ಮೈಸೂರು: ನಗರದಲ್ಲಿ 20,000ಕ್ಕೂ ಅಧಿಕ ಅಕ್ರಮ ನೀರು ನಲ್ಲಿಗಳ ಸಂಪರ್ಕ ಇದೆ. ಅವುಗಳ ಕಡಿವಾಣಕ್ಕೆ 2 ತಂಡ ರಚನೆ ಮಾಡುತ್ತಿದ್ದೇವೆ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ ಹೇಳಿದರು.
ರಾಜ್ಯದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾದ ಮೈಸೂರು 18 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಈ ಜನಸಂಖ್ಯೆಗೆ ಅನುಗುಣವಾಗಿ ನೀರಿನ ವ್ಯವಸ್ಥೆ ಮಾಡಲು ಸಾಧ್ಯವಾಗುತ್ತಿಲ್ಲ. ಬಡಾವಣೆಗಳಲ್ಲಿ ಅನಧಿಕೃತವಾಗಿ ಸಂಪರ್ಕಗಳನ್ನು ಹೊಂದಿರುವುದೇ ಅದಕ್ಕೆ ಕಾರಣ ಎಂದರು.
ನಗರದಲ್ಲಿ 1.40 ಸಾವಿರ ರೆಗ್ಯೂಲರ್ ಸಂಪರ್ಕಗಳಿದ್ದು, 20,000-22,000 ಅಕ್ರಮ ನೀರಿನ ಸಂಪರ್ಕಗಳಿವೆ. ಅವುಗಳ ಪತ್ತೆಗೆ 2 ಈಸ್ಟ್ ಮತ್ತು ವೆಸ್ಟ್ ತಂಡಗಳಾಗಿ (ಸ್ಕ್ವಾಡ್ ತಂಡ) ರಚಿಸಿ ಕಾರ್ಯಾಚರಣೆ ನಡೆಸಲು ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದರು.