ETV Bharat / state

ತಾಯಿ ಅಂತ್ಯಕ್ರಿಯೆಗೆ ಹೋಗಲಾಗದೆ ತೊಳಲಾಡ್ತಿದ್ದ ವ್ಯಕ್ತಿಗೆ ಸಚಿವ ವಿ ಸೋಮಣ್ಣ ನೆರವು..

ಲಾಕ್‌ಡೌನ್‌ನಿಂದಾಗಿ ತಾಯಿಯ ಅಂತ್ಯ ಸಂಸ್ಕಾರಕ್ಕೆ ಹೋಗಲಾಗದೆ ಪರದಾಡ್ತಿದ್ದ ವ್ಯಕ್ತಿಗೆ ಜಿಲ್ಲಾ ಉಸ್ತುವಾರಿ ಸಚಿವರು ಅವಕಾಶ ಕಲ್ಪಿಸಿದ್ದಾರೆ.

v somanna arranged vehicle to man during lockdown
ಶವಸಂಸ್ಕಾರಕ್ಕೆ ತೆರಳಲು ವಾಹನ ವ್ಯವಸ್ಥೆ
author img

By

Published : Apr 2, 2020, 4:53 PM IST

ಮೈಸೂರು : ದೂರದ ಊರಿನಲ್ಲಿ ತಾಯಿ ಸಾವನ್ನಪ್ಪಿರುವುದನ್ನ ತಿಳಿದು ನೋವಿನಲ್ಲಿದ್ದ ಮಗನ ಕಷ್ಟಕ್ಕೆ ಸಚಿವ ವಿ.ಸೋಮಣ್ಣ ಕರಗಿದ್ದಾರೆ. ಆತ ತಾಯಿಯ ಅಂತ್ಯಕ್ರಿಯೆಗೆ ತೆರಳಲು ವಾಹನದ ವ್ಯವಸ್ಥೆ ಮಾಡಿಸಿಕೊಟ್ಟಿದ್ದಾರೆ.

ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಾಗದೇ ತೊಳಲಾಡ್ತಿದ್ದ ವ್ಯಕ್ತಿಗೆ ಸಚಿವರಿಂದ ನೆರವು..

ಮೈಸೂರಿನ ಶಿವರಾಂ ಪೇಟೆಯಲ್ಲಿರುವ ನಂಜರಾಜ ಬಹುದ್ದೂರ್ ಛತ್ರದಲ್ಲಿ ನಿರಾಶ್ರಿತರಿಗೆ ಆಶ್ರಯ ನೀಡಲಾಗಿದೆ. ಅಲ್ಲಿರೋರ ಬಗ್ಗೆ ಯೋಗಕ್ಷೇಮ ವಿಚಾರಿಸಲು ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ ಬಂದಿದ್ದರು. ಈ ವೇಳೆ ಅವರನ್ನು ಕಂಡ ಕೂಡಲೇ ಮೈಸೂರು ನಿವಾಸಿ ನವೀನ್‌ಕುಮಾರ್ ಎಂಬುವರು, ತನ್ನ ತಾಯಿ ಲೀಲಾವತಿ ಅವರು ಶಿವಮೊಗ್ಗದಲ್ಲಿ ತೀರಿಕೊಂಡಿದ್ದಾರೆ. ಅವರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ತೆರಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ದಯಮಾಡಿ ಅನುಮತಿ ಕೊಡಿಸಬೇಕೆಂದು ಮನವಿ ಮಾಡಿದ್ದಾರೆ‌.

ಇದಕ್ಕೆ ಸ್ಪಂದಿಸಿದ ಸಚಿವ ವಿ. ಸೋಮಣ್ಣ ಅವರು ಅಧಿಕಾರಿಗಳ ಗಮನಕ್ಕೆ ತಂದು, ಶಿವಮೊಗ್ಗಕ್ಕೆ ತೆರಳಲು ನವೀನ್‌ಕುಮಾರ್ ಅವರಿಗೆ ವ್ಯವಸ್ಥೆ ಮಾಡಿಕೊಡಿ ಎಂದು ಸೂಚನೆ ಕೊಟ್ಟರು‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.