ETV Bharat / state

ನಾಡ ಹಬ್ಬ ಯಶಸ್ವಿಯಾಗಲು ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದ ಸಚಿವ ವಿ.ಸೋಮಣ್ಣ - ಮೈಸೂರಿನಲ್ಲಿ ವಿ.ಸೋಮಣ್ಣ ಸುದ್ದಿಗೋಷ್ಟಿ

ವಿಶ್ವವಿಖ್ಯಾತ ಮೈಸೂರು ದಸರಾಗೆ ಅದ್ಧೂರಿ ತೆರೆಬಿದ್ದ ಹಿನ್ನೆಲೆಯಲ್ಲಿ ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಇಂದು ಜಲದರ್ಶಿನಿಯಲ್ಲಿ ಸುದ್ದಿಗೋಷ್ಠಿ ನಡೆಸಿ ನಾಡ ಹಬ್ಬ ಯಶಸ್ವಿಯಾಗಲು ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದರು.

ವಿ.ಸೋಮಣ್ಣ
author img

By

Published : Oct 9, 2019, 1:29 PM IST

ಮೈಸೂರು: ದಸರಾ ಮಹೋತ್ಸವದ ಪ್ರತಿಯೊಂದು ಖರ್ಚುಗಳನ್ನು ಈ ತಿಂಗಳೊಳಗೆ ನೀಡುತ್ತೇನೆ ಎಂದು ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.

ವಿ.ಸೋಮಣ್ಣ ಸುದ್ದಿಗೋಷ್ಟಿ

ವಿಶ್ವವಿಖ್ಯಾತ ಮೈಸೂರು ದಸರಾಗೆ ಅದ್ಧೂರಿ ತೆರೆಬಿದ್ದ ಹಿನ್ನೆಲೆಯಲ್ಲಿ ಇಂದು ಜಲದರ್ಶಿನಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿ. ಸೋಮಣ್ಣ ನಾಡ ಹಬ್ಬ ಯಶಸ್ವಿಯಾಗಲು ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದರು.

ದಸರಾದಲ್ಲಿ ಗ್ರಾಮೀಣ ದಸರಾ, ಮನೆ ಮನೆ ದಸರಾ, ಕ್ರೀಡಾ ದಸರಾ ಉತ್ತಮವಾಗಿ ಮೂಡಿ ಬಂದಿವೆ. ದಸರಾ ಎಂಬುದು ಎಲ್ಲೂ ಬಿಜೆಪಿ ಸಂಭ್ರಮವಾಗಿಲ್ಲ. ಇಲ್ಲಿ ಎಲ್ಲ ಪಕ್ಷದ ಕಾರ್ಯಕರ್ತರಿಗೂ ಅವಕಾಶ ಕೊಟ್ಟಿದ್ದೇವೆ. ಪ್ರತಿಯೊಂದು ಕಾರ್ಯಕ್ರಮದ ಖರ್ಚಿನ ಸಂಪೂರ್ಣ ಮಾಹಿತಿಯನ್ನು ನೀಡುತ್ತೇನೆ ಎಂದು ಹೇಳಿದರು.

ಯುವ ದಸರಾದಲ್ಲಿ ಭಾಗವಹಿಸಿದ್ದ ತಾರೆಯರಿಗೆ ನೀಡಿರುವ ಹಣದ ಮೊತ್ತವನ್ನು ಸಹ ತಿಳಿಸುತ್ತೇನೆ. ಹಣಕಾಸು ನೀಡುವ ವಿಚಾರದಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಂಡು ಬಂದಿದ್ದು, ಪ್ರತಿಯೊಂದರ ಮಾಹಿತಿ ನೀಡುತ್ತೇನೆ ಹಾಗೂ ದಸರಾದಲ್ಲಿ ಉಳಿದ ಹಣವನ್ನ ನೆರೆ ಸಂತ್ರಸ್ತರಿಗೆ ನೀಡುತ್ತೇವೆ ಎಂದು ಇದೇ ವೇಳೆ ಘೋಷಣೆ ಮಾಡಿದರು.

ದಸರಾ ಸಿದ್ಧತೆ ವೇಳೆ ಸಿದ್ದರಾಮಯ್ಯ ಎರಡು ಬಾರಿ ಫೋನ್‌ ಮಾಡಿ ದಸರಾ ಚೆನ್ನಾಗಿ ಮಾಡುತ್ತಿದ್ದಿಯಾ ಎಂದರು. ಆದ್ರೆ, ನಿನ್ನ ಜೊತೆ ಇರುವ ಪ್ರತಾಪ್ ಸಿಂಹ ಸರಿ ಇಲ್ಲ ಹುಷಾರ್. ಅವನನ್ನು ನಂಬ ಬೇಡ‌ ಅಂತಿದ್ರು ಎಂದು ಹೇಳಿ ನಸು ನಕ್ಕರು.

ದಸರಾ ಚಟುವಟಿಕೆ ಮುಗಿದಿದ್ದು, ಇಂದಿನಿಂದ ನಾನು ನೆರೆ ಸಂತ್ರಸ್ತರ ಕಷ್ಟಗಳನ್ನ ಆಲಿಸುತ್ತೇನೆ. ಇದರ ಬಗ್ಗೆ ಸಂಪೂರ್ಣವಾಗಿ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿ ಬೆಳಗಾವಿ, ಬಾಗಲಕೋಟೆ ನೆರೆ ಸಂತ್ರಸ್ತರ ಸಮಸ್ಯೆ ಕೇಳುತ್ತೇನೆ ಎಂದರು.

Intro:ಸೋಮಣ್ಣ ಪ್ರೆಸ್ ಮೀಟ್

Body:ಸೋಮಣ್ಣ ಪ್ರೆಸ್ ಮೀಟ್

Conclusion:
ಮೈಸೂರು:ದಸರಾ ಮಹೋತ್ಸವದ ಪ್ರತಿಯೊಂದು ಲೆಕ್ಕದ ಖರ್ಚುಗಳನ್ನು ಈ ತಿಂಗಳೊಳಗೆ ನೀಡುತ್ತೀನಿ ಎಂದು ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು..
ಜಲದರ್ಶಿನಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಉಪಸಮಿತಿಗಳ ಪ್ರತಿಯೊಂದು ಮಾಹಿತಿಯನ್ನು ನೀಡುತ್ತೀವಿ. ತಾರೆಯರಿಗೆ ನೀಡಿದ ಹಣ ಪ್ರತಿಯೊಂದು ಲೆಕ್ಕ ಕೊಡುತ್ತೀವಿ ಎಂದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ಮಾಡಿ,ದಸರಾದಲ್ಲಿ ಒಳ್ಳೆಯ ಕೆಲಸ ಮಾಡುತ್ತಿದ್ದಯಾ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ಹೇಳಿದರು.
ದಸರಾ ಮಹೋತ್ಸವದಲ್ಲಿ ಇಲ್ಲಿಯವರೆಗೆ ಭಾಗವಹಿಸಿದ್ದೇ ಇನ್ನು ಮುಂದೆ ನೆರೆ ಸಂತ್ರಸ್ತರ ಕಷ್ಟಗಳನ್ನು ಆಲಿಸುತ್ತೀನಿ ಎಂದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.