ETV Bharat / entertainment

ಪ್ರಮೋದ್ ಶೆಟ್ಟಿ ಅಭಿನಯದ 'ಜಲಂಧರ'ನಿಗೆ‌ ಸಿಕ್ತು ಶರಣ್ ಸಾಥ್: ಸಂತೆಯ ದಾರಿಯಲಿ ಸಾಂಗ್​ ನೋಡಿ - JALANDHARA

ಜಲಂಧರ ಚಿತ್ರದಿಂದ 'ಸಂತೆಯ ದಾರಿಯಲಿ' ಎಂಬ ಹಾಡೊಂದು ಅನಾವರಣಗೊಂಡಿದೆ.

Jalandhara film team
ಜಲಂಧರ ಚಿತ್ರತಂಡ (ETV Bharat)
author img

By ETV Bharat Entertainment Team

Published : Nov 7, 2024, 7:43 PM IST

'ಜಲಂಧರ', ಪ್ರಮೋದ್ ಶೆಟ್ಟಿ ನಾಯಕ ನಟನಾಗಿ ಅಭಿನಯಿಸುತ್ತಿರುವ ಎರಡನೇ ಸಿನಿಮಾ. 'ಲಾಫಿಂಗ್ ಬುದ್ಧ' ಚಿತ್ರದ ಮೂಲಕ ಮೊದಲ ಬಾರಿ ಪೂರ್ಣ ಪ್ರಮಾಣದ ನಾಯಕನಾಗಿ ಸಿನಿ ಪ್ರೇಮಿಗಳ ಮೆಚ್ಚುಗೆ ಗಳಿಸಿದ್ದ ಪ್ರಮೋದ್ ಶೆಟ್ಟಿ ಅವರೀಗ 'ಜಲಂಧರ' ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಬಹುತೇಕ ಶೂಟಿಂಗ್ ಮುಗಿಸಿರೋ ಜಲಂಧರ ಚಿತ್ರದ 'ಸಂತೆಯ ದಾರಿಯಲಿ' ಎಂಬ ಮನಮೋಹಕ ಹಾಡು ಅನಾವರಣಗೊಂಡಿದೆ.

ಈ ಹಾಡನ್ನು ಸ್ಯಾಂಡಲ್​ವುಡ್ ಅಧ್ಯಕ್ಷ ನಟ ಶರಣ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಸಾಥ್ ನೀಡಿದರು. ಸಾಹಿತಿ ಸುಪ್ರೀತ್ ಶರ್ಮಾ ಎಸ್ ಬರೆದು, ಜತಿನ್ ದರ್ಶನ್ ಸಂಗೀತ ನೀಡಿರುವ ಈ ಹಾಡನ್ನು ಹೆಸರಾಂತ ಗಾಯಕ ವಿಜಯ್ ಪ್ರಕಾಶ್ ಹಾಗೂ ಮಾಧುರಿ ಶೇಷಾದ್ರಿ ಹಾಡಿದ್ದಾರೆ. ಶೇಷ್ ರಾವ್ ಅವರ ನೃತ್ಯ ನಿರ್ದೇಶನದಲ್ಲಿ ಸ್ಟೆಪ್ ಅಪ್ ಲೋಕಿ ಹಾಗೂ ಆರೋಹಿತ ಗೌಡ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಗ್ರಾಮೀಣ ಸುಂದರ ಪರಿಸರದಲ್ಲಿ ಮೂಡಿಬಂದಿರುವ ಈ ಹಾಡಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಪ್ರಮೋದ್ ಶೆಟ್ಟಿ, ಲೋಕಿ, ರುಷಿಕಾ ರಾಜ್, ಆರೋಹಿತಾ ಗೌಡ, ಬಲ ರಾಜ್ವಾಡಿ, ರಘು ರಾಮನಕೊಪ್ಪ, ನವೀನ್ ಸಾಗರ್, ಪ್ರತಾಪ್, ಆದಿ ಕೇಶವರೆಡ್ಡಿ, ಭೀಷ್ಮ ರಾಮಯ್ಯ, ವಿಜಯರಾಜ್, ಪ್ರಸಾದ್, ವಿಶಾಲ್ ಪಾಟೀಲ್ ಮತ್ತು ಅಂಬು ಜಲಂಧರ್ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ: ಬರ್ತಡೇ ದಿನ ಕೈಯಲ್ಲಿ ರುಂಡ ಹಿಡಿದು ಬಂದ ಅನುಷ್ಕಾ ಶೆಟ್ಟಿ; 'ಘಾಟಿ' ಗ್ಲಿಂಪ್ಸ್​ ರಿಲೀಸ್​ ​

ಸ್ಟೆಪ್ ಅಪ್ ಪಿಕ್ಚರ್ಸ್ ಲಾಂಛನದಲ್ಲಿ ಮದನ್ ಎಸ್ ನಿರ್ಮಿಸಿರುವ ಈ ಚಿತ್ರಕ್ಕೆ ಚಂದ್ರಮೋಹನ್ ಸಿ ಎಲ್, ರಮೇಶ್ ರಾಮಚಂದ್ರ, ಪದ್ಮನಾಭನ್ ಮಂಗುದೊಡ್ಡಿ ಅವರ ಸಹ ನಿರ್ಮಾಣವಿದೆ. ರಶ್ಮಿತ್ ಕುಮಾರ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಇದನ್ನೂ ಓದಿ: ಸಲ್ಮಾನ್​ ಬೆನ್ನಲ್ಲೇ ಸೂಪರ್​ ಸ್ಟಾರ್ ಶಾರುಖ್​ ಖಾನ್​ಗೂ ಕೊಲೆ ಬೆದರಿಕೆ: ಎಫ್​​ಐಆರ್​ ದಾಖಲು

ಹಲವು ಚಿತ್ರಗಳಲ್ಲಿ ಕ್ರಿಯೇಟಿವ್ ಹೆಡ್ ಹಾಗೂ ಸಹ ನಿರ್ದೇಶಕರಾಗಿ ಕೆಲಸ ಮಾಡಿ ಅನುಭವವಿರುವ ವಿಷ್ಣು ವಿ ಪ್ರಸನ್ನ "ಜಲಂಧರ" ಚಿತ್ರದ ನಿರ್ದೇಶಕರು. ರಂಗಭೂಮಿ ಹಿನ್ನೆಲೆಯಿರುವ ನಟ ಸ್ಟೆಪ್ ಆಫ್ ಲೋಕಿ‌ "ಜಲಂಧರ" ಚಿತ್ರದ ಕಥೆ ಬರೆದಿದ್ದು, ಚಿತ್ರಕಥೆಯನ್ನು ವಿಷ್ಣು ವಿ ಪ್ರಸನ್ನ ಹಾಗೂ ಅಕ್ಷಯ್ ಕುಮಾರ್ ಬರೆದಿದ್ದಾರೆ. ಸಂಭಾಷಣೆ ಶ್ಯಾಮ್ ಸುಂದರ್ ಅವರದ್ದು. ಛಾಯಾಗ್ರಹಣವನ್ನು ಕೇರಳ ಮೂಲದ ಸರಿನ್ ರವೀಂದ್ರನ್ ಮತ್ತು ವಿದ್ಯಾ ಶಂಕರ್ ಪಿ ಎಸ್ ಹಾಗೂ ಸಂಪೂರ್ಣ ಸಂಗೀತ ನಿರ್ದೇಶನವನ್ನು ಯುವ ಸಂಗೀತ ನಿರ್ದೇಶಕ ಜಿ. ಜತಿನ್ ದರ್ಶನ್ ನಿರ್ವಹಿಸಿದ್ದಾರೆ. ವೆಂಕಿ ಯು ಡಿ ವಿ ಸಂಕಲನ ಮಾಡಿದ್ದಾರೆ. ಸದ್ಯದಲ್ಲೇ ಈ ಚತ್ರ ತೆರಗೆ ಬರಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.