ETV Bharat / state

ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪ್ರತಿಸ್ಪರ್ಧಿಯಾಗಿ ವಿ ಸೋಮಣ್ಣ ನಾಮಪತ್ರ ಸಲ್ಲಿಕೆ.. ಅವರ ಆಸ್ತಿ ವಿವರ ಹೀಗಿದೆ - assembly election 2023

ವರುಣಾ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಸಿದ್ದರಾಮಯ್ಯ ಅಖಾಡದಲ್ಲಿದ್ರೆ, ಬಿಜೆಪಿಯಿಂದ ಸಚಿವ ಸೋಮಣ್ಣ ಹುರಿಯಾಳಾಗಿದ್ದಾರೆ. ಸೋಮಣ್ಣ ಸ್ಪರ್ಧೆಗಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಅವರ ಆಸ್ತಿ ವಿವರ ಹೀಗಿದೆ.

ಸೋಮಣ್ಣ ನಾಮಪತ್ರ ಸಲ್ಲಿಕೆ
ಸೋಮಣ್ಣ ನಾಮಪತ್ರ ಸಲ್ಲಿಕೆ
author img

By

Published : Apr 18, 2023, 1:09 PM IST

ಮೈಸೂರು: ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಸಚಿವರಾದ ವಿ.ಸೋಮಣ್ಣ ಅವರು ಸುಮಾರು 10.21 ಕೋಟಿ ಸ್ಥಿರಾಸ್ತಿ ಹೊಂದಿದ್ದು, ಚರಾಸ್ತಿ 3.61 ಕೋಟಿ ಹೊಂದಿದ್ದು, ವಿ. ಸೋಮಣ್ಣ ಕೋಟ್ಯಾಧಿಪತಿ ಎನಿಸಿಕೊಂಡಿದ್ದಾರೆ. ಚುನಾವಣಾ ಆಯೋಗಕ್ಕೆ ನಾಮಪತ್ರ ಸಲ್ಲಿಸುವ ವೇಳೆ ಆಸ್ತಿ ವಿವರವನ್ನು ನೀಡಿದ್ದಾರೆ.

ಚಾಮರಾಜನಗರ ಶಂಕರಪುರದ ನಿವಾಸಿಯಾದ 72 ವರ್ಷದ ವಿ.ಸೋಮಣ್ಣ ಅವರು, ಇತ್ತಿಚೆಗೆ ವರುಣಾ ಮತ್ತು ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಯಾಗಿದ್ದು, ಸೋಮಣ್ಣ ಅವರು ಸೋಮವಾರ ನಂಜನಗೂಡಿನಲ್ಲಿ ವರುಣಾ ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದಾರೆ.

ವಿ.ಸೋಮಣ್ಣ ಮತ್ತು ಕುಟುಂಬದವರ ಆಸ್ತಿ ವಿವರ : ಸೋಮಣ್ಣ ಅವರ 2022ರ ವಾರ್ಷಿಕ ಆದಾಯ 42.28 ಲಕ್ಷ ರೂಪಾಯಿಗಳಾಗಿದ್ದು, ಅವರ ಪತ್ನಿ ಶೈಲಜಾ ಅವರ ವಾರ್ಷಿಕ ಆದಾಯ 54.8 ಲಕ್ಷ ರೂಪಾಯಿ ಇದೆ. 21.4 ಕೋಟಿ ಸ್ಥಿರಾಸ್ತಿ ಇದ್ದರೆ, ಚರಾಸ್ತಿಯ ಮೌಲ್ಯ 13.01 ಕೋಟಿ ರೂಪಾಯಿಗಳಾಗಿದೆ. ಸೋಮಣ್ಣ ಅವರಲ್ಲಿ 4.01 ಲಕ್ಷ ರೂಪಾಯಿ ನಗದು ಹಣವಿದೆ. 32.48 ಲಕ್ಷ ಮೌಲ್ಯದ ಎರಡು ಟೊಯೋಟಾ ಕಾರುಗಳನ್ನು ಹೊಂದಿದ್ದಾರೆ. ಪತ್ನಿ ಶೈಲಜಾ ಬಳಿ 9.99 ಲಕ್ಷ ರೂಪಾಯಿ ನಗದು ಹಣವಿದ್ದು, 11.85 ಲಕ್ಷ ರೂಪಾಯಿ ಮೌಲ್ಯದ ಇನ್ನೋವಾ ಕಾರು ಇದೆ. ಸೋಮಣ್ಣ ಬಳಿ 10.25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದು, ಪತ್ನಿಯ ಬಳಿ 1.01 ಕೋಟಿ ಮೌಲ್ಯದ ಚಿನ್ನಾಭರಣವಿದೆ. ಸೋಮಣ್ಣ ಅವರ ಸ್ವತ್ತುಗಳ ಮೌಲ್ಯ 3.61 ಕೋಟಿ ಇದ್ದರೆ, ಅವರ ಪತ್ನಿಯ ಸ್ವತ್ತುಗಳ ಮೌಲ್ಯ 13.01 ಕೋಟಿ ಇದೆ.

ಸೋಮಣ್ಣನವರ ಆಸ್ತಿ ಎಲ್ಲೆಲ್ಲಿದೆ : ಸೋಮಣ್ಣನವರು ಹಲವಾರು ಕಡೆ ಜಮೀನು, ಖಾಸಗಿ ಕಟ್ಟಡಗಳನ್ನು ಹೊಂದಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಬಸಾಪುರದ ಬಳಿ 10 ಎಕರೆ 35 ಗುಂಟೆ ಕಾಫಿ ತೋಟವನ್ನು ಹೊಂದಿದ್ದು, ಬೆಂಗಳೂರು ದಕ್ಷಿಣ ತಾಲ್ಲೂಕಿನ ತಾವರೆಕೆರೆಯಲ್ಲಿ 18 ಕೋಟಿ ರೂ. ಮೌಲ್ಯದ 16.6 ಎಕರೆ ಕೃಷಿ ಭೂಮಿ ಅವರ ಪತ್ನಿಯ ಹೆಸರಿನಲ್ಲಿದೆ. ಬೆಂಗಳೂರಿನ ವಿಜಯನಗರ ಹಾಗೂ ಎಂಆರ್​ಸಿಆರ್ ಬಡಾವಣೆಯಲ್ಲಿ 7.21 ಕೋಟಿ ರೂ. ಮೌಲ್ಯದ ವಸತಿ ಕಟ್ಟಡ ಹೊಂದಿದ್ದಾರೆ. ಪತ್ನಿಯ ಹೆಸರಿನಲ್ಲಿ ಕೆಂಗೇರಿ, ಕನ್ನಹಳ್ಳಿಯ ಬಳಿ 3.5 ಕೋಟಿ ಮೌಲ್ಯದ ವಸತಿ ಕಟ್ಟಡವಿದೆ. 4.53 ಕೋಟಿ ರೂಪಾಯಿ ಬ್ಯಾಂಕ್ ಸಾಲವೂ ಇದೆ.

2018ರ ಚುನಾವಣೆಯಲ್ಲಿ ಗೊವಿಂದರಾಜನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದಾಗ ಸೋಮಣ್ಣ ಅವರ ಸ್ಥಿರಾಸ್ತಿ 4.6 ಕೋಟಿ ರೂ ಇದ್ದರೆ, ಚರಾಸ್ತಿ 4.28 ಕೋಟಿ ರೂಪಾಯಿ ಇತ್ತು. ಕಳೆದ 5 ವರ್ಷಗಳಲ್ಲಿ ಅವರ ಸ್ಥಿರಾಸ್ತಿ ಮೌಲ್ಯ 10.21 ಕೋಟಿ ರೂಪಾಯಿಗೆ ಏರಿದ್ದರೆ, ಅವರ ಚರಾಸ್ತಿ 3.61 ಕೋಟಿ ರೂಪಾಯಿಗೆ ಇಳಿಕೆಯಾಗಿದೆ.

ಇದನ್ನೂ ಓದಿ: ಚುನಾವಣಾ ಅಖಾಡಕ್ಕಿಳಿದ ಪಿಎಸ್ಐ ಪರೀಕ್ಷೆ ಹಗರಣದ ಆರೋಪಿ.. 6.5 ಕೋಟಿ ಮೌಲ್ಯದ ಆಸ್ತಿ ಘೋಷಿಸಿದ ಆರ್​ಡಿಪಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.