ ತಾಂತ್ರಿಕ ತೊಂದರೆಗಳಿಲ್ಲದೆ ಯಶಸ್ವಿಯಾಗಿದೆ ಎಂದು ಮೈಸೂರು ರೈಲ್ವೆ ನಿಲ್ದಾಣದ ಹೆಚ್ಚುವರಿ ವಿಭಾಗ ವ್ಯವಸ್ಥಾಪಕರಾದ ವಿಜಯ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಇಂದು ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು ಚೆನ್ನೈ ನಿಂದ ಮೈಸೂರು ರೈಲ್ವೆ ನಿಲ್ದಾಣಕ್ಕೆ ಟ್ರಯಲ್ ಟೆಸ್ಟ್​ಗಾಗಿ ಬಂದ ಸಂದರ್ಭದಲ್ಲಿ ಮಾತನಾಡಿದ ಅವರು, ಮೈಸೂರು ಚೆನ್ನೈ ನಡುವಿನ ಐದನೇ ವಂದೇ ಭಾರತ್ ರೈಲು ಇದಾಗಿದ್ದು, ದಕ್ಷಿಣ ಭಾರತದ ಪ್ರಥಮ ವಂದೇ ಭಾರತ್ ರೈಲು ಇದು ಎಂದರು. ಇದೊಂದು ಅಡಿಷನಲ್ ಸರ್ವಿಸ್ ಆಗಿದ್ದು, ಸಾರ್ವಜನಿಕರಿಗೆ ಮುಕ್ತವಾದ ಮೇಲೆ ದಕ್ಷಿಣ ಭಾರತದ ಅತೀ ವೇಗದ ರೈಲು ಎಂಬ ಹೆಗ್ಗಳಿಕೆಗೆ ವಂದೇ ಭಾರತ್ ರೈಲು ಪಾತ್ರವಾಗಲಿದೆ. ವಂದೇ ಭಾರತ್ ಸಂಚಾರ ದಿನಾಂಕವನ್ನು ಶೀಘ್ರವೇ ನಿರ್ಧರಿಸಲಾಗುವುದು ಎಂದು ತಿಳಿಸಿದರು.

ಇವತ್ತು ಟ್ರಯಲ್ ಟೆಸ್ಟ್ ಮಾಡಲಾಗಿದ್ದು, ಇದರಲ್ಲಿ ಸೌತ್ ವೆಸ್ಟರ್ನ್ ರೈಲ್ವೆ ಹಾಗೂ ಸದರ್ನ್ ರೈಲ್ವೆ ಎಂಬ ಎರಡು ವಿಭಾಗದ ಅಧಿಕಾರಿಗಳು ಭಾಗವಹಿಸಿದ್ದು ರೈಲಿನಲ್ಲಿ ಯಾವುದೇ ತಾಂತ್ರಿಕ ತೊಂದರೆಯಿಲ್ಲದೆ ಟ್ರಯಲ್ ಟೆಸ್ಟ್ ಯಶಸ್ವಿಯಾಗಿದೆ ಎಂದರು.

ವಂದೇ ಭಾರತ್ ಎಕ್ಸ್​ಪ್ರೆಸ್ ಬಗ್ಗೆ ರೈಲ್ವೆ ಅಧಿಕಾರಿ ಪ್ರತಿಕ್ರಿಯೆ

ಇನ್ನು, ಕೋಚ್​ಗಳ ಆಧಾರದ ಮೇಲೆ ಆಸನಗಳನ್ನು ನಿರ್ಧಾರ ಮಾಡಲಾಗುವುದು. ಪ್ರತೀ ಕೋಚ್​ನಲ್ಲಿ 80 ಆಸನಗಳು ಇರಲಿವೆ. ರೈಲನ್ನು ಮೇಕಿಂಗ್ ಇಂಡಿಯಾದಿಂದ ಗಾಜಿಯಾಬಾದ್ ಮಾತು ಐಸಿಎಫ್​ನಲ್ಲಿ ತಯಾರು ಮಾಡಲಾಗಿದೆ. ರೈಲಿನಲ್ಲಿ ಡಿಸ್ಟ್ರಿಬ್ಯುಟೆಡ್ ಪವರ್ ಸಿಸ್ಟಮ್ ಅಳವಡಿಸಲಾಗಿದ್ದು, ಮೂರ್ನಾಲ್ಕು ಮೊಟಾರ್​ಗಳಿವೆ. ಅತೀ ಹೆಚ್ಚು ವೇಗವಾಗಿ ಈ ರೈಲು ಸಂಚರಿಸಲಿದೆ. ಮುಂದಿನ ದಿನಗಳಲ್ಲಿ ಇದರ ವೇಗದ ಬಗ್ಗೆ ತಿಳಿಸಲಾಗುವುದು ಎಂದು ಹೇಳಿದರು.

ಇದನ್ನೂ ಓದಿ: ವಂದೇ ಭಾರತ್ ಎಕ್ಸ್‌ಪ್ರೆಸ್ ಟ್ರಯಲ್ ರನ್ ಯಶಸ್ವಿ: ಮೈಸೂರಿಗೆ ಬಂದ ರೈಲು

Last Updated : Nov 7, 2022, 7:41 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.