ETV Bharat / state

ಚಿತ್ರದಲ್ಲಿ ಅರಳಿದ ಭಗವದ್ಗೀತೆ: ಇಂಡಿಯಾ ಬುಕ್ ಆಫ್ ರೆಕಾರ್ಡ್​ನಲ್ಲಿ ದಾಖಲೆ ನಿರ್ಮಿಸಿದ ಬಾಲಕ

ಸ್ವರೂಪ ಅಧ್ಯಯನ ಕೇಂದ್ರದ ವಿದ್ಯಾರ್ಥಿ ಪ್ರಸನ್ನ ಕುಮಾರ್ ಭಗವದ್ಗೀತೆಯ 700 ಶ್ಲೋಕಗಳನ್ನು ಚಿಹ್ನೆಗಳಲ್ಲಿ ಬರೆದು ಇಂಡಿಯಾ ಬುಕ್​ ಆಫ್​ ರೆಕಾರ್ಡ್​ನಲ್ಲಿ ದಾಖಲೆ ನಿರ್ಮಿಸಿದ್ದಾರೆ. ಮಂಗಳೂರು ಪ್ರತಿನಿಧಿ ವಿನೋದ್ ಪುದು ಅವರಿಂದ ವಿಶೇಷ ವರದಿ ಇಲ್ಲಿದೆ.

2-YEAR-OLD BOY CREATED A RECORD IN INDIA BOOK OF RECORDS
ಇಂಡಿಯಾ ಬುಕ್ ಆಫ್ ರೆಕಾರ್ಡ್​ನಲ್ಲಿ ದಾಖಲೆ ನಿರ್ಮಿಸಿದ 12 ವರ್ಷದ ಬಾಲಕ (ETV Bharat)
author img

By ETV Bharat Karnataka Team

Published : 2 hours ago

Updated : 2 hours ago

ಮಂಗಳೂರು: ಭಗವದ್ಗೀತೆಯನ್ನು ವಿಭಿನ್ನ ರೀತಿಯಲ್ಲಿ ಬರೆದು ಹಲವರು ಸಾಧನೆ ಮಾಡಿದ್ದಾರೆ. ಆದರೆ ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದ ವಿದ್ಯಾರ್ಥಿಯೊಬ್ಬ ಚಿತ್ರದ ಮೂಲಕ ಭಗವದ್ಗೀತೆ ರಚಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್​ನಲ್ಲಿ ದಾಖಲೆ ಮಾಡಿದ್ದಾನೆ.

ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದಲ್ಲಿ ವಿಶಿಷ್ಟ ರೀತಿಯಲ್ಲಿ ನೀಡುವ ಶಿಕ್ಷಣದಿಂದ ಇಲ್ಲಿನ ಹಲವು ವಿದ್ಯಾರ್ಥಿಗಳು ಹಲವು ಸಾಧನೆ ಮಾಡಿದ್ದಾರೆ, ದಾಖಲೆಗಳನ್ನು ಬರೆದಿದ್ದಾರೆ. ಇದೀಗ ಇದೇ ಅಧ್ಯಯನ ಕೇಂದ್ರದ ವಿದ್ಯಾರ್ಥಿ ಪ್ರಸನ್ನ ಕುಮಾರ್ ಹೊಸ ಸಾಧನೆ ಮಾಡಿದ್ದಾನೆ.

ಇಂಡಿಯಾ ಬುಕ್ ಆಫ್ ರೆಕಾರ್ಡ್​ನಲ್ಲಿ ದಾಖಲೆ ನಿರ್ಮಿಸಿದ 12 ವರ್ಷದ ಬಾಲಕ (ETV Bharat)

ಪ್ರಸನ್ನ ಕುಮಾರ್ ಡಿ.ಪಿ. ಶಿವಮೊಗ್ಗದ ಹೊಳೆಹೊನ್ನೂರಿನ ಪಂಪಾಪತಿ ಮತ್ತು ನಂದಿನಿ ದಂಪತಿಯ ಪುತ್ರ. 12 ವರ್ಷದ ಪ್ರಸನ್ನ ಕುಮಾರ್ ಡಿ.ಪಿ. ರಾಷ್ಟ್ರೋತ್ಥಾನ ವಿದ್ಯಾಲಯ ಶಿವಮೊಗ್ಗದಲ್ಲಿ 6ನೇ ತರಗತಿ ಕಲಿತ ಬಳಿಕ ಸ್ವರೂಪ ಅಧ್ಯಯನ ಕೇಂದ್ರ ಸೇರಿದ್ದ. ಸ್ವರೂಪ ಅಧ್ಯಯನ ಕೇಂದ್ರದಲ್ಲಿ ಸೇರಿದ ಒಂದು ವರ್ಷದಲ್ಲಿಯೇ ಚಿತ್ರದಿಂದ ಭಗವದ್ಗೀತೆ ಬರೆದು ಇಂಡಿಯಾ ಬುಕ್ ಅಪ್ ರೆಕಾರ್ಡ್​ನಲ್ಲಿ ದಾಖಲೆ ಬರೆದಿದ್ದಾನೆ. ಇಂಡಿಯಾ ಬುಕ್ ಅಫ್ ರೆಕಾರ್ಡ್​ನಲ್ಲಿ ಐಬಿಆರ್ ಅಚೀವರ್ ದಾಖಲೆ ಬರೆಯಲಾಗಿದೆ.

ಚಿತ್ರದ ಮೂಲಕ ಬರೆದ ಭಗವದ್ಗೀತೆಯ 700 ಶ್ಲೋಕಗಳನ್ನು 1400 ಗೆರೆಯಲ್ಲಿ ಬರೆಯಲಾಗಿದೆ. ಇದರಲ್ಲಿ 84,426 ಚಿತ್ರವನ್ನು ಬಿಡಿಸಲಾಗಿದೆ. ಎರಡೂವರೆ ತಿಂಗಳ ಕಾಲ ರಾತ್ರಿ ಹಗಲು ಈ ಚಿತ್ರದ ಮೂಲಕ ಭಗವದ್ಗೀತೆ ಬರೆಯಲು ಈ ಬಾಲಕ ಶ್ರಮಪಟ್ಟಿದ್ದಾನೆ. 2024 ಆಗಸ್ಟ್​ 29 ರಂದು ಬಾಲಕನಿಗೆ ಇಂಡಿಯಾ ಬುಕ್ ಅಫ್ ರೆಕಾರ್ಡ್​ನಲ್ಲಿ ದಾಖಲೆ ಸಿಕ್ಕಿದೆ.

ಈ ಬಗ್ಗೆ ಮಾತನಾಡಿದ ಪ್ರಸನ್ನ ಕುಮಾರ್, "ನಾನು ಚಿತ್ರದ ಮೂಲಕ ಭಗವದ್ಗೀತೆ ಬರೆದು ದಾಖಲೆ ಸಂಪೂರ್ಣಗೊಳಿಸಿದ್ದೇನೆ. ಇದರಿಂದ ನನ್ನ ಏಕಾಗ್ರತೆ ಹೆಚ್ಚಾಗಿದೆ. ಇದು ನನ್ನ ಸ್ವರೂಪದ ಸಂಕೇತ ಭಾಷ್ಯದಲ್ಲಿ ಬರೆಯಲಾಗಿದೆ. ಈ ದಾಖಲೆಯನ್ನು 84,426 ಚಿತ್ರಗಳ ಮೂಲಕ ಮುಗಿಸಿದ್ದೇನೆ. ಇದಕ್ಕೆ ಗೋಪಾಡ್ಕರ್ ಸರ್ ಹಾಗೂ ಸ್ವರೂಪ ಅಧ್ಯಯನ ಕೇಂದ್ರ ನನ್ನನ್ನು ಬಹಳಷ್ಟು ಪ್ರೋತ್ಸಾಹಿಸಿದ್ದಾರೆ. ಅವರು ನನಗೆ ಕಲಿಯುವ ಶಕ್ತಿ ನೀಡಿದರು. ಇದರಿಂದ ನನ್ನ ಏಕಾಗ್ರತೆ ಮತ್ತು ಆತ್ಮವಿಶ್ವಾಸ ಹೆಚ್ಚಾಗಿದೆ. ಮತ್ತೊಮ್ಮೆ ವಿಶ್ವ ದಾಖಲೆ ಮಾಡಲು ನಾನು ತಯಾರಾಗಿದ್ದೇನೆ. ಭಗವದ್ಗೀತೆ ಸಂಸ್ಕೃತದಲ್ಲಿ ಇದೆ. ಇದು ಇಂಗ್ಲಿಷ್‌ಗೆ ಭಾಷಾಂತರ ಮಾಡಲಾಗಿದೆ. ಇಂಗ್ಲಿಷ್ ಅಕ್ಷರಗಳಿಗೆ ನಮ್ಮ ಸ್ವರೂಪದಲ್ಲಿ ಪ್ರತಿ ಅಕ್ಷರಕ್ಕೆ ಪ್ರತ್ಯೇಕ ಚಿಹ್ನೆ ಇದೆ. ಇದರಿಂದ ಒಂದು ಭಾಷೆ ರೂಪಿಸಿದೆ. ನಾನು ಚಿತ್ರಗಳನ್ನು ನೀಡಿ ಇದನ್ನು ಗಿನ್ನೆಸ್​ ರೆಕಾರ್ಡ್​ನಲ್ಲಿ ದಾಖಲಿಸಿದ್ದೇನೆ" ಎಂದರು.

ಸ್ವರೂಪ ಅಧ್ಯಯನ ಕೇಂದ್ರದ ಸಂಸ್ಥಾಪಕ ಗೋಪಾಡ್ಕರ್ ಮಾತನಾಡಿ "ಸ್ವರೂಪ ಅಧ್ಯಯನ ಕೇಂದ್ರ ಕಲಾ ಶಾಲೆ ಅಲ್ಲ. ಆದರೆ, ಪ್ರತಿಯೊಬ್ಬರೂ ಕಲಾವಿದರಾಗುವುದು ಮುಖ್ಯ. ಸ್ವರೂಪ ಅಧ್ಯಯನದಲ್ಲಿ ಕಲಿಕೆಯ ವಿಧಾನದಿಂದ, ವಿದ್ಯಾರ್ಥಿಗಳು ಕನಿಷ್ಟ 10 ದಾಖಲೆಗಳನ್ನಾದರೂ ಹೊಂದುತ್ತಾರೆ. ಇದರಿಂದ ಅವರು ಕಲಾ ನೈಪುಣ್ಯವನ್ನು ಪಡೆಯುವ ಜೊತೆಗೆ, SSLC ಪರೀಕ್ಷೆಯಲ್ಲೂ ಉತ್ತಮ ಅಂಕಗಳನ್ನು ಗಳಿಸುತ್ತಾರೆ. ನಾವು ಹತ್ತನೇ ತರಗತಿ ಪಾಠವನ್ನು ಒಮ್ಮೆ ಓದಿ, ಅದನ್ನು ಕಲಿಯಲು ಅವರಿಗೆ ಉತ್ತಮ ಶಿಕ್ಷಣ ನೀಡುತ್ತೇವೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಕನಿಷ್ಠ 10 ಪ್ರತಿಭೆಗಳು ಬೆಳೆಯುತ್ತವೆ. ಈ ತರಗತಿಯಲ್ಲಿರುವ ವಿದ್ಯಾರ್ಥಿಗಳಿಗೆ 35 ಪ್ರತಿಭೆಗಳಿವೆ. ಇದರಿಂದ, ದೇಶದ ಎಲ್ಲ ವಿದ್ಯಾರ್ಥಿಗಳು ಕಲಾವಿದರಾಗಲು ಸಿದ್ಧರಾಗುತ್ತಾರೆ. ಪ್ರಸನ್ನ ಕುಮಾರ್ ಚಿತ್ರದ ಮೂಲಕ ಭಗವದ್ಗೀತೆಯನ್ನು ಸೂಕ್ಷ್ಮವಾಗಿ ಮಾಡಿದ್ದಾನೆ" ಎಂದು ಹೇಳಿದರು.

ಇದನ್ನೂ ಓದಿ: ಗಾಲ್ಫ್ ಕಾರ್ಟ್ ಚಲಾಯಿಸಿ ದಾಖಲೆ ಬರೆದ ಮುರುಗೇಶ್ ನಿರಾಣಿಯ 3 ವರ್ಷದ ಮೊಮ್ಮಗ

Last Updated : 2 hours ago
ETV Bharat Logo

Copyright © 2024 Ushodaya Enterprises Pvt. Ltd., All Rights Reserved.